Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಶ್ರೀಲಂಕಾ: ನಿವೃತ್ತಿ ನಂತರ ಟೆಸ್ಟ್ ಕಾಮೆಂಟರಿ ಪದಾರ್ಪಣೆಗೆ ಅಜಿಂಕ್ಯ ರಹಾನೆ ಸಜ್ಜು

ನವದೆಹಲಿ, ಆಗಸ್ಟ್ 12: ಭಾರತ ತಂಡದ ಮಾಜಿ ಆಟಗಾರ ಮತ್ತು ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಟೆಸ್ಟ್ ವೀಕ್ಷಕ ವಿವರಣೆಗಾರರಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಪಂದ್ಯವು ಆಗಸ್ಟ್ 15 ರಿಂದ ಆಗಸ್ಟ್ 27 ರವರೆಗೆ ನಡೆಯಲಿದೆ. ರಹಾನೆ ಇತ್ತೀಚೆಗೆ ತಮ್ಮ 18 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಸಕ್ರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ರಹಾನೆ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದು, ತಮ್ಮ ಕ್ರಿಕೆಟ್ ಅನುಭವವನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ಹಂಚಿಕೊಳ್ಳಲಿದ್ದಾರೆ. ಭಾರತಕ್ಕಾಗಿ 85 ಟೆಸ್ಟ್‌ಗಳನ್ನು ಆಡಿದ ಅನುಭವಿ ಆಟಗಾರ ರಹಾನೆ, 12 ಶತಕ ಮತ್ತು 26 ಅರ್ಧ ಶತಕಗಳೊಂದಿಗೆ 5,077 ರನ್‌ಗಳನ್ನು ಗಳಿಸಿದ್ದಾರೆ. ಕೆಂಪು ಚೆಂಡಿನ ಕ್ರಿಕೆಟ್, ಪಂದ್ಯದ ಪರಿಸ್ಥಿತಿಗಳು ಮತ್ತು ಆಟದ ಸೂಕ್ಷ್ಮತೆಗಳ ಬಗ್ಗೆ ಅವರ ಆಳವಾದ ತಿಳುವಳಿಕೆಯು ತಮ್ಮ ಹೊಸ ಕ್ರಿಕೆಟ್ ಪಯಣಕ್ಕೆ ವಿಶಿಷ್ಟ ಆಯಾಮವನ್ನು ನೀಡುತ್ತದೆ, ಏಕೆಂದರೆ ಅವರು ಟೆಸ್ಟ್ ಪಂದ್ಯವನ್ನು ರೂಪಿಸುವಲ್ಲಿ ಏನು ನಡೆಯುತ್ತದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಹತ್ತಿರದಿಂದ ನೋಟವನ್ನು ನೀಡಲು ಪ್ರಮುಖ ಕ್ಷಣಗಳು, ತಂತ್ರಗಳು ಮತ್ತು ಸ್ಪರ್ಧೆಗಳನ್ನು ವಿಶ್ಲೇಷಿಸುತ್ತಾರೆ.

vs

ತಾವು ತೆಗೆದುಕೊಳ್ಳುತ್ತಿರುವ ಈ ಹೊಸ ಹೊಣೆ ಬಗ್ಗೆ ಮಾತನಾಡಿದ ರಹಾನೆ, "ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲೈವ್‌ನಲ್ಲಿ ಭಾರತದ ಶ್ರೀಲಂಕಾ ಪ್ರವಾಸಕ್ಕಾಗಿ ನನ್ನ ಟೆಸ್ಟ್ ಕಾಮೆಂಟರಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಟೆಸ್ಟ್ ಕ್ರಿಕೆಟ್ ನಮ್ಮ ಕ್ರೀಡೆಯ ಉತ್ತುಂಗವಾಗಿದೆ, ಮತ್ತು ಇಷ್ಟು ವರ್ಷಗಳ ಕಾಲ ಈ ಸ್ವರೂಪದಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರ, ಈಗ ನನಗೆ ಆಟವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಸೌಭಾಗ್ಯ ಬಂದಿದೆ," ಎಂದರು.

