ಕೊಹ್ಲಿಯ ಗೈರಲ್ಲಿ ಇದನ್ನು ಪ್ರಯತ್ನಿಸಲೇ ಬೇಡಿ: ರಹಾನೆಗೆ ಸಲಹೆ ನೀಡಿದ ಬುಕನಾನ್

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪೂರ್ಣ ಪ್ರಮಾಣದ ಸರಣಿ ವಿಶ್ವದ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕಾತುರತೆಯನ್ನು ಸೃಷ್ಠಿಸಿದೆ. ಅದರಲ್ಲೂ ಟೆಸ್ಟ್ ಸರಣಿಯ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗುತ್ತಿರುವುದು ಚರ್ಚೆಯ ಕೇಂದ್ರಬಿಂದುವಾಗಿದೆ.
ವಿರಾಟ್ ಕೊಹ್ಲಿ ಅಂತಿಮ ಮೂರು ಪಂದ್ಯಗಳಲ್ಲಿ ಗೈರಾಗುತ್ತಿರುವ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಹಾಗೂ ಅಲ್ಲಿನ ಮಾಜಿ ಕ್ರಿಕೆಟಿಗರು ಸಾಕಷ್ಟು ಕೇಂದ್ರೀಕರಿಸುತ್ತಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಆಸ್ಟ್ರೇಲಿಯಾ ತಂಡದ ಮಾಜಿ ಕೋಚ್ ಜಾನ್ ಬುಕನಾನ್ ಕೂಡ ಈ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾಗೆ ದೊಡ್ಡ ಹಿನ್ನೆಡೆ
ಜಾನ್ ಬುಕನಾನ್ ಕೂಡ ವಿರಾಟ್ ಕೊಹ್ಲಿಯ ಅಲಭ್ಯತೆ ಟೀಮ್ ಇಂಡಿಯಾಗೆ ದೊಡ್ಡ ಹಿನ್ನೆಡೆಯಾಗಲಿದೆ ಎಂದಿದ್ದಾರೆ. ಎಎನ್‌ಐಗೆ ಪ್ರತಿಕ್ರಿಯಿಸಿರುವ ಬುಕನಾನ್ "ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುತ್ತಿರುವುದು ದೊಡ್ಡ ಹಿನ್ನೆಡೆಯಾಗಲಿದೆ" ಎಂದಿದ್ದಾರೆ.

ಅತ್ಯುತ್ತಮ ಆಟಗಾರನನ್ನು ಕಳೆದುಕೊಳ್ಳಲಿದೆ
"ಭಾರತ ಕ್ರಿಕೆಟ್ ತಂಡ ಅವರ ಉತ್ಸಾಹ, ಸ್ಪರ್ಧಾತ್ಮಕತೆ, ತಂಡವಾಗಿ ಅವರು ಏನು ಮಾಡಬಹುದು ಎಂಬ ವಿಶ್ವಾಸವನ್ನು ಕಳೆದುಕೊಳ್ಳಲಿದೆ. ಇದಕ್ಕೂ ಹೆಚ್ಚಿನದಾಗಿ ಅವರು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರನ್ನು ಕಳೆದುಕೊಳ್ಳಲಿದ್ದಾರೆ" ಎಂದು ವಿರಾಟ್ ಅಲಭ್ಯತೆಯ ಬಗ್ಗೆ ಹೇಳಿದ್ದಾರೆ.

ಪಿತೃತ್ವದ ರಜೆಯಲ್ಲಿ ಕೊಹ್ಲಿ ತವರಿಗೆ
ಈ ಸಂದರ್ಭದಲ್ಲಿ ನಾಯಕನಾಗಿ ಅಂತಿಮ 3 ಪಂದ್ಯಗಳನ್ನು ಮುನ್ನಡೆಸಲಿರುವ ರಹಾನೆಗೆ ಬುಕನಾನ್ "ರಹಾನೆ ವಿರಾಟ್ ಕೊಹ್ಲಿಯಂತಾಗುವ ಪ್ರಯತ್ನವನ್ನು ನಡೆಸಬಾರದು. ಆತ ಕೊಹ್ಲಿ ಆಗಲಾರ. ಆ ಪ್ರಯತ್ನವನ್ನು ಕೂಡ ನಡೆಸಬಾರದು. ಆತನ ಮೊದಲ ಕರ್ತವ್ಯ ರನ್ ಗಳಿಸುವುದಾಗಿರಬೇಕು. ಈ ಮೂಲಕ ಇತರರಿಗೆ ಮಾದರಿಯಾಗಬೇಕು" ಎಂದಿದ್ದಾರೆ ಜಾನ್ ಬುಕನಾನ್.

ಪಿತೃತ್ವದ ರಜೆಯಲ್ಲಿ ಕೊಹ್ಲಿ ತವರಿಗೆ
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮೊದಲನೆ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಆಡಿಲೆಟ್‌ಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಪಿತೃತ್ವದ ರಜೆಯ ಹಿನ್ನೆಲೆಯಲ್ಲಿ ಕೊಹ್ಲಿ ತವರಿಗೆ ಮರಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications