ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎಂಬುದು ಎಲ್ಲ ಆಟಗಾರರ ಕನಸು. ಅದರಲ್ಲೂ ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಸೆ ಬಹುವಾಗಿ ಇರುತ್ತದೆ. ಇಂತಹದ್ದೇ ಆಸೆಯ ಕುದುರೆಯನ್ನು ಏರಿ, ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಬೇಕು ಎಂಬ ಕನಸನ್ನು ಅದೆಷ್ಟೋ ಯುವ ಆಟಗಾರರು ಕಾಣುತ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ವಿಶ್ವಕಪ್‌ನಲ್ಲಿ ಆಡುವ ಕನಸು ಯಂಗ್ ಸ್ಟರ್ಸ್‌ದ್ದಾಗಿದೆ.
ಈ ನಿಟ್ಟಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಪಂದ್ಯ ಉತ್ತಮ ವೇದಿಕೆ ಆಗಿದೆ. ಈ ವೇದಿಕೆಯನ್ನೇ ಬಳಸಿಕೊಂಡು ಟೀಮ್ ಇಂಡಿಯಾದ ಯಂಗ್ ಪ್ಲೇಯರ್ಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತಮ್ಮ ಕರ್ಚಿಫ್ ಹಾಕುತ್ತಿದ್ದಾರೆ. ಈ ಸಾಲಿನಲ್ಲಿ ಅದೆಷ್ಟೋ ಆಟಗಾರರು ಬಂದಿದ್ದಾರೆ. ಆದರೆ, ಸ್ಪಿನ್ ಆಲ್‌ರೌಂಡರ್ ಸ್ಥಾನವನ್ನು ರವೀಂದ್ರ ಜಡೇಜಾ ಗಟ್ಟಿಯಾಗಿ ಹಿಡಿದು ಇಟ್ಟುಕೊಂಡ ಹಾಗೆ ಕಾಣುತ್ತಿತ್ತು. ಆದರೆ ಅವರ ಸ್ಥಾನದ ಮೇಲೂ ಅಪಾಯದ ತೂಗಗತ್ತಿ ನೇತಾಡುತ್ತಿದೆ.

ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅದ್ಭುತ ಪ್ರದರ್ಶನ ನೀಡುತ್ತಿರುವ ಅಕ್ಷರ್ ಪಟೇಲ್, ತಮ್ಮನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸಿ ಎಂದು ಸಂದೇಶ ಸಾರಿದ್ದಾರೆ. ಅಕ್ಷರ್ ಪಟೇಲ್ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಯಲ್ಲೂ ಮಿಂಚಿದ್ದಾರೆ. ಅಫ್ಘಾನಿಸ್ತಾನ ಸರಣಿಯ ಮೊದಲ ಟಿ20ಯಲ್ಲೂ ಅಕ್ಷರ್ ಅದ್ಭುತ ಪ್ರದರ್ಶನ ನೀಡಿದರು. ಎರಡನೇ ಟಿ20ಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ನಾಯಕನ ಈ ನಿರ್ಧಾರಕ್ಕೆ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ಜೀವ ತಿಂಬಿದರು.
ಅಕ್ಷರ್ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅವರು ಅಫ್ಘಾನಿಸ್ತಾನದ ಗುಲ್ಬದಿನ್ ನೈಬ್ ಮತ್ತು ಕ್ಯಾಪ್ಟನ್ ಇಬ್ರಾಹಿಂ ಜದ್ರಾನ್ ಅವರನ್ನು ಔಟ್ ಮಾಡಿದರು. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಯಲ್ಲೂ ಅಕ್ಷರ್ ಬೌಲಿಂಗ್ ಮಾಡುವಾಗ 2 ವಿಕೆಟ್ ಕಬಳಿಸಿದ್ದರು ಮತ್ತು ಬ್ಯಾಟಿಂಗ್ ಮಾಡುವ ಮುನ್ನವೇ ಪಂದ್ಯ ಮುಗಿದಿತ್ತು.

2024 ರ ಟಿ 20 ವಿಶ್ವಕಪ್ ಕೂಡ ಈ ವರ್ಷ ನಡೆಯಲಿದ್ದು, ಇದರಲ್ಲಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಅಕ್ಷರ್ ಪಟೇಲ್ ಸಮಸ್ಯೆ ಎಂತೆ ಪರಿಣಮಿಸುತ್ತಿದ್ದಾರೆ. ಗಾಯದ ಕಾರಣ ಕಳೆದ ವರ್ಷ ಭಾರತದ ನೆಲದಲ್ಲಿ ಆಡಿದ ODI ವಿಶ್ವಕಪ್ 2023 ರಲ್ಲಿ ಅಕ್ಷರ್ ಭಾರತ ತಂಡದ ಭಾಗವಾಗಲು ಸಾಧ್ಯವಾಗಲಿಲ್ಲ. ಆದರೆ ಅವರು 2024 ರಲ್ಲಿ T20 ವಿಶ್ವಕಪ್‌ನಲ್ಲಿ ಜಡೇಜಾ ಅವರನ್ನು ಹಿಂದಕ್ಕ ಬಹುದು. ಹೀಗಿರುವಾಗ ಟಿ20 ವಿಶ್ವಕಪ್‌ನಲ್ಲಿ ಅಕ್ಷರ್ ನಿಜವಾಗಿಯೂ ಜಡೇಜಾ ಅವರ ಸ್ಥಾನವನ್ನು ಪಡೆಯುತ್ತಾರಾ ಎಂಬುದೇ ಕುತೂಹಲ ಹೆಚ್ಚಿಸಿದೆ.