ರೋಹಿತ್ ಶರ್ಮ 100, ಇದು ಪಾಕ್ ದೇವ್ರು ಕೊಟ್ಟ ವರ
ಮೆಲ್ಭೋರ್ನ್, ಮಾ.19: ಮೌಕಾ ಮೌಕಾ.. ಯಾರಿಗುಂಟು ಯಾರಿಗಿಲ್ಲ. ಮಹತ್ವದ ಪಂದ್ಯವೊಂದರಲ್ಲಿ ಬ್ಯಾಟ್ಸ್ ಮನ್ ಗೆ ಒಂದೇ ಒಂದು ಲಕ್ಕಿ ಚಾನ್ಸ್ ಸಿಕ್ಕರೆ ಸಾಕು. ಯಾರು ತಾನೇ ಬೇಡ ಎನ್ನುವುದಿಲ್ಲ. ಬಾಂಗ್ಲಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಗೂ ಪಾಕಿಸ್ತಾನಿ ಅಂಪೈರ್ ಅಲೀಂ ದರ್ 'ಮೌಕಾ' ನೀಡಿದ್ದಾರೆ. ನೋ ಬಾಲ್ ಕರೆ ನೀಡಿದ್ದರಿಂದ ರೋಹಿತ್ ಶರ್ಮ ಶತಕ ಪೂರೈಸಲು ಸಾಧ್ಯವಾಗಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ದಲ್ಲಿ ಗುರುವಾರ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಅಂಪೈರ್ ಅಲೀಂ ಕೊಟ್ಟ ಒಂದು ಕೆಟ್ಟ ನಿರ್ಣಯ ಭಾರತದ ಪಾಲಿಗೆ ವರದಾನವಾಗಿದೆ. ಅನುಭವಿ, ಪ್ರಶಸ್ತಿ ವಿಜೇತ ಅಂಪೈರ್ ಅಲೀಂ ದರ್ ಅವರು ಈ ರೀತಿ ತಪ್ಪು ನಿರ್ಣಯ ನೀಡಿದ್ದೇಕೆ ಎಂದು ಹಲವಾರು ಮಂದಿ ಹುಬ್ಬೇರಿಸಿದ್ದಾರೆ.
ಅದರೆ, ರೋಹಿತ್ ಹಾಗೂ ಟೀಂ ಇಂಡಿಯಾ ಫ್ಯಾನ್ಸ್ ಅಲೀಂ ದರ್ ರನ್ನು ಹಾಡಿ ಹೊಗಳಿದ್ದಾರೆ. ಮಾಜಿ ಕ್ರಿಕೆಟರ್ಸ್ ಕೆಲವರು ಅಪಸ್ವರ ಎತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಪರ -ವಿರೋಧ ಚರ್ಚೆ ಆರಂಭಗೊಳ್ಳುವ ಹೊತ್ತಿಗೆ ರೋಹಿತ್ ಶರ್ಮ 137ರ ನ್ ಚೆಚ್ಚಿ ಔಟಾಗಿದ್ದು, ಬಾಂಗ್ಲಾದೇಶಕ್ಕೆ ಟೀಂ ಇಂಡಿಯಾ 303ರನ್ ಟಾರ್ಗೆಟ್ ನೀಡಿದೆ.. ಸ್ಕೋರ್ ಅಪ್ಡೇಟ್ಸ್ ಇಲ್ಲಿ ಓದಿ. ಅಲೀಂ ದರ್ ಎಂಬ ಅಂಪೈರ್ ದೇವ್ರು ನೀಡಿದ ವರದ ಬಗ್ಗೆ ಮುಂದೆ ಓದಿ..

ಬಾಂಗ್ಲಾಕ್ಕೆ 303ರನ್ ಟಾರ್ಗೆಟ್ ಕೊಟ್ಟ ಇಂಡಿಯಾ
ಟೀಂ ಇಂಡಿಯಾ 50 ಓವರ್ಸ್ ನಲ್ಲಿ 302/6. ಟಾಪ್ ಸ್ಕೋರರ್ಸ್ ರೋಹಿತ್ 137, ರೈನಾ 65, ಜಡೇಜ 10 ಎಸೆತಗಳಲ್ಲಿ 23ರನ್

ಇಷ್ಟಕ್ಕೂ ಆಗಿದ್ದೇನು? ರೋಹಿತ್ ಔಟಾಗಿದ್ರಾ?
ರೋಹಿತ್ ಶರ್ಮ 90ರನ್ ಗಳಿಸಿ ಆಡುವಾಗ(39.3 ಓವರ್ಸ್ 195/3) ರುಬೇಲ್ ಹುಸೇನ್ ಎಸೆತ(40ನೇ ಓವರ್ ನ 4ನೇ ಎಸೆತ) ವನ್ನು ಎತ್ತಿ ಬಾರಿಸಿದರು. ಆಗ ಅಲೀಂ ದರ್ ಅವರು ಸ್ಕ್ವೇರ್ ಲೆಗ್ ನಲ್ಲಿ ನಿಂತಿದ್ದರು. ಮೇನ್ ಅಂಪೈರ್ ಅವರು ಅಲೀಂ ಕಡೆ ನೋಡಿದಾಗ ಅವರು ಚೆಂಡು ಸೊಂಟಕ್ಕಿಂತ ಮೇಲಕ್ಕಿದೆ ಇದು ನೋಬಾಲ್ ಎಂದು ತಪ್ಪು ನಿರ್ಣಯ ನೀಡಿದರು. ರೋಹಿತ್ ಆ ಎಸೆತದಲ್ಲಿ ಕ್ಯಾಚ್ ಔಟ್ ಆಗಿದ್ದರು.
ಅಲೀಂ ದರ್ ಹೊಗಳಿದ ರಾಜದೀಪ್
ಅಲೀಂ ದರ್ ಹೊಗಳಿದ ಹೆಡ್ ಲೈನ್ ಟುಡೇ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರು ನಿನ್ನೆ ರೋಹಿತ್ ಶತಕ ಬಾರಿಸುವ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಯ್ತು ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ನೋಬಾಲ್ ಇಲ್ಲದ್ದನ್ನು ನೋಬಾಲ್ ಎಂದ ಅಂಪೈರ್ಸ್
ನೋಬಾಲ್ ಇಲ್ಲದ್ದನ್ನು ನೋಬಾಲ್ ಎಂದ ಅಂಪೈರ್ಸ್ ಬಗ್ಗೆ ಟ್ವೀಟ್ ಗಳು ಹರಿದಾಡುತ್ತಿವೆ. ರಿಪ್ಲೇ ನಲ್ಲೂ ರುಬೇಲ್ ಏನೂ ಬೀಮರ್ ಎಸೆದಿರಲಿಲ್ಲ. ಅಂಪೈರ್ ನಿರ್ಣಯ ತಪ್ಪು ಎಂದು ತಿಳಿದು ಬರುತ್ತದೆ.
ಕ್ರಿಕೆಟ್ ಯಾರು ನಿಯಂತ್ರಿಸುತ್ತಾರೆ?
ಕ್ರಿಕೆಟ್ ಯಾರು ನಿಯಂತ್ರಿಸುತ್ತಾರೆ? ನೋ ಬಾಲ್ ನಿರ್ಣಯದಿಂದ ಬೇಸರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications