ಆಕಾಶ್ ದೀಪ್ ಚೊಚ್ಚಲ ಅರ್ಧಶತಕ: ಮೈದಾನದಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಶನಿವಾರ ಎರಡನೇ ಇನಿಂಗ್ಸ್ ಆರಂಭಿಸಿದೆ. ಈ ವೇಳೆ ಟೀಮ್ ಇಂಡಿಯಾ ಪರ ಶುಕ್ರವಾರ ನೈಟ್ ವಾಚ್‌ಮೆನ್ ಆಗಿ ಕ್ರೀಸ್‌ಗೆ ಇಳಿದಿದ್ದ ಆಕಾಶ್ ದೀಪ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಇಂಗ್ಲೆಂಡ್ ತಂಡದ ಬೌಲರ್‌ಗಳನ್ನು ಬಹುವಾಗಿ ಕಾಡಿದರು. ಮೂರನೇ ದಿನದಾಟದ ಮೊದಲಾವಧಿಯಲ್ಲಿ ಬೌಲರ್‌ಗಳಿಗೆ ನೆರವಾಗುತ್ತದೆ ಎಂಬ ಮಾತುಗಳು ಇದ್ದವು. ಆದರೆ ಆಕಾಶ್ ದೀಪ್ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಐದನೇ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಒಬ್ಬ ಪಕ್ಕಾ ಬ್ಯಾಟರ್ ರೀತಿ ಬ್ಯಾಟ್ ಮಾಡಿದರು. ಇಂಗ್ಲೆಂಡ್ ಬೌಲರ್‌ಗಳು ಆಕಾಶ್ ದೀಪ್ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಸಖತ್ ಆಗಿ ಉತ್ತರ ನೀಡಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ನೀಡಿದ್ದ ಅವಕಾಶವನ್ನು ಆಕಾಶ್ ದೀಪ್ ಎರಡೂ ಕೈಗಳಿಂದ ಬಳಸಿಕೊಂಡರು. ಇವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಬೆಳೆಸಲು ನೆರವು ನೀಡಿದರು. ಅಲ್ಲದೆ ಕೆಟ್ಟ ಎಸೆತಗಳನ್ನು ದಂಡಿಸುತ್ತಾ, ಸ್ಟ್ರೈಕ್ ರೋಟೆಟ್ ಮಾಡುತ್ತಾ ಸಾಗಿದರು. ಈ ಮೂಲಕ ಇಂಗ್ಲೆಂಡ್ ತಂಡದ ಚಿಂತೆಯನ್ನು ಹೆಚ್ಚಿಸಿದರು.

ನೈಟ್ ವಾಚ್‌ಮೆನ್ ಆಗಿ ಬ್ಯಾಟ್ ಮಾಡಿದ ಅಮೋಘ ಇನಿಂಗ್ಸ್ ಕಟ್ಟಿದರು. ಇವರು ಐದನೇ ಟೆಸ್ಟ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 94 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಾಯದಿಂದ 66 ರನ್ ಬಾರಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಆಕಾಶ್ ದೀಪ್, ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಕೊಂಡು 150 ಎಸೆತಗಳಲ್ಲಿ 107 ರನ್ ಸೇರಿಸಿತು. ಈ ಮೂಲಕ ಇಂಗ್ಲೆಂಡ್ ತಂಡದ ಬೌಲರ್‌ಗಳ ಚಿಂತೆಯನ್ನು ಹೆಚ್ಚಿಸಿದರು. ಇದು ಆಕಾಶ್ ದೀಪ್ ಅವರ ಟೆಸ್ಟ್ ಕ್ರಿಕೆಟ್‌ನ ಮೊದಲ ಅರ್ಧಶತಕ ಬಾರಿಸಿ ಮಿಂಚಿದರು.
ರೋಹಿತ್ ಉಪಸ್ಥಿತಿ
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ, ಇಂಗ್ಲೆಂಡ್ ತಲುಪಿದ್ದಾರೆ. ಈ ವೇಳೆ ರೋಹಿತ್ ಭಾರ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯವನ್ನು ನೋಡಲು ಓವಲ್ ಮೈದಾನಕ್ಕೆ ಬಂದ್ರು. ರೋಹಿತ್ ಶರ್ಮಾ ಮೈದಾನದ ಒಳಗೆ ಹೋಗುವಾಗಲೇ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಅಲ್ಲದೆ ಸೆಲ್ಫಿ ಹಾಗೂ ಆಟೋಗ್ರಾಫ್ ನೀಡುತ್ತಿರುವ ದೃಶ್ಯ ಕಂಡು ಬಂದಿದೆ. ಮುಂಬೈಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನೋಡಿ ಖುಷಿ ಪಟ್ಟರು. ಯಂಗ್ ಟೀಮ್ ಬೆಂಬಲಿಸಲು ರೋಹಿತ್ ಓವಲ್ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications