ಅಲಾಸ್ಟೇರ್ ಕುಕ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ

ಲಂಡನ್, ಮೇ 11: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಇಂಗ್ಲೆಂಡ್ ಮಾಜಿ ನಾಯಕ ಅಲಾಸ್ಟೇರ್ ಕುಕ್ ತನ್ನ ನೆಚ್ಚಿನ ಸಾರ್ವಕಾಲಿಕ ಐದು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅಷ್ಟೇ ಅಲ್ಲ, ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರ ಪ್ರತಿಭೆ ಕೊಹ್ಲಿ ಹತ್ತಿರವಾಗಬಲ್ಲರು ಎಂದೂ ಕುಕ್ ಹೇಳಿದ್ದಾರೆ.
ಟೆಸ್ಟ್‌ನ ಇನ್ನಿಂಗ್ಸ್ ಒಂದರಲ್ಲಿ 400 ರನ್ ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ. ಲಾರಾ, 131 ಟೆಸ್ಟ್ ಪಂದ್ಯಗಳಲ್ಲಿ 11,953 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕ, 9 ದ್ವಿಶತಕ, 48 ಅರ್ಧಶತಕಗಳು ಸೇರಿವೆ. 299 ಏಕದಿನ ಪಂದ್ಯಗಳಲ್ಲಿ 10,405 ರನ್ ದಾಖಲೆ ಹೊಂದಿದ್ದಾರೆ.
ಸಂಡೆ ಟೈಮ್ಸ್ ನಡೆಸಿದ ಪ್ರಶ್ನೋತ್ತರದಲ್ಲಿ 2004ರ ಪ್ರವಾಸ ಸರಣಿಯನ್ನು ಕುಕ್ ಸ್ಮರಿಸಿಕೊಂಡರು. ಲಾರಾ ಟೆಸ್ಟ್ ಕ್ರಿಕೆಟ್‌ನ ಅತ್ಯಧಿಕ ರನ್ ಬಾರಿಸಿದ್ದು ಇದೇ ಸರಣಿಯಲ್ಲಿ. 'ನಾನು ಆವತ್ತು ಒಟ್ಟಾರೆಯಾಗಿ ಮತ್ತೊಂದು ಹಂತದ ಬ್ಯಾಟ್ಸ್‌ಮನ್‌ಶಿಪ್‌ಗೆ ಸಾಕ್ಷಿಯಾಗಿದ್ದೆ,' ಎಂದು ಕುಕ್ ಅಭಿಪ್ರಾಯಿಸಿದರು.
ಕುಕ್ ಹೆಸರಿಸಿದ ಐದು ಶ್ರೇಷ್ಠ ಕ್ರಿಕೆಟಿಗರೆಂದರೆ ಬ್ರಿಯಾನ್ ಲಾರಾ, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್, ಜಾಕ್ ಕ್ಯಾಲೀಸ್, ಕುಮಾರ ಸಂಗಕ್ಕಾರ. 'ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸುಲಭವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವರನ್ನೂ ಈ ಪಟ್ಟಿಯಲ್ಲಿ ನೀವು ಸೇರಿಸಬೇಕಿದೆ,' ಎಂದು ಕುಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications