Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC finalನಲ್ಲಿ ಅತ್ಯಧಿಕ ರನ್, ವಿಕೆಟ್ ಪಡೆಯುವವರ ಊಹಿಸಿದ ಅಜಿತ್ ಅಗರ್ಕರ್

Ajit Agarkar predicts highest wicket-taker and run-scorer of WTC final

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕಿನ್ನು ಕೇವಲ ಕೆಲವೇ ದಿನಗಳು ಬಾಕಿ ಉಳಿದಿವೆ. ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್‌ಬೌಲ್‌ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ.

ವಿಶ್ವದ ಬಲಿಷ್ಠ ತಂಡಗಳ ನಡುವಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರು ಗೆಲ್ಲುವ ತಂಡ, ಅತ್ಯಧಿಕ ರನ್ ಗಳಿಸುವವರು, ಅತೀ ಹೆಚ್ಚು ವಿಕೆಟ್‌ ಗಳಿಸುವವರ ಬಗ್ಗೆ ತಮ್ಮ ಊಹೆ ತಿಳಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಅಜಿತ್ ಅಗರ್ಕರ್, 'ಯಾರು ಗೆಲ್ಲಲಿದ್ದಾರೆ ಅನ್ನೋದನ್ನು ಹೇಳೋದು ಕಷ್ಟ. ನನಗನ್ನಿಸುವ ಪ್ರಕಾರ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಗೆಲ್ಲುವ ಫೇವರಿಟ್ ಅನ್ನಿಸಬಹುದು,' ಎಂದಿದ್ದಾರೆ. ಬಹುತೇಕ ಹೆಚ್ಚಿನ ಕ್ರಿಕೆಟಿಗರು ನ್ಯೂಜಿಲೆಂಡ್ ಗೆಲ್ಲುತ್ತೆ ಎಂದೇ ಹೇಳಿದ್ದಾರೆ.

'ಮುಂಚೂಣಿ ರನ್ ಸರದಾರರ ಬಗ್ಗೆ ಹೇಳುವುದಾದ್ರೆ ನಾನು ವಿರಾಟ್ ಕೊಹ್ಲಿ ಕಡೆಗೆ ಹೋಗುತ್ತೇನೆ. ಇಂಗ್ಲೆಂಡ್‌ನಲ್ಲಿ ಹೇಗೆ ಆಡ್ತಾರೆ ಅನ್ನೋದನ್ನು ಅವರು ಈ ಹಿಂದೆ ತೋರಿಸಿಕೊಟ್ಟಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅತ್ಯಧಿಕ ವಿಕೆಟ್ ಸರದಾರರಾಗಿ ಕಾಣಿಸಿಕೊಳ್ಳುತ್ತಾರೆ. ಶಮಿ ಭಾರತದ ನಂ.1 ಬೌಲರ್. ಅವರಿಗೆ ಇಂಗ್ಲೆಂಡ್‌ ಪರಿಸ್ಥಿತಿಗಳು ಸಂಗತಿ ಅನ್ನಿಸಲಾರದು,' ಎಂದು ಅಗರ್ಕರ್ ಅಭಿಪ್ರಾಯಿಸಿದ್ದಾರೆ.

Story first published: Tuesday, June 8, 2021, 18:26 [IST]
Other articles published on Jun 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+