Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Gabba Test: ಆಕಾಶ್ ದೀಪ್ ಮೇಲೆ ವಿರಾಟ್ ಶ್ರೀರಕ್ಷೆ; ಆಸ್ಟ್ರೇಲಿಯಾಕ್ಕೆ ನಡುಕ!

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪುಟಿದೆದ್ದಿದೆ. ನಾಲ್ಕನೇ ದಿನದ ಆಟದಲ್ಲಿ ಭಾರತ ತಂಡ ಫಾಲೋ ಆನ್ ಭೀತಿ ತಪ್ಪಿಸಿ ಆಸ್ಟ್ರೇಲಿಯಾಕ್ಕೆ ಸವಾಲೊಡ್ಡುವ ಸ್ಥಿತಿ ತಲುಪಿತು. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 445 ರನ್ ಗಳಿಸಿತ್ತು. ಇದಾದ ಬಳಿಕ ಫಾಲೋ ಆನ್ ಅಪಾಯದಿಂದ ಪಾರಾಗಲು ಟೀಮ್ ಇಂಡಿಯಾ 246 ರನ್ ಗಳಿಸಬೇಕಿತ್ತು. ನಾಲ್ಕನೇ ದಿನದಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 252 ರನ್ ಕಲೆ ಹಾಕಿದ್ದು, ಇನ್ನೂ 193 ರನ್‌ಗಳ ಹಿಂದೆ ಇದೆ. ಇದೀಗ ಗಬ್ಬಾ ಟೆಸ್ಟ್ ಪಂದ್ಯ ಮುಗಿಲು ಒಂದು ದಿನದ ಆಟ ಬಾಕಿ ಉಳಿದಿದ್ದು, ಉಭಯ ತಂಡಗಳು ತಲಾ ಒಂದೊಂದು ಇನ್ನಿಂಗ್ಸ್ ಆಡಬೇಕಿದೆ. ಹೀಗಿರುವಾಗ ಈ ಪಂದ್ಯ ಡ್ರಾದತ್ತ ಸಾಗುತ್ತಿರುವಂತಿದೆ.

ಭಾರತ ಫಾಲೋ ಆನ್ ಭೀತಿ ತಪ್ಪಿಸಿ ಆಸ್ಟ್ರೇಲಿಯಾಕ್ಕೆ ಸವಾಲೊಡ್ಡಲು ಪ್ರಮುಖ ಕಾರಣವೆಂದರೆ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್. ಈ ಜೋಡಿ 39 ರನ್‌ಗಳ ಅಜೇಯ ಜೊತೆಯಾಟ ಆಡುವ ಮೂಲಕ ಭಾರತ ತಂಡವನ್ನು ಫಾಲೋ ಆನ್‌ನಿಂದ ಕಾಪಾಡಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಕಾಶ್ ದೀಪ್ 31 ಎಸೆತಗಳಲ್ಲಿ 27 ರನ್ ಮತ್ತು ಜಸ್ಪ್ರೀತ್ ಬುಮ್ರಾ 27 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಭಾರತ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಮಾಡದ ಕೆಲಸವನ್ನು ಬೌಲರ್‌ಗಳು ಮಾಡಿರುವುದು ಎಲ್ಲೆಡೆ ಮೆಚ್ಚುಗೆ ಕಾರಣವಾಗಿದೆ. ಅದರಲ್ಲೂ ಆಕಾಶ್ ದೀಪ್ ಬೌಲರ್ ಆಗಿದ್ದರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Akash Deep Delivers Stunning Batting with Virat Kohli s Bat in 3rd Test Against Australia

ಗಬ್ಬಾ ಮೈದಾನದಲ್ಲಿ ಆಸೀಸ್ ವೇಗಿಗಳ ಬೌಲಿಂಗ್‌ನಲ್ಲಿ ಆಕಾಶ್ ದೀಪ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ನಾಲ್ಕನೇ ದಿನದಾಟದಂದು ಭಾರತ ಫಾಲೋ ಆನ್ ಆಗಲಿದೆ ಎಂದು ಎಲ್ಲರೂ ಭಾವಿಸಿದರು. ಆದರೆ ಆಕಾಶ್ ದೀಪ್ ಜವಾಬ್ದಾರಿಯುತ ಬ್ಯಾಟಿಂಗ್ ಎಲ್ಲರ ಲೆಕ್ಕಚಾರವನ್ನು ಉಲ್ಟಾ ಮಾಡಿತು. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಆಕಾಶ್ ದೀಪ್ ಬೌಂಡರಿ ಹೊಡೆಯುವ ಮೂಲಕ ಭಾರತವನ್ನು ಫಾಲೋ ಆನ್ ನಿಂದ ಪಾರು ಮಾಡಿದರು. ಇದರೊಂದಿಗೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮಾಚರಣೆ ಕಂಡು ಬಂತು.

