Ajit Agarkar: ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ ಬಿಸಿಸಿಐ ಬಿಗ್ ಗಿಫ್ಟ್ ನೀಡುವ ಸಾಧ್ಯತೆ
ಟೀಮ್ ಇಂಡಿಯಾ ಪುರುಷರ ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ದೊಡ್ಡ ಗಿಫ್ಟ್ ನೀಡುವ ಸಾಧ್ಯತೆ ಇದೆ. ಅಜಿತ್ ಅಗರ್ಕರ್ ಅವರ ಅಧಿಕಾರ ಅವಧಿಯನ್ನು ಬಿಸಿಸಿಐ ವಿಸ್ತರಿಸುವ ಸಾಧ್ಯತೆ ಇದೆ. ಇವರು ಆಯ್ಕೆದಾರರಾದ ಮೇಲೆ ಟೀಮ್ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಹೀಗಾಗಿ ಬಿಸಿಸಿಐ ಇವರಿಗೆ ದೊಡ್ಡ ಉಡುಗೊರೆ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ.
ಬಿಸಿಸಿಐ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಒಪ್ಪಂದವು ಜೂನ್ 2026ರಲ್ಲಿ ಕೊನೆಗೊಳ್ಳಲಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಅಗರ್ಕರ್ ಅವರ ಒಪ್ಪಂದವನ್ನು ಇನ್ನೊಂದು ವರ್ಷ ಮುಂದೂಡುವ ಸಾಧ್ಯತೆ ಇದೆ. ಇವರ ಒಪ್ಪಂದವನ್ನು 2027ರ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಅಗರ್ಕರ್ ಅವರ ಒಪ್ಪಂದವನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗುವುದು, ಜೂನ್ 2027 ರವರೆಗೆ ವಿಸ್ತರಿಸಲಾಗುವುದು. ಪ್ರಸ್ತುತ, ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಬಿಸಿಸಿಐ ಮೂಲಗಳು ಹೇಳೋದೇನು?
ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಅಗರ್ಕರ್ ಅವರ ಅಧಿಕಾರದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಯಾವುದೇ ಹಿಂಜರಿಕೆ ತೋರುತ್ತಿಲ್ಲ. ಹೀಗಾಗಿ ಇನ್ನೊಂದು ವರ್ಷ ಇವರೇ ಮುಂದುವರಿಯಬೇಕು ಎಂದು ಮಂಡಳಿ ಆಶಿಸುತ್ತಿದೆ. ಐಪಿಎಲ್ ವೇಳೆಯಲ್ಲಿ ಬಿಸಿಸಿಐ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದೆ. ಇವರು 2024 ಟಿ20 ವಿಶ್ವಕಪ್, 2025ರ ಏಕದಿನ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ ಗೆದ್ದ ತಂಡವನ್ನು ಅಜಿತ್ ಅಗರ್ಕರ್ ಆಯ್ಕೆ ಮಾಡಿದ್ದಾರೆ.
ಅಗರ್ಕರ್ ಸಾಧನೆ
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ 26 ಟೆಸ್ಟ್ ಪಂದ್ಯಗಳಲ್ಲಿ 58 ವಿಕೆಟ್ ಪಡೆದಿದ್ದಾರೆ. ಅಲ್ಲದೆ 571 ರನ್ ಕಲೆ ಹಾಕಿದ್ದಾರೆ. ಈ ವೇಳೆ 160 ರನ್‌ಗೆ 8 ವಿಕೆಟ್ ಪಡೆದಿದ್ದು ಶ್ರೇಷ್ಠ ಸಾಧನೆ. ಇನ್ನು 191 ಏಕದಿನ ಪಂದ್ಯಗಳಲ್ಲಿ 288 ವಿಕೆಟ್ ಪಡೆದಿದ್ದು, 42 ರನ್‌ಗೆ 6 ವಿಕೆಟ್ ಪಡೆದಿದ್ದು ಉತ್ತಮ ದಾಖಲೆ. ಏಕದಿನ ಕ್ರಿಕೆಟ್‌ನಲ್ಲಿ 1269 ರನ್ ಸಿಡಿಸಿದ್ದಾರೆ. ಇನ್ನು ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅಜಿತ್, 3 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications