ಭರವಸೆಯ ರೈಡರ್ ಅಲಿರಾಜ್ ಮಿರ್ಜೈನ್ ಅವರ ಅಮೋಘ ಪ್ರದರ್ಶನದ ನೆರವಿನಿಂದ 12ನೇ ಆವೃತ್ತಿಯ 104ನೇ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ, 20 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಬುಲ್ಸ್ 54-24 ಅಂಕಗಳಿಂದ ಬಂಗಾಳ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮೊದಲಾವಧಿಯ ಆಟದಿಂದಲೇ ಬುಲ್ಸ್ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು. ಈ ವೇಳೆ ಬುಲ್ಸ್ ತಂಡದ ಸ್ಟಾರ್ ರೈಡರ್‌ಗಳು ಸೊಗಸಾದ ಪ್ರದರ್ಶನ ನೀಡಿ 17 ಅಂಕವನ್ನು ಕಲೆ ಹಾಕಿತು. ಅಲ್ಲದೆ ಟ್ಯಾಕಲ್‌ನಲ್ಲಿ 7 ಅಂಕವನ್ನು ಪೇರಿಸಿತು. ಅಲ್ಲದೆ 2 ಬಾರಿ ಬಂಗಾಳ ತಂಡವನ್ನು ಆಲೌಟ್ ಮಾಡಿ ಅಬ್ಬರಿಸಿತು. ಈ ಅವಧಿಯಲ್ಲಿ ಬಂಗಾಳ ತಂಡ 12 ಅಂಕ ಸೇರಿಸಿತು. ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳನ ಅಂತರವನ್ನೇ ಬುಲ್ಸ್ ಎರಡನೇ ಅವಧಿಯಲ್ಲಿ ಕಾಯ್ದುಕೊಂಡಿತು.

ಕೊನೆಯ 20 ನಿಮಿಷದ ಆಟದಲ್ಲಿ ಬುಲ್ಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡಿತು. ಈ ವೇಳೆ ಬುಲ್ಸ್ ಸುಮಾರು 13 ಅಂಕಗಳ ಅಂತರವನ್ನು ಸಾಧಿಸಿತು. ಪರಿಣಾಮ ಕೊನೆಯ ಕ್ಷಣದವರೆಗೂ ಅಂಕಗಳನ್ನು ಕಲೆ ಹಾಕಿ ಪುಟಿದೇಳುವ ಕನಸು ಕಂಡಿದ್ದ ಬಂಗಾಳ ತಂಡದ ಆಸೆ ನುಚ್ಚು ನೂರಾಯಿತು. ಎರಡನೇ ಅವಧಿಯಲ್ಲೂ ಬುಲ್ಸ್ 2 ಬಾರಿ ಬೋನಸ್ ಂಅಕವ್ನ್ನು ಕಲೆ ಹಾಕಿತು. ಬೆಂಗಳೂರು ತಂಡದ ಪರ ಅಲಿರಾಜ್ 17 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 14 ಅಂಕವನ್ನು ಸೇರಿಸಿ ಅಬ್ಬರಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 45-34 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಮೊದಲವಾಧಿಯ ಆಟದಿಂದ ಹರಿಯಾಣ ಸ್ಥಿರ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಮೊದಲಾವಧಿಯ ಆಟದಲ್ಲಿ ಹರಿಯಾಣ 21-20 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಆಲೌಟ್ ಆಯಿತು. ಎರಡನೇ ಅವಧಿಯ ಆಟದಲ್ಲಿ ಹರಿಯಾಣ ಅಬ್ಬರದ ಆಟವನ್ನು ಪ್ರದರ್ಶಿಸಿತು. ಈ ವೇಳೆ 24-14 ಅಂಕಗಳಿಂದ ಮುನ್ನಡ ಸಾಧಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಹರಿಯಾಣ ಲೀಗ್‌ನಲ್ಲಿ 10ನೇ ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆಯಿತು.
ಬುಧವಾರ ನಡೆದ ಮೂರನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 61-26 ರಿಂದ ದಬಾಂಗ್ ದೆಹಲಿ ಕೆಸಿ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋತರೂ ದಬಾಂಗ್ ದೆಹಲಿ ಕೆಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರೆದಿದೆ. ಪಾಟ್ನಾ ಟೂರ್ನಿಯಲ್ಲಿ 6ನೇ ಗೆಲುವಿನ ನಗೆ ಬೀರಿದೆ. ಪಾಟ್ನಾ ತಂಡ ಮೊದಲಾವಧಿಯಿಂದಲೂ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಪಾಟ್ನಾ ತಂಡದ ಪರ ಅಯಾನ್ 20, ಅಂಕಿತ್ ಕುಮಾರ್ 11 ಅಂಕ ಸೇರಿಸಿ ಮಿಂಚಿದರು.