ಭಾರತ ಫಾಲೋ ಆನ್ ನಿಂದ ಪಾರಾಗುತ್ತಿದ್ದಂತೆ ಹೆಡ್‌ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ ಸಂಭ್ರಮಿಸಿದರು. ಆಕಾಶ್ ಇಲ್ಲಿಗೇ ನಿಲ್ಲದೆ, 75ನೇ ಓವರ್ ನಲ್ಲಿ ಬೌಂಡರಿ ನಂತರ ಸಿಕ್ಸರ್ ಕೂಡ ಬಾರಿಸಿ ಮೆಚ್ಚುಗೆ ಪಾತ್ರವಾದರು. ಈ ರೀತಿ ಆಕಾಶ್ ದೀಪ್ ಬ್ಯಾಟಿಂಗ್ ಮಾಡಲು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಶ್ರೀರಕ್ಷೆ ಕಾರಣ. ವಿಷಯವೆನೆಂದರೆ ವಿರಾಟ್ ಕೊಹ್ಲಿಯಿಂದ ಪಡೆದ ಬ್ಯಾಟ್‌ನಲ್ಲಿ ಆಕಾಶ್ ದೀಪ್ ಬೌಂಡರಿ, ಸಿಕ್ಸರ್ ಬಾರಿಸಿ ಭಾರತವನ್ನು ಫಾಲೋ ಆನ್ ನಿಂದ ಕಾಪಾಡಿದರು.

ಆಕಾಶ್ ಶೋ

ಗಬ್ಬಾ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸುವ ನಿರೀಕ್ಷೆಯಿತ್ತು. ಆದರೆ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಸೈಲೆಂಟಾಯಿತು. ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕವರ್ ಡ್ರೈ ಹೊಡೆಯಲು ಹೋಗಿ ಕೇವಲ 3 ರನ್‌ಗಳಿಗೆ ಔಟಾದರು. ಆದರೆ ವಿರಾಟ್ ಕೊಹ್ಲಿ ತಮ್ಮಿಂದ ಮಾಡಲು ಸಾಧ್ಯವಾಗದ್ದನ್ನು ಆಕಾಶ್ ದೀಪ್ ಅವರಿಂದ ಮಾಡಿಸಿದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಆಕಾಶ್ ದೀಪ್ ಅವರಿಗೆ ಒಂದು ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಅದೇ ಬ್ಯಾಟ್‌ನಲ್ಲಿ ಆಕಾಶ್ ದೀಪ್ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಸದ್ದು ಮಾಡಿದ್ದಾರೆ. ಆದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರಿಂದ ಸಾಧ್ಯವಾಗದ್ದನ್ನು ಆಕಾಶ್ ದೀಪ್ ಮಾಡಿದ್ದಾರೆ ಎಂದು ಗುಣಗಾನ ಮಾಡುತ್ತಿದ್ದಾರೆ.

ಕೊಹ್ಲಿ ಶಾಕ್

ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಆಕಾಶ್ ಸಿಕ್ಸರ್ ಬಾರಿಸಿದಾಗ ವಿರಾಟ್ ಕೊಹ್ಲಿ ಸಂತಸಕ್ಕೆ ಮಿತಿಯೇ ಇರಲಿಲ್ಲ. ಡ್ರೆಸ್ಸಿಂಗ್ ರೂಮಿನ ಬಾಲ್ಕನಿಯಲ್ಲಿ ವಿರಾಟ್ ಕೊಹ್ಲಿ ಅವರು ಸಿಕ್ಸರ್ ಬಾರಿಸಿದನ್ನು ನೋಡಿ ನಗತೊಡಗಿದರು. ಆಕಾಶ್ ಸಿಕ್ಸರ್‌ಗೆ ವಿರಾಟ್ ಚಪ್ಪಳೆ ತಟ್ಟುವ ಮೂಲಕ ಅಭಿನಂದಿಸಿದರು. ಕೊಹ್ಲಿ ಮಾತ್ರವಲ್ಲದೆ ರೋಹಿತ್ ಶರ್ಮಾ ಮತ್ತು ಇತರ ಆಟಗಾರರು ಆಕಾಶ್‌ ಬ್ಯಾಟಿಂಗ್ ಅನ್ನು ನೋಡಿ ಎಂಜಾಯ್ ಮಾಡಿದರು.

Story first published: Tuesday, December 17, 2024, 17:27 [IST]
Other articles published on Dec 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+