For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಾಯಕತ್ವದ ಬಗೆಗಿನ ಎಲ್ಲಾ ಚರ್ಚೆಗಳು ಅನಗತ್ಯ: ಸಬಾ ಕರೀಮ್

All discussions related to team india captaincy are quite unnecessary: Saba Karim

ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿಯ ಟೆಸ್ಟ್ ಸರಣಿ ನಾಯಕತ್ವದ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ. ಅಜಿಂಕ್ಯ ರಹಾನೆ ಪೂರ್ಣ ಪ್ರಮಾಣದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲಿ ಎಂಬ ಚರ್ಚೆಗಳು ನಡೆಯುತ್ತಿದೆ. ಈ ಚರ್ಚೆಗೆ ಬಿಸಿಸಿಐನ ಮಾಜಿ ಆಯ್ಕೆಗಾರ ಸಬಾ ಕರೀಮ್ ಪ್ರತಿಕ್ರಿಯಿಸಿದ್ದಾರೆ.

"ನನಗೆ ಪ್ರಾಮಾಣಿಕವಾಗಿ ಅನಿಸುವುದೇನೆಂದರೆ ಈ ಎಲ್ಲಾ ಚರ್ಚೆಗಳು ಕೂಡ ಅನಗತ್ಯ. ನಾವು ಅದೃಷ್ಟವಂತರು ಎಂದು ಭಾವಿಸಿಕೊಳ್ಳಬೇಕು. ಯಾಕೆಂದರೆ ಇಬ್ಬರು ಅನುಭವಿ ಆಟಗಾರರು ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಹಾಗೂ ಅಜಿಂಕ್ಯ ರಹಾನೆ ಉಪನಾಯಕನಾಗಿ" ಎಂದು ಸಬಾ ಕರೀಮ್ ಸ್ಪೋರ್ಟ್ ಕೀಡಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಇಬ್ಬರು ಭಿನ್ನವಾದ ವ್ಯಕ್ತಿತ್ವವನ್ನು ಹೊಂದಿರುವ ಆಟಗಾರರು ನಾಯಕರಾಗಿರುವುದು ನಿಜಕ್ಕೂ ಉತ್ತಮವಾದ ಸಂಗತಿ. ಓರ್ವ ಆಟಗಾರ ಸಾಕಷ್ಟು ಆಕ್ರಮಣಕಾರಿಯಾಗಿ ಮುನ್ನಡೆಸುತ್ತಾರೆ. ಇನ್ನೋರ್ವ ಶಾಂತತೆಯಿಮದ ಮುನ್ನಡೆಸುವವರು. ಆದರೆ ಫಲಿತಾಂಶ ಮಾತ್ರ ಒಂದೆ. ಇಬ್ಬರೂ ಕೂಡ ಅತ್ಯಂತ ಪರಿಣಾಮಕಾರಿ. ಅವರಿಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಗೊತ್ತಿದೆ. ಸಹಾಟಗಾರರನ್ನು ಹೇಗೆ ಸ್ಪೂರ್ತಿಗೊಳಿಸಬೇಕೆಂದು ಅರಿವಿದೆ. ಈ ಹಂತದಲ್ಲಿ ಟೀಮ್ ಇಂಡಿಯಾಗೆ ಬೇಕಿರುವುದು ಇದೇ ಎಂದು ಸಬಾ ಕರೀಮ್ ಹೇಳಿದ್ದಾರೆ.

ಟೀಮ್ ಇಮಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ 56 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು 33 ಗೆಲುವು, 13 ಸೋಲು ಹಾಗೂ 10 ಪಂದ್ಯಗಳಲ್ಲಿ ಡ್ರಾ ಫಲಿತಾಂಶವನ್ನು ಪಡೆದಿದ್ದಾರೆ. ಮತ್ತೊಂದೆಡೆ ಅಜಿಂಕ್ಯ ರಹಾನೆ ಈವರೆಗೆ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು 4ರಲ್ಲಿ ಗೆಲುವು ಹಾಗೂ ಒಂದು ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ. ನಾಯಕನಾಗಿ ರಹಾನೆ ಒಂದೇ ಒಂದು ಪಂದ್ಯವನ್ನು ಈವರೆಗೆ ಸೋತಿಲ್ಲ.

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದು ಆಸ್ಟ್ರೇಲಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಂದ ವಿರಾಮದ ಬಳಿಕ ವಿರಾಟ್ ಕೊಹ್ಲಿ ತಂಡಕ್ಕೆ ವಾಪಾಸಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕೊಹ್ಲಿ ನಾಯಕನಾಗಿ ಮುನ್ನಡೆಸಲಿದ್ದು ಅಜಿಂಕ್ಯ ರಹಾನೆ ತಂಡದ ಉಪನಾಯಕನಾಗಿ ಇರಲಿದ್ದಾರೆ.

Story first published: Tuesday, February 2, 2021, 13:05 [IST]
Other articles published on Feb 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+