Akash deep: ಟ್ರಾವಿಸ್ ಹೆಡ್ ಔಟ್ ಮಾಡುವುದು ಹೇಗೆ: ಇಲ್ಲದೆ ಆಕಾಶ್ ದೀಪ್ ಉತ್ತರ
ಭಾರತ ಹಾಗೂ ಆಸ್ಟ್ರೇಲಿಯಾ ನಡವುಣ ಬಾರ್ಡರ್ ಗವಾಸ್ಕರ್ ಸರಣಿಯ ಸದ್ಯ ನಡೆಯುತ್ತಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡುತ್ತಿವೆ. ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವುದರಿಂದ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ವೇಳೆ ಪ್ರವಾಸಿ ತಂಡಕ್ಕೆ ತಲೆ ನೋವಾಗಿರುವ ಒಬ್ಬ ಪ್ಲೇಯರ್ ಎಂದರೆ ಟ್ರಾವಿಸ್ ಹೆಡ್. ಈ ಸರಣಿಯಲ್ಲಿ ಮಾತ್ರವಲ್ಲ ಒಟ್ಟಾರೆ ಭಾರತದ ವಿರುದ್ಧದ ಇವರ ಪ್ರದರ್ಶನ, ಟೀಮ್ ಇಂಡಿಯಾ ಬೌಲರ್‌ಗಳ ಚಿಂತನೆಗೆ ಹಚ್ಚಿದೆ.
ಟ್ರಾವಿಸ್ ಹೆಡ್ ಪ್ರಸಕ್ತ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರನ್ನು ಕಟ್ಟಿಹಾಕುವುದೇ ದೊಡ್ಡ ಸವಾಲಾಗಿದೆ. ಪರ್ತ್‌ನಿಂದ ಹಿಡಿದು ಬ್ರಿಸ್ಬೇನ್ ವರೆಗೂ ಟ್ರಾವಿಸ್ ಹೆಡ್ ಟೀಮ್ ಇಂಡಿಯಾಕ್ಕೆ ಸವಾಲು ಎಸೆಯುತ್ತಲೇ ಬಂದಿದ್ದಾರೆ. ಆದರೆ ಇವರ ಆರ್ಭಟಕ್ಕೆ ಬ್ರೇಕ್ ಹಾಕಲು, ರೋಹಿತ್ ಪಡೆಯ ಬೌಲರ್ಸ್ ಹಿಂದೆ ಬಿದ್ದಿದ್ದಾರೆ. ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದ ಬೌಲರ್ ಆಕಾಶ್ ದೀಪ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಆಕಾಶ್ ದೀಪ್ ವರಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ನಾವು ನಮ್ಮ ಯೋಜನೆಯನ್ನು ಮೈದಾನದಲ್ಲಿ ಅಚ್ಚು ಕಟ್ಟಾಗಿ ನಿರ್ವಹಿಸಲು ಶ್ರಮಿಸಲಿದ್ದಾರೆ. ನಮ್ಮ ಬೌಲಿಂಗ್‌ನಲ್ಲಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸುವತ್ತ ಚಿತ್ತ ನೆಟ್ಟಿದ್ದೇವೆ. ಪಿಚ್ ಹಾಗೂ ಪರಿಸ್ಥಿತಿಗಳು ಹೇಗೆ ವರ್ತಿಸುತ್ತವೆಯೋ ಅದಕ್ಕೆ ಪೂರಕವಾಗಿ ನಾವು ಬೌಲಿಂಗ್ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಆಕಾಶ್ ದೀಪ್ ಹೇಳಿದ್ದೇನು?
ಟೀಮ್ ಇಂಡಿಯಾವನ್ನು ಕಾಡುವ ಟ್ರಾವಿಸ್ ಹೆಡ್ ಬಗ್ಗೆಯೂ ಆಕಾಶ್ ದೀಪ್ ಮಾಡನಾಡಿದ್ದಾರೆ. ಟ್ರಾವಿಸ್ ಹೆಡ್ ಶಾರ್ಟ್ ಬೌಲ್ ಎಸೆತಗಳನ್ನು ಎದುರಿಸುವಲ್ಲಿ ಕೊಂಚ ವಿಚಲಿತರಾಗುತ್ತಾರೆ ಎಂದು ನಾನು ಭಾವಿಸುವೆ. ನಾವು ಮುಂದಿನ ಟೆಸ್ಟ್‌ನಲ್ಲಿ ಅವರಿಗೆ ಕ್ರೀಸ್‌ನಲ್ಲಿ ನೆಲಕಚ್ಚಿ ಬ್ಯಾಟ್ ಮಾಡಲು ಬಿಡುವುದಿಲ್ಲ. ಟ್ರಾವಿಸ್ ಹೆಡ್ ವಿರುದ್ಧ ನಾವು ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಬೌಲ್ ಮಾಡುತ್ತೇವೆ. ಈ ಮೂಲಕ ಅವಕಾಶಗಳು ಸಿಗಬಹುದು ಎಂದು ತಿಳಿಸಿದ್ದಾರೆ.

ಇನ್ನು ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವಾಗ ಎದುರಿಸಬಹುದಾದ ಸಮಸ್ಯೆಗಳ ಕುರಿತು ಮಾತನಾಡಿದ ಆಕಾಶ್ ದೀಪ್, ನಾವು ಹೆಚ್ಚಾಗಿ ಕ್ರಿಕೆಟ್‌ನ್ನು ಭಾರತದಲ್ಲಿ ಆಡಿದ್ದೇವೆ. ನಾವು ಅಲ್ಲಿ ಶಾರ್ಟ್ ಲೆಂಥ್ ಮೇಲೆ ಬೌಲಿಂಗ್ ಮಾಡಬಲ್ಲೆವು. ಆದರೆ ಇಲ್ಲಿ ಬೌಲಿಂಗ್ ನಡೆಸುವುದು ಸವಾಲಾಗಿದೆ. ವಿಕೆಟ್ ಅಥವಾ ಪರಿಸ್ಥಿತಿ ಏನೇ ಇರಲಿ, ವೇಗದ ಬೌಲರ್ ಆಗಿ ಶಿಸ್ತುಬದ್ಧವಾಗಿ ದಾಳಿ ನಡೆಸುವುದೇ ಮುಖ್ಯ ಎಂದು ಹೇಳಿದ್ದಾರೆ.
ಬ್ರಿಸ್ಬೇನ್‌ನಲ್ಲಿ ಮಿಂಚು
ಆಕಾಶ್ ದೀಪ್ ಸರಣಿಯ ಮೊದಲ ಪಂದ್ಯದಲ್ಲಿ ಗಬ್ಬಾ ಅಂಗಳದಲ್ಲಿ ಆಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ನಡೆಸಿದರು. ಇನ್ನು ಬ್ಯಾಟಿಂಗ್‌ನಲ್ಲಂತೂ ಮನಮೋಹಕ ಪ್ರದರ್ಶನ ನೀಡಿ ಅಬ್ಬರಿಸಿದರು. ಅಲ್ಲದೆ ಭಾರತ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಫಾಲೋ ಆನ್‌ನಿಂದ ಬಚಾವ್ ಆಗುವಲ್ಲಿ ಇವರ ಕೊಡುಗೆ ಅಪಾರ.
ಇಲ್ಲಿಯವರೆಗೆ ಆಕಾಶದೀಪ್ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ ಎಂಬುದು ಗಮನಾರ್ಹ. ಅವರು ಗಬ್ಬಾದಲ್ಲಿ ತಮ್ಮ ಏಕೈಕ ಪಂದ್ಯವನ್ನು ಆಡಿದರು. ಆಕಾಶ್ ಗಬ್ಬಾ ಟೆಸ್ಟ್ ನಲ್ಲಿ 3 ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications