Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋː ಕುಕ್ ಹಿಡಿದ ಅದ್ಭುತ ಕ್ಯಾಚಿನಿಂದ ಆತ ಬಚಾವ್ǃ

ಎಸ್ಸೆಕ್ಸ್, ಜೂನ್ 30: ಇಂಗ್ಲೆಂಡಿನ ಮಾಜಿ ನಾಯಕ ಅಲೆಸ್ಟರ್ ಕುಕ್ ಅವರು ಅದ್ಭುತ ಕ್ಯಾಚನ್ನು ಹಿಡಿದಿರುವ ದೃಶ್ಯ ವೈರಲ್ ಆಗಿದೆ.
ಸಂದರ್ಶಕನೊಬ್ಬನ ಜತೆ ಮೈದಾನದಲ್ಲಿ ಮಾತನಾಡುತ್ತಾ ನಿಂತಿದ್ದ ಕುಕ್ ಅವರು, ತ್ವರಿತಗತಿಯಲ್ಲಿ ಕ್ಯಾಚ್ ತೆಗೆದುಕೊಂಡಿದ್ದಾರೆ.

ಕುಕ್ ಅವರು ಕ್ಯಾಚ್ ಹಿಡಿಯದಿದ್ದರೆ, ಚೆಂಡು ನೇರವಾಗಿ ಸಂದರ್ಶಕನಿಗೆ ಬೀಳುತ್ತಿತ್ತು. ಎಸ್ಸೆಕ್ಸ್ ಕೌಂಟಿ ತನ್ನ ಫೇಸ್ ಬುಕ್ ಪುಟದಲ್ಲಿ ಮೊದಲಿಗೆ ಈ ವಿಡಿಯೋ ಹಾಕಿದೆ.

ಒಬ್ಬ ಅದ್ಭುತ ಬ್ಯಾಟ್ಸ್ ಮನ್ ಹಾಗೂ ಉತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿರುವ ಕುಕ್ ಅವರು ಭಾರತದ ವಿರುದ್ಧ ಸೋಲಿನ ನಂತರ ಇಂಗ್ಲೆಂಡ್ ನಾಯಕತ್ವ ತೊರೆದಿದ್ದಾರೆ. ಸದ್ಯ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗುತ್ತಿದ್ದಾರೆ.

ಎಸ್ಸೆಕ್ಸ್ ಹಾಗೂ ಮಿಡಲ್ಸೆಕ್ಸ್ ತಂಡಗಳ ನಡುವಿನ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಕುಕ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎಸ್ಸೆಕ್ಸ್ ಪರ ಆಡುವ ಕುಕ್ ಅವರು ಎರಡನೇ ದಿನದಾಟ ಮುಕ್ತಾಯವಾದ ಬಳಿಕ ಸಂದರ್ಶಕನ ಜತೆ ಮೈದಾನದಲ್ಲೇ ಮಾತನಾಡುತ್ತಿದ್ದರು.

ಟೆಸ್ಟ್ ನಾಯಕತ್ವಕ್ಕೆ ವಿದಾಯ

ಟೆಸ್ಟ್ ನಾಯಕತ್ವಕ್ಕೆ ವಿದಾಯ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿರುದ್ಧ ಫೆಬ್ರವರಿಯಲ್ಲಿ ನಡೆದ ಟೆಸ್ಟ್ ಸರಣಿಯನ್ನು ಕಳೆದುಕೊಂಡ ಬಳಿಕ, ಕುಕ್ ನಾಯಕತ್ವವನ್ನು ತ್ಯಜಿಸಿದ್ದರು. ಕುಕ್ ಸ್ಥಾನವನ್ನು ಜೋ ರೂಟ್ ತುಂಬಿದ್ದಾರೆ. ಎಸ್ಸೆಕ್ಸ್ ಪರ ಆಡುತ್ತಾ ಮುಂದಿನ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿದ್ದಾರೆ.

ವಿಡಿಯೋ ನೋಡಿ

ಸಂದರ್ಶಕನನ್ನು ಕುಕ್ ಅವರು ಕ್ಯಾಚ್ ಹಿಡಿದು ಸೇವ್ ಮಾಡಿದ್ದು ಹೇಗೆ ವಿಡಿಯೋ ನೋಡಿ

ಕುಕ್ ಹಿಡಿದ ಕ್ಯಾಚ್

ಕುಕ್ ಹಿಡಿದ ಕ್ಯಾಚ್-ಬಹುಬೇಗ ವೈರಲ್ ವಿಡಿಯೋಗಳ ಪಟ್ಟಿ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚೆಚ್ಚು ಹಂಚಿಕೆಯಾಗತೊಡಗಿದೆ.

ಎಸ್ಸೆಕ್ಸ್ ಫೇಸ್ ಬುಕ್

ಎಸ್ಸೆಕ್ಸ್ ಕ್ಲಬ್ ತನ್ನ ಫೇಸ್ ಬುಕ್ ಪುಟದಲ್ಲಿ ಮೊದಲಿಗೆ ವಿಡಿಯೋ ಹಂಚಿಕೊಂಡಿದ್ದು ಲಕ್ಷಾಂತರ ಮಂದಿ ವೀಕ್ಷಿಸಿ, ಕಾಮೆಂಟ್ ಮಾಡಿ, ಹಂಚಿಕೊಂಡಿದ್ದಾರೆ.

ಹೀಗೆ ಕ್ಯಾಚ್ ಹಿಡಿಯಲು ಸಾಧ್ಯವೇ

ಈ ರೀತಿ ಕ್ಯಾಚ್ ಹಿಡಿಯಲು ಸಾಧ್ಯವೇ? ಇದು ಪೂರ್ವ ನಿಯೋಜಿತ ಇರಬೇಕು ಅಥವಾ ಅನಿಮೇಷನ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದವರು ಇದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+