For Quick Alerts
ALLOW NOTIFICATIONS  
For Daily Alerts
 

All England Open: ಫೈನಲ್‌ನಲ್ಲಿ ಮುಗ್ಗರಿಸಿದ ಲಕ್ಷ್ಯ ಸೇನ್

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಅಹಮದಾಬಾದ್‌ನಲ್ಲಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕಣಕ್ಕೆ ಇಳಿದಿತ್ತು. ಇದಕ್ಕೂ ಮೊದಲು ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ್ದರು. ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಗೆದ್ದು ಇತಿಹಾಸ ನಿರ್ಮಿಸುವ ಕನಸನ್ನು ಹೊಂದಿದ್ದರು. ಆದರೆ ಲಿನ್ ಚುನು ಯು ಅವರ ಭರ್ಜರಿ ಆಟದ ಮುಂದೆ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದು, ಪ್ರಶಸ್ತಿ ಗೆಲ್ಲುವ ಆಸೆಗೆ ಪೆಟ್ಟು ಬಿದ್ದಿದೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ಕೊಂಚ ವಿಫಲರಾದರು. 24 ವರ್ಷದ ಸ್ಟಾರ್‌ ಭಾರತದ ಆಟಗಾರ ಲಿನ್ ಚುನ್ ಯು ಅವರ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಮೊದಲ ಗೇಮ್‌ನಿಂದಲೂ ಲಕ್ಷ್ಯ ಸೇನ್‌ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. 57 ನಿಮಿಷಗಳ ಹೋರಾಟದಲ್ಲಿ ಲಕ್ಷ್ಯ ಸೇನ್‌ ಬಂಗಾರದ ಪದಕದ ಪೈಪೋಟಿಯಿಂದ ಹಿಂದೆ ಬಿದ್ದರು.

All England Open

ಇದು ಲಕ್ಷ್ಯ ಸೇನ್ ಅವರ ಎರಡನೇ ಆಲ್ ಇಂಗ್ಲೆಂಡ್ ಓಪನ್ ಫೈನಲ್ ಆಗಿತ್ತು. ಹೀಗಾಗಿ ಲಕ್ಷ್ಯ ಸೇನ್‌ ಸ್ವರ್ಣ ಪದಕ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ಲಕ್ಷ್ಯ ಸೇನ್ 2022ರಲ್ಲೂ ಇದೇ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದರು.

ಲಕ್ಷ್ಯ ಸೇನ್‌ ನಿರಾಸೆ

ಮೊದಲ ಗೇಮ್‌ನಿಂದಲೂ ಲಕ್ಷ್ಯ ಸೇನ್‌ ಅಂಕಗಳಿಕೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಈ ಗೇಮ್‌ನ ಯಾವುದೇ ಹಂತದಲ್ಲೂ ಲಕ್ಷ್ಯ ಸೇನ್‌ ಅಂಕಗಳಿಕೆಯಲ್ಲಿ ಎದುರಾಳಿ ಆಟಗಾರನಿಗೆ ಸವಾಲು ಎಸೆಯಲಿಲ್ಲ. ಈ ಪಂದ್ಯದ ಮೊದಲಾವಧಿಯಲ್ಲಿ ಲಿನ್‌ ಚುನ್‌ 11-9 ರಿಂದ ಮುನ್ನಡೆ ಸಾಧಿಸಿದರು. ಈ ಅವಧಿಯಲ್ಲಿ ಸತತ ಅಂಕಗಳನ್ನು ಕಲೆ ಹಾಕುವಲ್ಲಿ ಲಕ್ಷ್ಯ ವಿಫಲರಾದರು. ಪರಿಣಾಮ ಮೊದಲ ಗೇಮ್‌ನಲ್ಲಿ 15-21 ರಿಂದ ಸೋತರು.

ಎರಡನೇ ಗೇಮ್‌ನ ಆರಂಭದಿಂದಲೂ ಉಭಯ ಆಟಗಾರರು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಪರಿಣಾಮ ಈ ಅವಧಿಯಲ್ಲಿ 4-4 ಅಂಕಗಳಿಂದ ಸಮಬಲ ಸಾಧಿಸಿತು. ಈ ಗೇಮ್‌ನ ಮೊದಲಾವಧಿಯಲ್ಲಿ ಲಕ್ಷ್ಯ ಸೇನ್‌ ಮುನ್ನಡೆ ಸಾಧಿಸಲು ಎಡವಿದರು. ಕೊನೆಯ ಹಂತದ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಚೈನಿಸ್ ತೈಪೇಯ್ ಲಿನ್‌ ಚುನ್‌ ವಿರುದ್ಧ ಜಿದ್ದು ಗೆಲ್ಲುವಲ್ಲಿ ವಿಫಲರಾದರು. ಅಂತಿಮವಾಗಿ ಲಕ್ಷ್ಯ ಸೇನ್‌ 20-22 ರಿಂದ ಪಂದ್ಯ ಸೋತರು.

ಭಾರತದ 25 ವರ್ಷಗಳ ಕಾಯುವಿಕೆಗೆ ಅಂತ್ಯ ಹೇಳುವ ಆಸೆ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮೊದಲು ಭಾರತದ ಪರ 1980 ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2001 ರಲ್ಲಿ ಪುಲ್ಲೇಲ ಗೋಪಿಚಂದ್ ಸ್ವರ್ಣ ಸಾಧನೆ ಮಾಡಿದ್ದರು. ಟೂರ್ನಿಯಲ್ಲಿ ಲಕ್ಷ್ಯ ಸೇನ್‌ ಎರಡನೇ ಬಾರಿಗೆ ಬೆಳ್ಳಿ ಪದಕ ಗೆದ್ದರು. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದರು.

Story first published: Sunday, March 8, 2026, 19:29 [IST]
Other articles published on Mar 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+