ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅರ್ಜಿ

ಮುಂಬೈ, ಜನವರಿ 24: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರು ಶುಕ್ರವಾರ (ಜನವರಿ 24) ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಸದ್ಯ ಅಜಿತ್, ಆಯ್ಕೆ ಸಮಿತಿಯ ಅಧ್ಯಕ್ಷರ ಸ್ಥಾನಕ್ಕಿರುವ ಮುಂಚೂಣಿ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದಾರೆ.
ಮುಂಬೈ ಹಿರಿಯ ಆಯ್ಕೆದಾರರ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಅಜಿತ್ ಅಗರ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ವಿಕೆಟ್ ಸಾಧನೆ ಹೊಂದಿದ್ದಾರೆ. 42ರ ಹರೆಯದ ಅಜಿತ್ ಹೆಸರಿನಲ್ಲಿ 26 ಟೆಸ್ಟ್, 191 ಏಕದಿನ ಮತ್ತು 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಿಗೆ 349 ವಿಕೆಟ್ ದಾಖಲೆಯಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯರಲ್ಲಿ ಈಗಲೂ ಅಜಿತ್ ಅಗರ್ಕರ್ (288 ವಿಕೆಟ್‌ಗಳು) ಮೂರನೇ ಸ್ಥಾನದಲ್ಲಿದ್ದಾರೆ. ಈ ಸಾಧನೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕನ್ನಡಿಗರಾದ ಅನಿಲ್ ಕುಂಬ್ಳೆ (334 ವಿಕೆಟ್‌ಗಳು) ಮತ್ತು ಜಾವಗಲ್ ಶ್ರೀನಾಥ್ (315 ವಿಕೆಟ್‌ಗಳು) ಇದ್ದಾರೆ.
ಅಷ್ಟೇ ಅಲ್ಲ ತಾನು ಆಡುತ್ತಿದ್ದಾಗ ವಿಶ್ವದ ವೇಗಿಗಳಲ್ಲಿ ಗುರುತಿಸಿಕೊಂಡಿದ್ದ ಅಗರ್ಕರ್, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ದಾಖಲೆ ಈಗಲೂ ಉಳಿಸಿಕೊಂಡಿದ್ದಾರೆ. ಬರೀ 23 ಪಂದ್ಯಗಳಲ್ಲಿ ಅಜಿತ್ ಈ ಸಾಧನೆ ತೋರಿದ್ದರು. ಇದೇ ದಾಖಲೆಗಾಗಿ ಅಗ್ರ ಸ್ಥಾನದಲ್ಲಿರುವ ಅಜಂತ ಮೆಂಡಿಸ್ 19 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಮುರಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications