For Quick Alerts
ALLOW NOTIFICATIONS  
For Daily Alerts
 

ಧೋನಿಯೇ ಆದರ್ಶ ಪ್ರೇರಣೆಯೆಂದ ಆಸ್ಟ್ರೇಲಿಯನ್ ವಿಕೆಟ್ ಕೀಪರ್!

Alex Carey aspires to be a match-finisher like MS Dhoni | MS DHONI | ALEX CAREY | ONEINDIA KANNADA
Alex Carey Aspires To Be A Match-Finisher Like MS Dhoni

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಅದೆಷ್ಟೋ ಯುವ ಪ್ರತಿಭೆಗಳಿಗೆ ಪ್ರೇರಣೆ. ತಮ್ಮ ಕೂಲ್ ವ್ಯಕ್ತಿತ್ವ, ನಾಯಕತ್ವದ ಗುಣದಿಂದ ಎಂತವರನ್ನೂ ಸೆಳೆಯುವ ತಾಕತ್ತು ಹೊಂದಿದ್ದಾರೆ ಮಹೇಂದ್ರ ಸಿಂಗ್ ಧೋನಿ. ಕ್ರಿಕೆಟಿಗರಿಗೆ ಧೋನಿಯ ಫಿನಿಷಿಂಗ್ ಶೈಲಿಯೂ ಅತ್ಯದ್ಭುತ. ಈ ಕಾರಣಕ್ಗ್ಕಾಗಿ ಕೂಡ ಕೋಟ್ಯಂತರ ಅಭಿಮಾನಿಗಳು ಧೋನಿಗಿದ್ದಾರೆ.

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೂಡ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿಯ ಆಟಕ್ಕೆ ಮನಸೋತಿರುವ ಆಟಗಾರ. ತಂಡ ಸಂಕಷ್ಟಕ್ಕೆ ತಲುಪಿದ್ದಾಗ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯಗಯುವ ಕಲೆಯನ್ನೂ ನಾನೂ ಕಲಿಯಬೇಕಿದೆ ಎಂದು ಆಸಿಸ್ ಯುವ ಪ್ರತಿಭೆ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ವಿಶ್ವಕಪ್ ಕ್ರಿಕೆಟ್ 2019ರಲ್ಲಿ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅದ್ಭುತ ಪ್ರದರ್ಶನ ನೀಡಿದ್ದರು. ವಿಕೆಟ್ ಹಿಂದೆ ಅತಿ ಹೆಚ್ಚು ಬಲಿ ಪಡೆದ ಹೆಗ್ಗಳಿಕೆಯ ಜೊತೆಗೆ ಕ್ಯಾಡಿಡ ಬ್ಯಾಟ್‌ನಿಂದಲೂ ಗಮನ ಸೆಳೆದಿದ್ದರು. ಜೊತೆಗೆ ಕ್ಯಾರಿ 100ಕ್ಕೂ ಹೆಚ್ಚಿನ ಸ್ಟ್ರೈಕ್‌ರೆಟ್‌ನಲ್ಲಿ 62.50 ಸರಾಸರಿಯಲ್ಲಿ 375 ರನ್ ಗಳಿಸಿ ಮಿಂಚಿದ್ದರು.ಟೀಮ್ ಇಂಡಿಯಾ ವಿರುದ್ಧ ನಡೆಯುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಅಲೆಕ್ಸ್ ಕ್ಯಾರಿ ಪ್ರತಿನಿಧಿಸಲಿದ್ದಾರೆ

2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್ ಧೋನಿ ವಿರುದ್ಧವಾಗಿ ಆಡುವ ಅವಕಾಶ ದೊರೆತಿತ್ತು. ಇದು ನನ್ನ ಪಾಲಿಗೆ ದೊರಕಿದ ಅದೃಷ್ಟ ಎಂಬ ಮಾತನ್ನು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿಕೆ ನೀಡಿದ್ದಾರೆ.

ತಾನಿನ್ನೂ ಅನೇಕ ವಿಭಾಗಗಳಲ್ಲಿ ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳಬೇಕಿದೆ. ತಾನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಕಾರಣಕ್ಕೆ ಪಂದ್ಯವನ್ನು ಮುಕ್ತಾಗೊಳಿಸುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಇದು ಆಸ್ಟ್ರೇಲಿಯಾ ತಂಡಕ್ಕೆ ಧನಾತ್ಮಕವಾಗಿರಬೇಕು. ಧೋನಿಯಂತಾ ಶ್ರೇಷ್ಟ ಆಟಗಾರನನ್ನು ನಾವು ನೋಡಿದಾಗ ಅವರಿಂದ ಸಾಧ್ಯವಾದಷ್ಟು ಕಲಿತುಕೊಳ್ಳಬೇಕು ಎನಿಸುತ್ತದೆ. ಧೋನಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲ್ಲಿಸುವ ರೀತಿಯಲ್ಲೇ ತಾನೂ ಒಂದು ದಿನ ಆಡಿ ಆಸ್ಟ್ರೇಲಿಯಾವನ್ನು ಗೆಲ್ಲಿಸಬೇಕು ಎಂದು ಆಸ್ಟ್ರೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿಕೆ ನೀಡಿದ್ದಾರೆ.

Story first published: Sunday, January 12, 2020, 13:13 [IST]
Other articles published on Jan 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+