Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

"ರೋಹಿತ್ ಶರ್ಮಾ ಬೇರೆ ತಂಡ ಸೇರುತ್ತಾರೆ, ಆದರೆ ಹರಾಜು ಅಂಗಳಕ್ಕೆ ಬರುವುದಿಲ್ಲ.."

ಮುಂಬೈ ಇಂಡಿಯನ್ಸ್‌ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ, ತಮ್ಮ ತವರು ತಂಡವನ್ನು ತೊರೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಹಲವು ತಂಡಗಳು ರೋಹಿತ್ ಬಿಡ್‌ ಅಖಾಡಕ್ಕೆ ಬಂದರೆ ಬಿಡ್ ಮಾಡಲು ತಯಾರಿ ನಡೆಸಿವೆ. ಈ ಲೀಸ್ಟ್‌ನಲ್ಲಿ ಆರ್‌ಸಿಬಿ ಸಹ ಇದೆ. ಇನ್ನು ಮುಂಬೈ ಇಂಡಿಯನ್ಸ್‌ ತಂಡ ಒಂದು ವೇಳೆ ರೋಹಿತ್‌ ಶರ್ಮಾ ಅವರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ, ಹರಾಜಿಗೂ ಮುನ್ನ ಅವರು ಬೇರೆ ತಂಡ ಸೇರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಕಳೆದ ಆವೃತ್ತಿಯ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗೆ ಇಳಿಸಿತು. ಅಲ್ಲದೆ ಗುಜರಾತ್‌ ಟೈಟನ್ಸ್‌ ನಿಂದ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಂಡ, ಅವರಿಗೆ ಪಟ್ಟ ಕಟ್ಟಲಾಯಿತು. ಹೀಗಾಗಿ ಮುಂಬೈ ಇಂಡಿಯನ್ಸ್ ಕ್ಯಾಂಪ್‌ನಲ್ಲಿ ಅಸಮಾಧಾನದ ಹೊಗೆ ಮನೆ ಮಾಡಿತ್ತು. ರೋಹಿತ್‌ ಶರ್ಮಾ ಬೇರೆ ತಂಡಗಳತ್ತ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಆಕಶ್‌ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

Akash Chopra Hints at Rohit Sharma s Exit from MI Suryakumar Yadav to Stay

ರೋಹಿತ್ ಬಿಡ್‌ ಅಂಗಳ ಪ್ರವೇಶಿಸುತ್ತಾರಾ?

ಆಕಾಶ್‌ ಚೋಪ್ರಾ ಅವರ ಪ್ರಕಾರ ರೋಹಿತ್ ಶರ್ಮಾ, ಟ್ರೆಡ್‌ ವಿಂಡೋ ಮೂಲಕ ಬೇರೆ ತಂಡವನ್ನು ಸೇರಬಹುದು ಎಂದು ತಿಳಿಸಿದ್ದಾರೆ. ರೋಹಿತ್ ಶರ್ಮಾ ಮುಂಬೈನಲ್ಲಿ ಇರುತ್ತಾರೋ ಅಥವಾ ಬೇರೆ ತಂಡ ಸೇರುತ್ತಾರೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ನನಗೆ ಅನಿಸಿದ ಪ್ರಕಾರ ರೋಹಿತ್ ಮುಂಬೈನಲ್ಲಿ ಇರಲು ಬಯಸುವುದಿಲ್ಲ. ಅವರನ್ನು ಬೇರೆ ತಂಡಗಳು ಟ್ರೇಡ್ ಮೂಲಕ ಖರೀದಿಸಬಹುದು. ಮುಂಬೈ ತಂಡದಿಂದ ರೋಹಿತ್‌ ಹೊರ ಬರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಆಕಾಶ್‌ ಚೋಪ್ರಾ ಹೇಳುವುದು ಏನು?

ನನಗೆ ಅನಿಸಿದ ಪ್ರಕಾರ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನಲ್ಲಿ ರಿಟೇನ್ ಆಗುತ್ತಾರೆ ಎಂಬ ವಿಶ್ವಾಸ ನನಗೆ ಇಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅವರನ್ನು ತಂಡ ರಿಲೀಸ್ ಮಾಡಬಹುದು ಎಂದು ಅನಿಸುತ್ತದೆ. ಅವರು ಟ್ರೆಡ್‌ ವಿಂಡೋ ಮೂಲಕ ಬೇರೆ ತಂಡ ಸೇರಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ರೋಹಿತ್ ಬಿಡ್ ಅಂಗಳಕ್ಕೆ ಬರುವುದು ಡೌಟ್. ನನಗೆ ಅನಿಸಿದ ಪ್ರಕಾರ ಮುಂಬೈ ಇಂಡಿಯನ್ಸ್‌ ಪರ ರೋಹಿತ್ ಇನಿಂಗ್ಸ್‌ ಕೊನೆಗೊಂಡಂತೆ ಕಾಣುತ್ತಿದೆ.

ಸೂರ್ಯ ಬಗ್ಗೆ ಚೋಪ್ರಾ ಹೇಳಿದ್ದೇನು?

ಆಕಾಶ್‌ ಚೋಪ್ರಾ ಬೇರೆ ಆಟಗಾರರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಸೂರ್ಯಕುಮಾರ್ ಯಾದವ್ ಮುಂಬೈ ಬಿಡುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸ್ಕ್ರೈ ಟ್ರೇಡ್ ಆಗುವ ಸಾಧ್ಯತೆ ಇಲ್ಲ. ಮುಂಬೈ ತಂಡ ಸೂರ್ಯ ಅವರನ್ನು ಬಿಡುವ ಯೋಚನೆ ಇಲ್ಲ. ಇನ್ನು ಯಾದವ ಅವರಿಗೂ ತಂಡವನ್ನು ತೊರೆಯುವ ಯೋಚನೆ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Story first published: Saturday, September 14, 2024, 9:31 [IST]
Other articles published on Sep 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+