For Quick Alerts
ALLOW NOTIFICATIONS  
For Daily Alerts
 

ಅಫ್ಘಾನ್ ವಿರುದ್ಧ ಶಕೀಬ್ ಅಲ್ ಹಸನ್ ಸ್ಫೋಟಕ ಬ್ಯಾಟಿಂಗ್, ಬಾಂಗ್ಲಾಕ್ಕೆ ಜಯ

All-round Shakib Al Hasan leads Bangladesh to 4-wicket win over Afghanistan

ಚಿತ್ತಗಾಂಗ್, ಸೆಪ್ಟೆಂಬರ್ 22: ನಾಯಕ ಶಕೀಬ್ ಅಲ್ ಹಸನ್ ಅವರ ಸ್ಫೋಟಕ ಬ್ಯಾಟಿಂಗ್, ಆಲ್ ರೌಂಡರ್ ಆಟದ ನೆರವಿನಿಂದ ಶನಿವಾರ (ಸೆಪ್ಟೆಂಬರ್ 21) ನಡೆದ ಅಫ್ಘಾನಿಸ್ತಾನ ವಿರುದ್ಧದ ತ್ರಿಕೋನ ಸರಣಿಯ 6ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 4 ವಿಕೆಟ್‌ ಜಯ ಗಳಿಸಿದೆ.

ಬಾಂಗ್ಲಾದ ಚಿತ್ತಗಾಂಗ್‌ನ ಝಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನ್-ಬಾಂಗ್ಲಾದೇಶ-ಜಿಂಬಾಬ್ವೆ ನಡುವಣ ತ್ರಿಕೋನ ಸರಣಿಯ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಶಕೀಬ್ 45 ಎಸೆತಗಳಿಗೆ 70 ರನ್ ಕೊಡುಗೆಯಿತ್ತರು. ಅಲ್ಲದೆ ಎದುರಾಳಿ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ಕೂಡ ಪಡೆದಿದ್ದರಿಂದ ಬಾಂಗ್ಲಾ ಸುಲಭ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ, ರಹಮನುಲ್ಲ ಗುರ್ಬಾಝ್ 29, ಹಝರತುಲ್ಲ ಝಝಾಯ್ 47, ಶಫೀಕುಲ್ಲ ಶಫೀಕ್ 23 ರನ್‌ ಕೊಡುಗೆಯಿಂದ 20 ಓವರ್‌ಗೆ 7 ವಿಕೆಟ್ ಕಳೆದು 138 ರನ್ ಮಾಡಿತು. ಅಫ್ಘಾನ್ ಇನ್ನಿಂಗ್ಸ್‌ನಲ್ಲಿ ಅಫಿಫ್ ಹೊಸೈನ್ 2 ವಿಕೆಟ್‌ನಿಂದ ಗಮನ ಸೆಳೆದರು.

ಗುರಿ ಬೆನ್ನತ್ತಿದ ಬಾಂಗ್ಲಾ, ಶಕೀಬ್ 70, ಮುಷ್ಫಿಕರ್ ರಹೀಮ್ 26, ಮೊಸದ್ದೇಕ್ ಹೊಸೈನ್ 19 ರನ್‌ ಸೇರ್ಪಡೆಯೊಂದಿಗೆ 19 ಓವರ್‌ಗೆ 6 ವಿಕೆಟ್‌ ನಷ್ಟದಲ್ಲಿ 139 ರನ್ ಗಳಿಸಿತು. ನವೀನ್ ಉಲ್ ಹಕ್ ಮತ್ತು ಅಫ್ಘಾನ್ ನಾಯಕ ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು. ಶಕೀಬ್‌ ಅಲ್ ಹಸನ್ ಪಂದ್ಯಶ್ರೇಷ್ಠರೆನಿಸದರು. ಸೆಪ್ಟೆಂಬರ್ 24ರ ಫೈನಲ್‌ನಲ್ಲಿ ಬಾಂಗ್ಲಾ-ಅಫ್ಘಾನ್ ಕಾದಾಡಲಿವೆ.

Story first published: Sunday, September 22, 2019, 17:48 [IST]
Other articles published on Sep 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+