ಸಿಪಿಎಲ್ 2020: ಕೆರೆಬಿಯನ್ ನಾಡಿಗೆ ಬಂದಿಳಿದ ಎಲ್ಲಾ ಆಟಗಾರರು ಕೋವಿಡ್ ಪರೀಕ್ಷೆಯಲ್ಲಿ ಪಾಸ್

ಸಿಪಿಎಲ್ ಆಡುವ ಸಲುವಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು ಕೂಡ ಟ್ರಿನಿಡಾಡ್‌ಗೆ ಬಂದಿಳಿದಿದ್ದಾರೆ. ಪ್ರೊಟೋಕಾಲ್ ಪ್ರಕಾರವಾಗಿ ಬಂದಿಳಿದ ಬಳಿಕ ಎಲ್ಲಾ ಆಟಗಾರರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರ ವರದಿಯೂ ನೆಗೆವಿಟ್ ಬಂದಿದೆ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಂಡು ಟೂರ್ನಿಯನ್ನು ನಡೆಸಲಾಗುತ್ತಿದೆ. ಆಟಗಾರರು ಕೆರೆಬಿಯನ್ ನಾಡಿಗೆ ಪ್ರಾಸ ಕೈಗೊಳ್ಳುವ 72 ಗಂಟೆಗಳ ಮುನ್ನ ಕೊವಿಡ್ ಪರೀಕ್ಷೆಯನ್ನು ನಡೆಸಿ ವರದಿ ನೆಗೆಟಿವ್ ಬಂದ ಬಳಿಕವೇ ಆಟಗಾರರಿಗೆ ಪ್ರವಾಸಕ್ಕೆ ಅನುಮತಿಯನ್ನು ನೀಡಲಾಗಿತ್ತು.
ಈ ಪರೀಕ್ಷೆಯ ಸಂದರ್ಭದಲ್ಲಿ ಓರ್ವ ಕ್ರಿಕೆಟಿಗನ ವರದಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದ್ದು ಆ ಆಟಗಾರ ಸೇರಿದಂತೆ ಆತನೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದ ಮತ್ತಿಬ್ಬರು ಕ್ರಿಕೆಟಿಗರು ಕೂಡ ಟೂರ್ನಿಯಿಂದ ಔಟ್ ಆಗಿದ್ದಾರೆ. ಓರ್ವ ಕೋಚ್ ವರದಿ ಕೂಡ ಪಾಸಿಟಿವ್ ಬಂದಿದ್ದು ಅವರಿಗೂ ಪಾಲ್ಗೊಳ್ಳುವ ಅವಕಾಶವಿಲ್ಲ.
ಟ್ರೆನಿಡಾಡ್‌ಗೆ ಆಗಮನಿಸಿದ ಬಳಿಕವೂ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ವರದಿಯಲ್ಲಿ ಎಲ್ಲಾ ಆಟಗಾರರು ಕೂಡ ಕೊರೊನಾ ಮುಕ್ತರಾಗಿರುವುದು ಸಾಬೀತಾಗಿದೆ. ನಿಗದಿಪಡಿಸಿರುವ ಹೋಟೆಲ್‌ಗಳಲ್ಲಿ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಸಿಪಿಎಲ್ ಕಾರ್ಯಾಚರಣಾ ನಿರ್ದೇಶಕರಾಗಿರುವ ಮೈಕಲ್ ಹಾಲ್ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಟಗಾರರ ಸುರಕ್ಷತೆ ಹಾಗೂ ಆರೋಗ್ಯ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಟ್ರಿನಿಡಾಡ್ ಮತ್ತು ಟೊಬಾಗೊಗೆ ಸೇರಿಸುವ ದೊಡ್ಡ ಪ್ರಯತ್ನ ಇದಾಗಿತ್ತು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications