IND vs BAN: ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಭರ್ಜರಿ ಸಿಕ್ಸರ್ಸ್ ಸಿಡಿಸಿದ ಆಕಾಶ್ ದೀಪ್
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲರ್ ಆಕಾಶ್ ದೀಪ್ ಎಲ್ಲರ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉಡುಗೊರೆಯಾಗಿ ನೀಡಿದ ಬ್ಯಾಟ್‌ನಲ್ಲಿ ಆಕಾಶ್ ದೀಪ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಕಾಶ್ ದೀಪ್ ಅವರು ಎರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶಕೀಬ್ ಅಲ್ ಹಸನ್‌ಗೆ ನಡುಕ
ಬಾಂಗ್ಲಾದೇಶ ವಿರುದ್ದ ಎರಡನೇ ಟೆಸ್ಟ್‌ನ ಭಾರತದ ಮೊದಲ ಇನಿಂಗ್ಸ್‌ನ 34ನೇ ಓವರ್‌ನಲ್ಲಿ ಆಕಾಶ್ ದೀಪ್ ವಿರಾಟ್ ಅವರ ಬ್ಯಾಟ್‌ನಿಂದ ಸಿಕ್ಸರ್ ಬಾರಿಸಿದರು. ಬಾಂಗ್ಲಾದೇಶದ ಅನುಭವಿ ಸ್ಪಿನ್ ಬೌಲರ್ ಶಕೀಬ್ ಅಲ್ ಹಸನ್ ಅವರಿಗೆ ಎರಡು ಸಿಕ್ಸರ್ ಬಾರಿಸುವ ಮೂಲಕ ನಡುಕ ಹುಟ್ಟಿಸಿದರು. 34ನೇ ಓವರ್‌ನ ಶಕೀಬ್ ಅವರ ನಾಲ್ಕನೇ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ ಕ್ರೀಸ್‌ಗೆ ಬಂದ ಆಕಾಶ್ ದೀಪ್
ಐದನೇ ಎಸೆತದಲ್ಲಿ ಮಿಡ್ ಆನ್ ಮತ್ತು ಮಿಡ್ ವಿಕೆಟ್ ನಡುವೆ ಭರ್ಜರಿ ಸಿಕ್ಸರ್ ಬಾರಿಸಿದರು. ಇದಾದ ನಂತರ ಕೊನೆಯ ಎಸೆತದಲ್ಲಿಯೂ ಆಕಾಶ್ ಮಿಡ್ ಆನ್‌ನಲ್ಲಿ ಅದ್ಭುತ ಸಿಕ್ಸರ್ ಚಚ್ಚಿದರು.
ಈ ಓವರ್ ನಂತರ ಆಕಾಶ್ ತಮ್ಮ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಮೆಹದಿ ಹಸನ್ ಅವರು ಮೀರಜ್ ಎಸೆತದಲ್ಲಿ ಖಾದಿಲ್ ಅಹ್ಮದ್‌ಗೆ ಕ್ಯಾಚಿತ್ತು ಔಟಾದರು. ಇದರೊಂದಿಗೆ ಟೀಮ್ ಇಂಡಿಯಾಕ್ಕೆ ಆಕಾಶ್ ದೀಪ್ 5 ಎಸೆತಗಳಲ್ಲಿ 12 ರನ್ ಕೊಡುಗೆ ನೀಡಿದರು.
ಕೊಹ್ಲಿಗೆ ಸಂತಸ
ಆಕಾಸ್ ದೀಪ್ ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಬಾರಿಸಿದಾಗ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ನಗುತ್ತಿದ್ದರು. ವಿರಾಟ್ ಜೊತೆಗೆ ಅಲ್ಲಿದ್ದ ಇತರ ಆಟಗಾರರು ಕೂಡ ನಗುತ್ತಿದ್ದರು. ವಿರಾಟ್ ಅವರ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿರಾಟ್ ಗಿಫ್ಟ್
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಆಕಾಶ್ ದೀಪ್‌ಗೆ ಉಡುಗೊರೆಯಾಗಿ ನೀಡಿದ್ದರು. ಈ ಬಗ್ಗೆ ಆಕಾಶ್ ದೀಪ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೊಹ್ಲಿ ಕೊಟ್ಟಿರುವ ಬ್ಯಾಟ್ ಫೋಟೋವನ್ನು ಹಂಚಿಕೊಂಡಿದ್ದರು. ಫೋಟೋ ಮೇಲೆ 'ಧನ್ಯವಾದ ವಿರಾಟ್ ಭಯ್ಯಾ' ಎಂದು ಬರೆದುಕೊಂಡಿದ್ದರು. ಬಳಿಕ ಆಕಾಶ್ ಈ ಬ್ಯಾಟ್ ಹಿಡಿದು ಆಡುವುದಿಲ್ಲ, ಆದರೆ ಗೋಡೆಯ ಮೇಲೆ ಅಲಂಕರಿಸಿ ಇಡುವುದಾಗಿ ಹೇಳಿದ್ದರು. ಆದರೆ ಇಂದು ಆಕಾಶ್ ಅದೇ ಬ್ಯಾಟ್‌ನೊಂದಿಗೆ ಆಡಿ ಎರಡು ಅತ್ಯುತ್ತಮ ಸಿಕ್ಸರ್‌ಗಳನ್ನು ಹೊಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications