Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನ್ನ ಈ ಪ್ರದರ್ಶನ ಕ್ಯಾನ್ಸರ್‌ ಪೀಡಿತ ಸಹೋದರಿಗೆ ಅರ್ಪಣೆ: ಆಕಾಶ್ ದೀಪ್

ಎಡ್ಜ್‌ಬಸ್ಟನ್‌ನಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿರುವಲ್ಲಿ ಹಲವು ಆಟಗಾರರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಇದರಲ್ಲಿ ನಾಯಕ ಶುಭಮನ್‌ ಗಿಲ್ ಕೊಡುಗೆ ಅಪಾರ. ಇವರು ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದೇ ಪಂದ್ಯದಲ್ಲಿ ಇವರಂತಯೇ ಇನ್ನು ಇಬ್ಬರು ಆಟಗಾರರು ತಮ್ಮ ಪ್ರದರ್ಶನದ ಬಲದಿಂದ ತಂಡಕ್ಕೆ ಆಧಾರವಾಗಿದ್ದಾರೆ. ಇದರಲ್ಲಿ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದ ಮೊಹಮ್ಮದ್ ಸಿರಾಜ್, ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದ ಆಕಾಶ್ ದೀಪ್ ಕೊಡುಗೆ ಅಪಾರ.

ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಬಳಿಸುವ ಮೂಲಕ, ಒಂದೇ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಸಾಧನೆ ಮಾಡಿದರು. ಇಂಗ್ಲೆಂಡ್‌ ನೆಲದಲ್ಲಿ ಮೊದಲ ಆಡುವ ಅವಕಾಶವನ್ನು ಪಡೆದ ಆಕಾಶ್ ದೀಪ್‌, ಜಸ್ಪ್ರೀತ್ ಬುಮ್ರಾ ಇಲ್ಲದೇ ಇರುವ ಕೊರತೆ ಕಾಣದಂತೆ ಬೌಲ್ ಮಾಡಿದರು. ಪಂದ್ಯದಲ್ಲಿ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿದ ಆಕಾಶ್ ದೀಪ್‌ ಅಬ್ಬರಿಸಿದರು. ಈ ಗೆಲುವಿನ ಬಳಿಕ ಆಕಾಶ್‌ ದೀಪ್‌ ಚೇತೇಶ್ವರ್ ಪೂಜಾರ ಅವರೊಂದಿಗೆ ಮಾತನಾಡಿದರು.

Akash Deep Dedicates Edgbaston Performance to Sister Battling Cancer

ಪೂಜಾರ ಅವದೊಂದಿಗೆ ಮಾತನಾಡಿರುವ ಆಕಾಶ್‌, ತಮ್ಮ ಗೇಮ್‌ ಪ್ಲ್ಯಾನ್‌ ಹೇಳಿಕೊಂಡರು. ಇದೇ ವೇಳೆ ಯಾವ ಆಟಗಾರರನ್ನು ಹೇಗೆ ಕಟ್ಟಿ ಹಾಕಬಹುದು ಎಂದು ಪ್ಲ್ಯಾನ್ ಮಾಡಿದ್ದಾಗಿ ತಿಳಿಸಿದರು. ಆಗ ಪೂಜಾರ ನಿಮ್ಮ ಕೈಯಲ್ಲಿ ಸ್ಟಂಪ್‌ ಹಾಗೂ ಚೆಂಡು ಇದೆ. ಇವುಗಳನ್ನು ಪಡೆದು ನೀವು ಮನೆಗೆ ಹೋದಲ್ಲಿ ಎಲ್ಲರೂ ಖುಷಿಯಾಗಬಹುದು ಎಂದು ಕೇಳಿದ್ರು. ಈ ಪ್ರಶ್ನೆ ಕಿವಿಗೆ ಬೀಳುತ್ತಲೆ ಆಕಾಶ್ ದೀಪ್ ಕೊಂಚ ಭಾವುಕರಾದರು.

ಕಳೆದ ಕೆಲವು ದಿನಗಳಿಂದ ನಾನು ಒಂದು ವಿಷಯವನ್ನು ಯಾರೊಂದಿಗೆ ಹೇಳಿಕೊಂಡಿಲ್ಲ. ಅದೆನಪ್ಪಾ ಅಂದರೆ ನನ್ನ ಸಹೋದರಿಗೆ ಕ್ಯಾನ್ಸರ್‌ ಇದೆ. ಅವಳು ಸದ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ನಾನು ಮೈದಾನದಲ್ಲಿ ಬೌಲಿಂಗ್ ಮಾಡುವಾಗ ಪ್ರತಿ ಎಸೆತದಲ್ಲೂ ಅವಳ ನೆನಪು ನನಗೆ ಬಹುವಾಗಿ ಕಾಡಿತು. ಮೈದಾನದಲ್ಲಿ ನಾನು ಅವಳನ್ನು ನೆನೆದು ಬೌಲಿಂಗ್ ಮಾಡಿದ್ದೇನೆ. ಹೀಗಾಗಿ ಎಡ್ಜ್‌ಬಸ್ಟ್‌ನಲ್ಲಿ ನೀಡಿದ ಪ್ರದರ್ಶನ ಅವಳಿಗೆ ಅರ್ಪಣೆ ಎಂದು ಆಕಾಶ್ ದೀಪ್ ಹೇಳಿಕೊಂಡಿದ್ದಾರೆ. ಈ ಗೆಲುವು ತಂಡದಲ್ಲಿ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದ್ದಾರೆ.

Akash Deep Dedicates Edgbaston Performance to Sister Battling Cancer

ಪಂಜಾಬ್‌ ಪರ ರಣಜಿ

ಆಕಾಶ್ ದೀಪ್‌ ಬೀಹಾರ ಮೂಲದವರು. ಅವರ ಮನೆಯಲ್ಲಿ ಕ್ರಿಕೆಟ್‌ ಆಡುತ್ತಿದ್ದೇನೆ ಎಂದು ಹೇಳಿರಲಿಲ್ಲ. ಪಶ್ಚಿಮ್ ಬಂಗಾಳ ರಣಜಿ ತಂಡಕ್ಕೆ ಸೆಲಕ್ಟ್ ಮಾಡಿದಾಗ, ಪಶ್ಚಿಮ್ ಬಂಗಾಳದಲ್ಲಿ ಕೆಲಸಕ್ಕೆ ಹೊರಟಿದ್ದಾಗಿ ಅವರು ತಿಳಿಸಿದ್ದರಂತೆ. ಇನ್ನು ನಮ್ಮ ಮನೆಯವರಿಗೆ ಕ್ರಿಕೆಟ್‌ ಎಂಬ ಕ್ರೀಡೆ ಇರುತ್ತದೆ ಎಂಬುದೇ ತಿಳಿದಿರಲಿಲ್ಲ. ಐಪಿಎಲ್‌ನಲ್ಲಿ ನಾನು ಬಿಕರಿ ಆದಾಗಲೇ ಅವರಿಗೆ ವಿಶ್ವಾಸ ಬಂದಿತು ಎಂದು ಆಕಾಶ್‌ ದೀಪ್‌ ತಮ್ಮ ನೆನಪಿನ ಬುತ್ತಿಯಲ್ಲಿನ ಸವಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

Story first published: Monday, July 7, 2025, 14:43 [IST]
Other articles published on Jul 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+