For Quick Alerts
ALLOW NOTIFICATIONS  
For Daily Alerts
 

Akib Nabi: ದುಲೀಪ್‌ ಟ್ರೋಫಿಯಲ್ಲಿ ಜಮ್ಮು ಬೌಲರ್‌ ಇತಿಹಾಸ

ಸದ್ಯ ಭಾರತೀಯ ಆಟಗಾರರು ದೇಶೀಯ ಟೂರ್ನಿಯಲ್ಲಿ ಫುಲ್ ಬ್ಯೂಸಿ ಆಗಿದ್ದಾರೆ. ದುಲೀಪ್‌ ಟ್ರೋಫಿಯಲ್ಲಿ ಸ್ಟಾರ್‌ ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿ ತಂಡಕ್ಕೆ ಅಗತ್ಯ ಕಾಣಿಕೆ ನೀಡುತ್ತಿದ್ದಾರೆ. ಊಈ ಬಾರಿಯ ಟೂರ್ನಿಯಲ್ಲಿ ಈ ಹಿಂದೆಂದೂ ಆಗದ ವಿಶಿಷ್ಠವಾದ ದಾಖಲೆಯೊಂದು ನಿರ್ಮಾಣವಾಗಿದೆ. ಉತ್ತರ ವಲಯದ ಪರ ಆಡುತ್ತಿರುವ ಆಕಿಬ್ ನಬಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೂ ಮೊದಲು, ದುಲೀಪ್ ಟ್ರೋಫಿಯಲ್ಲಿ ಈ ಸಾಧನೆಯನ್ನು ಯಾವೊಬ್ಬ ಬೌಲರ್‌ ಮಾಡಿರಲಿಲ್ಲ.

ಶುಕ್ರವಾರ ದುಲೀಪ್‌ ಟ್ರೋಫಿ ಟೂರ್ನಿಯ ಎರಡನೇ ದಿನದಾಟದಲ್ಲಿ ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 308 ರನ್‌ಗಳಿಂದ ಆಟ ಮುಂದುವರಿಸಿ, 405 ರನ್‌ಗಳಿಗೆ ಆಲೌಟ್ ಆಯಿತು. ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಸರ್ವ ಪತನ ಕಂಡಿತು. ಈ ವೇಳೆ ಜಮ್ಮು ಕಾಶ್ಮೀರದ ಯುವ ಬೌಲರ್‌ ಆಕಿಬ್ ನಬಿ ಇತಿಹಾಸ ನಿರ್ಮಿಸಿದರು. ಭಾರತದಲ್ಲಿ ನಡೆಯುವ ದೇಶೀಯ ಟೂರ್ನಿಯಲ್ಲಿ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್‌ ಪಡೆದ ನಾಲ್ಕನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಆದರೆ ಇದಕ್ಕೂ ಮೊದಲು ಮೂವರು ಬೌಲರ್‌ಗಳು ರಣಜಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದರು. ಆಕಿಬ್ ನಬಿ ದುಲೀಪ್ ಟ್ರೋಫಿಯಲ್ಲಿ ಇದನ್ನು ಮಾಡಿದ ಮೊದಲ ಆಟಗಾರ.

Akib Nabi makes Duleep Trophy history with four wickets in four balls

ಹಿಂದಿನ ಬಗ್ಗೆ ಹೇಳುವುದಾದರೆ, 1988 ರಲ್ಲಿ, ರಣಜಿ ಟ್ರೋಫಿಯಲ್ಲಿ, ದೆಹಲಿಯ ಶಂಕರ್ ಸೈನಿ, 2018 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಮೊಹಮ್ಮದ್ ಮುಧಾಸಿರ್ ರಾಜಸ್ಥಾನ ವಿರುದ್ಧ, 2024 ರಲ್ಲಿ, ಮಧ್ಯಪ್ರದೇಶದ ಕುಲ್ವಂತ್ ಖೇಜ್ರೋಲಿಯಾ ಬರೋಡಾ ವಿರುದ್ಧ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಪಡೆದು ಬೀಗಿದ್ದರು. ಆದರೆ ಆಕಿಬ್‌ ನಬಿ ದುಲೀಪ್‌ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜಮ್ಮು ಬೌಲರ್‌ ಇತಿಹಾಸ

ಅಕಿಬ್‌ ನಬಿ ಜಮ್ಮಕಾಶ್ಮೀರದಲ್ಲಿ ನವೆಂಬರ್ 4, 1996ರಲ್ಲಿ ಜನಿಸಿದರು. ಇವರು ಈ ವರೆಗೆ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ 90 ವಿಕೆಟ್‌ ಪೆದಿದ್ದಾರೆ. ಇವರು ನಾಲ್ಕು ಬಾರಿ 4, ಎಂಟು ಬಾರಿ 5 ವಿಕೆಟ್‌ ಪಡೆದ ಸಾಧನೆ ಮಾಡಿದರು. ಇವರು ಆಡಿದ 29 ಲೀಸ್ಟ್‌ ಎ ಪಂದ್ಯಗಳಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ದುಲೀಪ್‌ ಟ್ರೋಫಿಯಲ್ಲಿ ಇವರು ನೀಡಿದ ಪ್ರದರ್ಶನ ಇವರನ್ನು ಎಲ್ಲರೂ ಗುರುತು ಹಿಡಿಯುವಂತೆ ಮಾಡಿದೆ.

Akib Nabi makes Duleep Trophy history with four wickets in four balls

ಪೂರ್ವ ವಲಯದ ಪರ ವಿರಾಟ್‌ ಸಿಂಗ್‌ ಮಾತ್ರ ಅರ್ಧಶತಕ ಬಾರಿಸಿದರು. ಇವರು 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 69 ರನ್‌ ಬಾರಿಸಿ ಔಟ್ ಆದರು. ಉಳಿದಂತೆ ನಾಯಕ ರಿಯಾನ್ ಪರಾಗ್, ಕುಮಾರ್‌ ಕೆ, ಉತ್ಕರ್ಷ್ ಸಿಂಗ್‌, ಸುರಜ್‌ ಸಿಂಗ್ ಮಾತ್ರ ಡಬಲ್‌ ಡಿಜಿಟ್ ಮುಟ್ಟಿದರು. ಉಳಿದ ಆಟಗಾರರು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು.

Story first published: Friday, August 29, 2025, 20:20 [IST]
Other articles published on Aug 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+