Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ajinkya Rahane: ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡದಿದ್ರೂ, ಟಿ20 ತಂಡದಲ್ಲಾದ್ರೂ ಸ್ಥಾನ ನೀಡಿ ಎಂಬಂತೆ ಬ್ಯಾಟ್ ಮಾಡಿದ ರಹಾನೆ

ಟೀಮ್ ಇಂಡಿಯಾದ ಪರ 100 ಟೆಸ್ಟ್‌ ಪಂದ್ಯಗಳನ್ನು ಆಡುವ ಕನಸು ಕಂಡಿದ್ದ, ಅಜಿಂಕ್ಯ ರಹಾನೆ ಆಸೆ ಕೊಂಚ ದೂರ ಸರಿದಂತೆ ಕಾಣುತ್ತಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಅವರ ಅಬ್ಬರ ಮಾತ್ರ ಜೋರಾಗಿದೆ. ದೇಶೀಯ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಅವರು ಆರ್ಭಟಿಸಿದ್ದಾರೆ. ರಹಾನೆ ಸೈಯದ್‌ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ.

ಬೆಂಗಳೂರಿನ ಹೊರ ವಲಯದಲ್ಲಿರುವ ಆಲೂರು ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ವಿದರ್ಭ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 221 ರನ್‌ ಸಢಶರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 19.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 224 ರನ್‌ ಸೇರಿಸಿ ಜಯ ಸಾಧಿಸಿ, ಸೈಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮುಂಬೈ ಉಪಾಂತ್ಯ ಪಂದ್ಯದಲ್ಲಿ ಬರೋಡಾ ವಿರುದ್ಧ ಡಿಸೆಂಬರ್‌ 13 ರಂದು ಆಡಲಿದೆ.

Ajinkya Rahane Shines with Explosive 84 as Mumbai Advances to Syed Mushtaq Ali Trophy Semi-Finals

ವಿದರ್ಭ ಭರ್ಜರಿ ಆರಂಭ

ವಿದರ್ಭ ತಂಡದ ಪರ ಅಥರ್ವ್‌ ತೈಡೆ ಹಾಗೂ ಭರವಸೆಯ ಆಟಗಾರ ಕರುಣ್ ನಾಯರ್‌ (26) ಮೊದಲ ವಿಕೆಟ್‌ಗೆ 60 ರನ್‌ ಸೇರಿಸಿತು. ಮೂರನೇ ವಿಕೆಟ್‌ಗೆ ಅಥರ್ವ್‌ ಹಾಗೂ ಅಪೂರ್ವ ವಾಂಖಡೆ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿ 81 ರನ್ ಸೇರಿಸಿತು. ಆರಂಭಿಕರಾಗಿ ಬ್ಯಾಟ್ ಮಾಡಿದ ಅಥರ್ವ್ 41 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 66 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಪೂರ್ವ ವಾಂಖಡೆ (51) ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ಶುಭಂ ದುಬೆ (43) ತಂಡಕ್ಕೆ ಆಧಾರವಾದರು.

ಅಮೋಘ ಜೊತೆಯಾಟ

ಬೃಹತ್‌ ಮೊತ್ತವನ್ನು ಹಿಂಬಾಲಿಸಿದ ಮುಂಬೈ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪೃಥ್ವಿ ಶಾ ಹಾಗೂ ಅಜಿಂಕ್ಯ ರಹಾನೆ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 83 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಆರಂಭಿಕ ಪೃಥ್ವಿ ಶಾ 5 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 49 ರನ್‌ ಬಾರಿಸಿ ಮಿಂಚಿದರು. ಭರವಸೆಯ ಆಟಗಾರ ಅಜಿಂಕ್ಯ ರಹಾನೆ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 84 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಟಿ20 ಕ್ರಿಕೆಟ್‌ ತಂಡದಲ್ಲಿ ತಮ್ಮನ್ನು ಪರಿಗಣಿಸುವಂತೆ ರಹಾನೆ ಬ್ಯಾಟ್ ಮಾಡಿದರು.

Ajinkya Rahane Shines with Explosive 84 as Mumbai Advances to Syed Mushtaq Ali Trophy Semi-Finals

ಮುಂಬೈ ಪರ ಶಿವಂ ದುಬೆ ಹಾಗೂ ಸೂರ್ಯಾಂಶ್ ಶೆಡ್ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಶಿವಂ ದುಬೆ ಅಜೇಯ 37, ಸೂರ್ಯಾಂಶ್ ಶೆಡ್ಗೆ ಅಜೇಯ 36 ರನ್‌ ಸಿಡಿಸಿ ಮಿಂಚಿದರು.

ಮುಂಬೈ ಪರ ಅಜಿಂಕ್ಯ ರಹಾನೆ ಆಡಿದ 7 ಪಂದ್ಯಗಳಲ್ಲಿ 4 ಅರ್ಧಶತಕ ಸೇರಿದಂತೆ 334 ರನ್‌ ಸಿಡಿಸಿದ್ದಾರೆ. ಈ ಮೂಲಕ ಮುಂಬೈ ಪರ ಅಧಿಕ ರನ್‌ ಸ್ಕೋರ್‌ ಆಗಿದ್ದಾರೆ.

Story first published: Wednesday, December 11, 2024, 20:20 [IST]
Other articles published on Dec 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+