ಮಾಜಿ ಭಾರತೀಯ ಆಟಗಾರನಾಗಿ, ತಮ್ಮ ಸುದೀರ್ಘ ಕ್ರಿಕೆಟಿಂಗ್ ಅನುಭವವನ್ನು ಬಳಸಿಕೊಂಡು ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ವಿವರಿಸಲು ಮತ್ತು ಸಂಕೀರ್ಣ ವಿಷಯಗಳನ್ನು ಅಭಿಮಾನಿಗಳಿಗೆ ಸರಳ ಪದಗಳಲ್ಲಿ ವಿವರಿಸಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. 'ಕ್ರಿಕೆಟ್ ಆಟದ ಅನುಭವವನ್ನು ಅಭಿಮಾನಿಗಳಿಗೆ ಮತ್ತಷ್ಟು ಉಣಬಡಿಸಲು ಮತ್ತು ಮೈದಾನದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಅವರಿಗೆ ಆಳವಾದ ತಿಳುವಳಿಕೆಯನ್ನು ನೀಡಲು ಆಶಿಸುತ್ತೇನೆ" ಎಂದು ಅವರು ಸೇರಿಸಿದರು.

ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದ ಚೀಫ್ ರೆವಿನ್ಯೂ ಆಫೀಸರ್ ಮತ್ತು ಬಿಸಿನೆಸ್ ಹೆಡ್, ಸ್ಪೋರ್ಟ್ಸ್ ಮತ್ತು ಇಂಟರ್‌ನ್ಯಾಷನಲ್, ರಾಜೇಶ್ ಕೌಲ್ ಕೂಡ ರಹಾನೆ ಅವರನ್ನು ಸ್ವಾಗತಿಸಿ, "ಅಜಿಂಕ್ಯ ರಹಾನೆ ಅವರು ತಮ್ಮ ಸ್ಥಿರತೆ, ಚೇತರಿಕೆ ಹಾಗೂ ಆಟದ ಬಗ್ಗೆ ಅವರಿಗಿರುವ ಅಪಾರ ಜ್ಞಾನ ಮತ್ತು ಅನುಭವ ಅದ್ಭುತ. ಅವರು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್‌ನಲ್ಲಿ ತಮ್ಮ ಟೆಸ್ಟ್ ಕಾಮೆಂಟರಿ ಪದಾರ್ಪಣೆ ಮಾಡುತ್ತಿರುವಾಗ, ವೀಕ್ಷಕರು ತಮಗೆ ಚೆನ್ನಾಗಿ ಅರಿತಿರುವ ಕ್ರಿಕೆಟ್ ಬಗ್ಗೆ ಅವರ ದೃಷ್ಟಿಕೋನವನ್ನು ಕೇಳಲು ಸಾಧ್ಯವಾಗುತ್ತದೆ. ಭಾರತದ ಶ್ರೀಲಂಕಾ ಪ್ರವಾಸಕ್ಕಾಗಿ ನಮ್ಮ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿ ಅವರನ್ನು ಪಡೆದಿರುವುದು ನಮಗೆ ಸಂತೋಷ ತಂದಿದೆ" ಎಂದರು.

ಅಜಿಂಕ್ಯ ರಹಾನೆ ನಿವೃತ್ತಿ ಘೋಷಣೆ

ಈ ಹಿಂದೆ, ರಹಾನೆ ಅವರು ದಿ ಹಂಡ್ರೆಡ್ ಸ್ಪರ್ಧೆಯ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದಾಗ ಜುಲೈ 30 ರಂದು ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಸಮುದಾಯವನ್ನು ಬೆಚ್ಚಿ ಬೀಳಿಸಿದ್ದರು. ರಹಾನೆ ಅವರು ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಭಾರತ ತಂಡದಲ್ಲಿ ಪುನರಾಗಮನದ ಯಾವುದೇ ಭರವಸೆ ಇಲ್ಲದ ಕಾರಣ, ರಹಾನೆ ನಿವೃತ್ತಿ ಘೋಷಿಸಿದರು. ಆದರೆ ಈಗ, ರಹಾನೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ.

ತರುವಾಯ, ರಹಾನೆ ಅವರು ನಿವೃತ್ತಿ ಘೋಷಿಸಿದ 8 ದಿನಗಳ ನಂತರ 2026ರ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ನಲ್ಲಿ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ಪರ ಸಹಿ ಹಾಕಿದರು. ಇದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹೊರತುಪಡಿಸಿ ಬೇರೆ ಫ್ರಾಂಚೈಸ್ ಲೀಗ್‌ಗೆ ಇದು ಅವರ ಮೊದಲ ಪ್ರವೇಶ.

Story first published: Wednesday, August 12, 2026, 16:58 [IST]
Other articles published on Aug 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+