Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

All England Open Badminton: ಭಾರತ ಸ್ಟಾರ್ ಆಟಗಾರ್ತಿ ಸಿಂಧುಗೆ ಆಘಾತ

ಆಲ್‌ ಇಂಗ್ಲೆಂಡ್‌ ಬ್ಯಾಂಡ್ಮಿಟನ್‌ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ಭಾರತ ಸಿಂಧು 19-21, 11-21ರಿಂದ ದಕ್ಷಿಣ ಕೊರಿಯಾದ ಅನ್ ಸೆ ಯಂಗ್ ವಿರುದ್ಧ ನಿರಾಸೆ ಕಂಡರು.

42 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಆಘಾತ ಅನುಭವಿಸಿದರು. ಈ ವರೆಗೆ ಉಭಯ ಆಟಗಾರ್ತಿಯರು ಆರು ಬಾರಿ ಕಾದಾಟ ನಡೆಸಿದ್ದು, ಎಲ್ಲ ಪಂದ್ಯದಲ್ಲಿ ದಕ್ಷಿಣ ಕೋರಿಯಾ ಆಟಗಾರ್ತಿ ಗೆಲುವು ದಾಖಲಿಸಿದ್ದಾರೆ.

All England Open Badminton Shock for India s star player PV Sindhu

ತಾನೇ ಅಂಕ ನೀಡಿದ ಸಿಂಧು

ಸಿಂಧು ಮೊದಲ ಗೇಮ್‌ನಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಅನ್ ಸೆ ಯಂಗ್ ಅಂಕದ ಬೇಟೆಯನ್ನು ಆರಂಭಿಸಿದರೆ, ಸಿಂಧು ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು. ಒಂದು ಹಂತದಲ್ಲಿ ಸಿಂಧು 4-1ರಿಂದ ಮುನ್ನಡೆ ಸಾಧಿಸಿದ್ದರು.

ಆದರೆ ಬಳಿಕ ಅನ್ ಸೆ ಯಂಗ್ ಅಮೋಘ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಅಲ್ಲದೆ ಫಸ್ಟ್‌ ಆಫ್‌ನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಈ ಅವಧಿಯಲ್ಲಿ ಸಿಂಧು 8-11 ಅಂಕಗಳಿಂದ ಹಿಂದಿದ್ದರು. ಸಿಂಧು ಕಮ್‌ಬ್ಯಾಕ್ ಮಾಡುವ ಸೂಚನೆಯನ್ನು ನೀಡಿದ್ದರು.

All England Open Badminton Shock for India s star player PV Sindhu

ಆದರೆ ಇವರ ಆಸೆಗೆ ಅನ್ ಸೆ ಯಂಗ್ ಸೊಪ್ಪು ಹಾಕಲಿಲ್ಲ. ಮೊದಲ ಗೇಮ್‌ನಲ್ಲಿ 11-17ರಿಂದ ಹಿನ್ನಡೆ ಅನುಭವಿಸಿದ್ದ ಸಿಂಧು ಸತತ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಆದರೂ ಸಹ ಗೇಮ್‌ ಗೆಲ್ಲುವಲ್ಲಿ ಸಫಲರಾಗಲಿಲ್ಲ.

ಪುಟಿದೇಳುವ ಕನಸು ಫ್ಲಾಪ್

ಎರಡನೇ ಗೇಮ್‌ ಗೆದ್ದು ಪಂದ್ಯವನ್ನು ಜೀವಂತವಾಗಿಟ್ಟುಕೊಳ್ಳಬೇಕು ಎಂಬ ಕನಸು ಕಂಡಿದ್ದ ಸಿಂಧು ಆಸೆಗೆ ಆರಂಭದಲ್ಲೇ ಪೆಟ್ಟು ಬಿದ್ದಿತು. ಅನ್ ಸೆ ಯಂಗ್ ಸೊಗಸಾದ ಆಟವನ್ನು ಆಡಿ ಅಂಕಗಳನ್ನು ಕಲೆ ಹಾಕಿದರು. ಈ ಗೇಮ್‌ನ್ನು ಅನ್ ಸೆ ಯಂಗ್ 21-11 ರಿಂದ ಗೆದ್ದು ಬೀಗಿದರು. ಪಂದ್ಯದಲ್ಲಿ ಸಿಂಧು ಶೆಟಲ್‌ನ್ನು ಗ್ರೌಂಡ್‌ ಹೊರಗೆ ಬಾರಿಸಿ ಅಂಕಗಳನ್ನು ಹೆಚ್ಚು ನೀಡಿದರು. ಪರಿಣಾಮ ಅನ್ ಸೆ ಯಂಗ್ ಕೈ ಮೇಲಾಯಿತು.

Story first published: Thursday, March 14, 2024, 17:05 [IST]
Other articles published on Mar 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+