Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ವಿಶ್ವಾಸದಲ್ಲಿ ಈ ತಾರೆ!

Alex Hales eyes England comeback at World T20

ಲಂಡನ್‌, ಮೇ 23: ಡೋಪಿಂಗ್‌ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದು ಇಂಗ್ಲೆಂಡ್‌ ತಂಡದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌, ಇದೀಗ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಹೊತ್ತಿಗೆ ಇಂಗ್ಲೆಂಡ್‌ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

"ಇಂಗ್ಲೆಂಡ್‌ ತಂಡಕ್ಕೆ ಮರಳುವ ಬಾಗಿಲು ನನಗೆ ಮುಚ್ಚಿಲ್ಲ ಎಂದು ಆಶಿಸುತ್ತೇನೆ. ಟಿ20 ವಿಶ್ವಕಪ್‌ ಹೊತ್ತಿಗೆ ಕಮ್‌ಬ್ಯಾಕ್‌ ಮಾಡುವುದು ನನ್ನ ಗುರಿ. ಇದಕ್ಕೆ ಯಾವ ಮಾರ್ಗದ ಮೂಲಕ ಪ್ರಯತ್ನಿಸಬೇಕೊ ಹಾಗೆಯೇ ಪ್ರಯತ್ನಿಸುತ್ತೇನೆ. ಮುಂಬರುವ ಎಲ್ಲಾ ಟೂರ್ನಿಗಳಲ್ಲೂ ರನ್‌ ಗಳಿಸುವ ಆಶಯ ಹೊಂದಿದ್ದೇನೆ. ನನ್ನ ಕ್ರಿಕೆಟ್‌ ಆನಂದಿಸಬೇಕೆಂದಿದ್ದೇನೆ,'' ಎಂದು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳು ಮುಂದಾಗಿರುವ ಅಲೆಕ್ಸ್‌ ಹೇಲ್ಸ್‌ ಹೇಳಿದ್ದಾರೆ.

ಇಂಗ್ಲೆಂಡ್‌ ತಂಡ ವಿಶ್ವಕಪ್‌ ಟೂರ್ನಿಗೆ ಪ್ರಕಟಿಸಿದ್ದ ಆರಂಭಿಕ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಎರಡನೇ ಬಾರಿ ಡೋಪಿಂಗ್‌ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದು 21 ದಿನಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆಯೇ ತಂಡದಿಂದ ಸ್ಥಾನ ಕಳೆದುಕೊಂಡಿದ್ದರು.

ತಂಡದಿಂದ ಹೊರ ಬಿದ್ದರೂ 30 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಹೇಲ್ಸ್‌, ಮುಂಬರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿಇಂಗ್ಲೆಂಡ್‌ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

"ಇದಕ್ಕಾಗಿ ನಾನು ಕಾಯುತ್ತಿದ್ದೇನೆ. ಇಂಗ್ಲೆಂಡ್‌ ತಂಡದ ಅಭಿಮಾನಿ ನಾನು, ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತೇನೆ. ಕಳೆದ ಕೆಲ ವರ್ಷಗಳಿಂದ ನಮ್ಮ ತಂಡದ ಪ್ರದರ್ಶನ ಅದ್ಭುತವಾಗಿದೆ. ಹೀಗಾಗಿ ಟ್ರೋಫಿ ಗೆಲ್ಲುವ ಅರ್ಹ ತಂಡ ನಮ್ಮದು. ಕ್ರೀಡಾಂಗಣದಲ್ಲಿ ಕುಳಿತು ನಮ್ಮ ತಂಡವನ್ನು ಹುರಿದುಂಬಿದಿ, ಪಂದ್ಯಗಳನ್ನು ಆನಂದಿಸಲಿದ್ದೇನೆ,'' ಎಂದು ಹೇಲ್ಸ್‌ ಹೇಳಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ ಹೊರತಾಗಿ ಟೀಮ್‌ ಇಂಡಿಯಾಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ ಎಂದು ಹೇಲ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. "ಇಂಗ್ಲೆಂಡ್‌ ಹೊರತಾಗಿ ಭಾರತ ಕೂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌. ಆದರೂ ಎಲ್ಲಾ ತಂಡಗಳ ಸದ್ಯದ ಪ್ರದರ್ಶನ ಗಮನಿಸಿದರೆ ಏನನ್ನೂ ಹೇಳಲಾಗದು. ಟೂರ್ನಿಯು ಮುಕ್ತವಾಗಿದ್ದು, ಪಂದ್ಯಗಳನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ,'' ಎಂದಿದ್ದಾರೆ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಲೆಕ್ಸ್‌ ಹೇಲ್ಸ್‌ ಅವರನ್ನು ಬಾರ್ಬೆಡೋಸ್‌ ಟ್ರೈಡೆಂಟ್ಸ್‌ ತನ್ನದಾಗಿಸಿಕೊಂಡಿದೆ. 2019ರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಸೆಪ್ಟೆಂಬರ್‌ 4ರಿಂದ ಅಕ್ಟೋಬರ್‌ 22ರವರೆಗೆ ನಡೆಯಲಿದೆ.

Story first published: Thursday, May 23, 2019, 14:01 [IST]
Other articles published on May 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+