ಹ್ಯಾರಿ ಬ್ರೂಕ್‌ಗೆ ಏಟಿಗೆ, ತಿರುಗೇಟು ನೀಟಿದ ಆಕಾಶ್ ದೀಪ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಉಭಯ ತಂಡಗಳು ಮೊದಲ ಇನಿಂಗ್ಸ್‌ನಲ್ಲಿ ಸಮ ರನ್‌ಗಳನ್ನು ಕಲೆ ಹಾಕಿದ್ದು, ಎರಡನೇ ಇನಿಂಗ್ಸ್ ರೋಚಕತೆ ಹೆಚ್ಚಿಸಿತ್ತು. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಮೊದಲಾವಧಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿ ವಿಕೆಟ್‌ಗಳನ್ನು ನೀಡಿತು. ಈ ಅವಧಿಯಲ್ಲಿ ಆಕಾಶ್ ದೀಪ್ ಹಾಗೂ ಹ್ಯಾರಿ ಬ್ರೂಕ್ ನಡುವಿನ ಕಾಳಗ.
ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್ ಅಬ್ಬರಿಸಿದರು. ಈ ವೇಳೆ ಇವರು ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ್ದರು. ಇದು ಇವರ ನೈಜ್ಯ ಆಟವೂ ಆಗಿತ್ತು. ಆದರೆ ಇದಕ್ಕೆ ಬ್ರೇಕ್ ಹಾಕ ಬೇಕು ಎಂದೇ ಆಕಾಶ್ ದೀಪ್ ಸಹ ಭರ್ಜರಿ ಸೆಟ್ ಅಪ್ ಮಾಡಿದರು. ಆರಂಭದಲ್ಲಿ ಬ್ಯಾಟರ್ ರಿಸ್ಕ್ ತೆಗೆದುಕೊಂಡು ದೊಡ್ಡ ಶಾಟ್ ಬಾರಿಸಲು ಆಕಾಶ್ ಪ್ರೇರೆಪಿಸಿದರು.

ಹ್ಯಾರಿ ಬ್ರೂಕ್ ಬ್ಯಾಟ್ ಮಾಡಲು ಬಂದಾಗ, ಆಕಾಶ್ ದೀಪ್ ಮಾಸ್ಟರ್ ಪ್ಲ್ಯಾನ್ ಮಾಡಿದರು. ವಿಕೆಟ್ ಕೀಪರ್ ಅವರನ್ನು ವಿಕೆಟ್ ಹಿಂದೆ ನಿಲ್ಲುವಂತೆ ಸೂಚಿಸಿದರು. ಇದರಿಂದ ಬ್ರೂಕ್ ಕ್ರೀಸ್ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದರು. ಈ ವೇಳೆ ಬ್ರೂಕ್ ಸಹ ತಮ್ಮ ಕಲಾತ್ಮಕ ಆಟದ ಪ್ರದರ್ಶನ ನೀಡಿದರು.
ಬ್ರೂಕ್ ಆಟಕ್ಕೆ ಆಕಾಶ್ ಬ್ರೇಕ್
ಆಕಾಶ್ ದೀಪ್ ಹಾಗೂ ಹ್ಯಾರಿ ಬ್ರೂಕ್ ನಡುವಿನ ಕಾಳಗ ಈ ಪಂದ್ಯದಲ್ಲಿ ಕಂಡು ಬಂದಿತು. ಆಕಾಶ್ ದೀಪ್ ಇನಿಂಗ್ಸ್‌ನ 20ನೇ ಓವರ್ ಬೌಲ್ ಮಾಡಿದರು. ಈ ವೇಳೆ ಬ್ರೂಕ್ ನಾಲ್ಕು ಹಾಗೂ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಅಬ್ಬರಿಸಿದರು. ಅಲ್ಲದೆ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಆಕಾಶ್ ದೀಪ್ ಮೇಲೆ ಒತ್ತಡವನ್ನು ಹೇರುವ ತಂತ್ರ ಬ್ರೂಕ್ ಅವರದ್ದಾಗಿತ್ತು. ಆದರೆ 22ನೇ ಓವರ್‌ನ ಮೂರನೇ ಎಸೆತದಲ್ಲಿ ಆಕಾಶ್ ದೀಪ್ ಅಮೋಘ ದಾಳಿ ನಡೆಸಿ ಎದುರಾಳಿಗೆ ಖೆಡ್ಡಾ ತೋಡಿದರು.
ಆಕಾಶ್ ದೀಪ್ 22ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರೂಕ್ ಬಿಗ್ ಹಿಟ್ ಬಾರಿಸಲು ಮುಂದಾದರು. ಈ ವೇಳೆ ಆಕಾಶ್ ದೀಪ್ ಸ್ಟಂಪ್ ಮೇಲೆ ಚೆಂಡನ್ನು ಎಸೆದರು. ಈ ಎಸೆತವನ್ನು ಮಿಸ್ ಮಾಡಿ ಎಕ್ರಾಸ್‌ದ ಲೈನ್ ಸ್ವೀಪ್ ಮಾಡಲು ಹೋದರು. ಚೆಂಡು ಅವರನ್ನು ವಂಚಿಸಿ ವಿಕೆಟ್‌ಗೆ ಮುತ್ತಿಟ್ಟಿತು. ಈ ವಿಕೆಟ್ ಪಡೆಯುತ್ತಿದ್ದಂತೆ ಆಕಾಶ್ ದೀಪ್ ಅಬ್ಬರಿಸಿದರು. ಅಂತಿಮವಾಗಿ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 23 ರನ್ ಬಾರಿಸಿದರು. ಆದರೆ ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾ ವೇಗಿ ಸಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications