For Quick Alerts
ALLOW NOTIFICATIONS  
For Daily Alerts
 

ಕೌಂಟಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ಸ್ಟಾರ್ ಕ್ರಿಕೆಟಿಗ ಅಜಿಂಕ್ಯಾ ರಹಾನೆ

ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಫಾರ್ಮ್ ಕೊರತೆಯ ಕಾರಣಕ್ಕೆ ಭಾರತ ತಂಡದಿಂದ ಹೊರಬಿದ್ದಿದ್ದರು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ನಲ್ಲಿಯೂ ಭಾರತದ ಪಾಲಿಗೆ ಬೆನ್ನಲುಬಾಗಿ ನಿಂತರು. ರಹಾನೆಗೆ ಉತ್ತಮ ಬೆಂಬಲ ದೊರೆಯದ ಕಾರಣ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದರೂ ಅವರ ಆಟಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಈ ಆಟದಿಂದಾಗಿ ರಹಾನೆ ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಜಿಂಕ್ಯಾ ರಹಾನೆ ತೆರಳುವುದು ಖಚಿತವಾಗಿದ್ದು ಖಾಯಂ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದಲ್ಲಿ ರಹಾನೆಗೆ ತಂಡದ ನಾಯಕತ್ವ ದೊರೆತರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ರಹಾನೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ರಹಾನೆ ಇಂಗ್ಲೆಂಡ್‌ನಲ್ಲಿ ಕೌಂಟಿ ಆಡಲು ನಿರ್ಧರಿಸಿದ್ದಾರೆ.

Ajinkya Rahane will play county for Leicestershire West Indies tour

ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ಮುಗಿಸಿದ ಬಳಿಕ ಇಂಗ್ಲೀಶ್ ಕೌಂಟಿಯ ಡಿವಿಶನ್ 2 ವಿಭಾಗದಲ್ಲಿ ಲಿಸೆಸ್ಟರ್‌ಶೈರ್ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡದ ಬಳಿಕ ಅಜಿಂಕ್ಯಾ ರಹಾನೆ ಕೌಂಟಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಎದುರುನೋಡುತ್ತಿದ್ದಾರೆ.

ಅಂದಹಾಗೆ ರಹಾನೆ ಅವರು ಜನವರಿಯಲ್ಲಿಯೇ ಲಿಸೆಸ್ಟರ್‌ಶೈರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ ಅವರ ಐಪಿಎಲ್ ಅವಧಿಯ ನಂತರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎಂಟು ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಸಂಪೂರ್ಣ ರಾಯಲ್ ಲಂಡನ್ ಕಪ್ (ದೇಶೀಯ 50-ಓವರ್ ಟೂರ್ನಿ) ಆಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಕಾರಣ ರಹಾನೆಯ ಈ ಒಪ್ಪಂದದ ಲೆಕ್ಕಾಚಾರ ಬುಡಮೇಲಾಯಿತು. ಹೀಗಾಗಿ ಐಪಿಎಲ್ ಮುಕ್ತಾಯದ ತಕ್ಷಣಕ್ಕೆ ಕೌಂಟಿ ತಂಡವನ್ನು ಸೇರಿಕೊಳ್ಳಲು ರಹಾನೆಗೆ ಸಾಧ್ಯವಾಗಲಿಲ್ಲ.

ಅಜಿಂಕ್ಯಾ ರಹಾನೆ ಎರಡನೇ ಬಾರಿಗೆ ಕೌಂಟಿಯಲ್ಲಿ ಭಾಗಿಯಾಗಲು ಸಿದ್ಧವಾಗುತ್ತಿದ್ದಾರೆ. ಇದಕ್ಕೂ ಮುನ್ನ 2019ರ ಋತುವಿನಲ್ಲಿ ವಿಶ್ವಕಪ್ ತಂಡದಿಂದ ಕೈಬಿಟ್ಟ ಬಳಿಕ ಹ್ಯಾಂಪ್‌ಶೈರ್ ಪರವಾಗಿ ಆಡಿದ ರಹಾನೆ ಈಗ ಲಿಸೆಸ್ಟರ್‌ಶೈರ್ ಪರವಾಗಿ ಆಡಲಿದ್ದಾರೆ. ರಹಾನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಭಾರತದ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 89 ರನ್ ಗಳಿಸಿದ್ದರು. ಈವರೆಗೆ ಭಾರತದ ಪರವಾಗಿ 83 ಟೆಸ್ಟ್‌ಗಳಲ್ಲಿ ಆಡಿರುವ ಅವರು 5,000 ರನ್ ಗಳಿಸಿದ್ದಾರೆ.

ಬಹುತೇಕ ಭಾರತೀಯ ಕ್ರಿಕೆಟಿಗರು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಹಿನ್ನೆಲೆಯಲ್ಲಿ ಏಕದಿನ ಮಾದರಿಗೆ ಗಮನವನ್ನು ಬದಲಾಯಿಸಿದರೆ ರಹಾನೆ ಸುದೀರ್ಘ ಮಾದರಿಗೆ ಸಂಪೂರ್ಣ ಚಿತ್ತ ನೆಟ್ಟಿದ್ದಾರೆ. ಭಾರತೀಯ ದೇಶೀಯ ಋತುವಿಗೆ ಮರಳುವ ಮುನ್ನ ಹೆಚ್ಚು ರೆಡ್ ಬಾಲ್ ಮಾದರಿಯಲ್ಲಿ ಆಡಲಿದ್ದಾರೆ. ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೂಡ ಇರುವ ಹಿನ್ನೆಲೆಯಲ್ಲಿ ರಹಾನೆ ತಮ್ಮ ಸಿದ್ಧತೆ ಮುಂದುವರಿಸಲಿದ್ದಾರೆ.

Story first published: Sunday, June 18, 2023, 21:08 [IST]
Other articles published on Jun 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+