Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

All England Open Badminton: ಭಾರತೀಯ ಬ್ಯಾಡ್ಮಿಂಟನ್ ಆಟಗಾರರ ಅಭಿಯಾನ ಅಂತ್ಯ

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯ ಸೇನ್ ಸೋಲು ಕಂಡಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಚೀನಾ ಆಟಗಾರನ ಎದುರು ಆಘಾತ ಅನುಭವಿಸಿದರು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪದಕದ ಆಸೆಯನ್ನು ಚಿಗುರಿಸಿದ್ದ ಲಕ್ಷ್ಯ, ಎಂಟರ ಘಟ್ಟದ ಕಾದಾಟದಲ್ಲಿ ಸೋಲು ಅನುಭವಿಸಿದರು. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ 16-21, 11-21 ರಿಂದ ಚೀನಾದ ಲಿ ಶಿ ಫೆಂಗ್ ವಿರುದ್ಧ 45 ನಿಮಿಷಗಳ ಕಾದಾಟದಲ್ಲಿ ಸೋಲು ಕಂಡರು. ಈ ಮೂಲಕ ಲಿ ಶಿ ಫೆಂಗ್, ಲಕ್ಷ್ಯ ವಿರುದ್ಧ ತನ್ನ ಗೆಲುವಿನ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿಕೊಂಡಿದ್ದಾರೆ. ಲಕ್ಷ್ಯ ಈ ಚೀನಿ ಆಟಗಾರನ ವಿರುದ್ಧ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಚೀನಿ ಆಟಗಾರ ಮನಮೋಹಕ ಪ್ರದರ್ಶನ ನೀಡಿದರು. ಚೀನಾದ ಲಿ ಶಿ ಫೆಂಗ್ ಮೊದಲ ಗೇಮ್‌ನಲ್ಲಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು. ಪರಿಣಾಮ ಗೇಮ್‌ನ್ನು ಸುಲಭವಾಗಿ ಗೆದ್ದರು.

All England Open Badminton Lakshya Sen PV Sindhu and Indian Players Exit After Quarterfinal Defeats

ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ಸ್ಥಿರ ಪ್ರದರ್ಶನ ನೀಡಿದರು. ಮಹತ್ವದ ಪಂದ್ಯದಲ್ಲಿ ಲಕ್ಷ್ಯ ಅಂಕ ಬೇಟೆ ನಡೆಸಿ ಲಿ ಶಿ ಫೆಂಗ್ ತಿರುಗೇಟು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಆ ಯೋಜನೆ ಫಲಿಸಲಿಲ್ಲ. ಪರಿಣಾಮ ಸೋಲು ಕಾಣಬೇಕಾಯಿತು.

ಮಹಿಳಾ ಡಬಲ್ಸ್‌ನಲ್ಲೂ ನಿರಾಸೆ

ಗುರುವಾರ ನಡೆದ ಸ್ಪರ್ಧೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅಬ್ಬರಿಸಿದ್ದರು. ಇವರು ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ತಮಗಿಂತ ಹೆಚ್ಚಿನ ಶ್ರೇಯಾಂಕಿತ ಆಟಗಾರನನ್ನು ಮಣಿಸಿದ್ದರು. ಈ ಪಂದ್ಯದಲ್ಲಿ ಲಕ್ಷ್ಯ ಸೇನ್ 21-13, 21-10 ಅಂಕಗಳಿಂದ ಜಾನಿ ಕ್ರಿಸ್ಟಿ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಮಹಿಳೆಯ ಡಬಲ್ಸ್‌ ಸ್ಪರ್ಧೆಯಲ್ಲಿ ಭಾರತದ ಟ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಪುಲ್ಲೇಲ 14-21, 10-21 ರಿಂದ ಚೀನಾದ ತನ್‌ ನಿಂಗ್, ಲಿಯು ಶೆಂಗ್ ಶು ವಿರುದ್ಧ 46 ನಿಮಿಷಗಳ ಕಾದಾಟದಲ್ಲಿ ಸೋಲು ಕಂಡರು.

All England Open Badminton Lakshya Sen PV Sindhu and Indian Players Exit After Quarterfinal Defeats

ಮಹಿಳೆಯರ ಅಭಿಯಾನವೂ ಅಂತ್ಯ

ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋಡ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋಲು ಕಂಡರು. ಎರಡು ಬಾರಿಯ ವಿಶ್ವ ಚಾಂಪಿಯನ್ ಯಮಗುಚಿ ಕೇವಲ 21-16, 21-13 ನೇರ ಗೇಮ್‌ಗಳಿಂದ 33 ನಿಮಿಷಗಳಲ್ಲಿ ಪಂದ್ಯ ಗೆದ್ದರು. ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದರು.

Story first published: Friday, March 14, 2025, 20:46 [IST]
Other articles published on Mar 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+