Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೆಗಲಿಗೆ ಇಂಗ್ಲೆಂಡ್ ಟೆಸ್ಟ್ ನಾಯಕತ್ವ ಬಹುತೇಕ ಪಕ್ಕಾ

All-rounder Ben Stokes set to be England’s new Test captain

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಇತ್ತೀಚೆಗಷ್ಟೇ ನಾಯಕತ್ವದಿಂದ ಕೆಳಕ್ಕಿಳಿದಿದ್ದಾರೆ. ಆ್ಯಶಸ್ ಹೀನಾಯ ಸೋಲಿನ ನಂತರ ಜೋ ರೂಟ್ ತನ್ನ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಿನ ನಾಯಕನ ಘೋಷಣೆಗೆ ಸಜ್ಜಾಗಿದೆ. ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಮುಂದಿನ ನಾಯಕನಾಗುವ ಸಾಧ್ಯತೆ ಹೆಚ್ಚಿದೆ. ಈ ವಿಚಾರವಾಗಿ ಬೆನ್ ಸ್ಟೋಕ್ಸ್ ಜೊತೆಗೆ ಮಂರಳಿ ಮಾತುಕತೆ ನಡೆಸಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ನೂತನ ಕಾರ್ಯನಿರ್ವಾಹಕ ನಿರ್ದೇಶಕ ರಾಬ್ ಕೀ ಜೊತೆಗೆ ಮಾತುಕತೆ ನಡೆಸಿದ ಬಳಿಕ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಳ್ಳಲು ಬೆನ್ ಸ್ಟೋಕ್ಸ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ತಂಡದ ಅನುಭವಿ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಸಿಬಿಯ ಎಂಡಿಯಾಗಿ ರಾಬ್ ಕೀ ಅಧಿಕಾರ ವಹಿಸಿಕೊಂಡ ಬಳಿಕ ಬೆನ್ ಸ್ಟೋಕ್ಸ್ ಮೊದಲ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಬೆನ್ ಸ್ಟೋಕ್ಸ್ ಅವರನ್ನು ಟೆಸ್ಟ್ ತಮಡದ ನಾಯಕನನ್ನಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಘೋಷಣೆ ಮಾಡುವ ನಿರೀಕ್ಷೆಯಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ ಇಸಿಬಿ ಎಂಡಿ ರಾಬ್ ಕೀ ಗುರುವಾರ ಲಾರ್ಡ್ಸ್‌ನಲ್ಲಿ ತನ್ನ ಮೊದಲ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕೆಲ ಕಾಲ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಈ ಬೇಸಿಗೆಯಲ್ಲಿ ಬೆನ್ ಸ್ಟೋಕ್ಸ್ ಮತ್ತೆ ಪೂರ್ಣ ಪ್ರಮಾಣದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧಧ ಸರಣಿಯಿಂದ ಅನುಭವಿ ಆಟಗಾರರಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಹೊರಗಿಡಲಾಗಿತ್ತು. ಬೆನ್ ಸ್ಟೋಕ್ಸ್ ತಂಡದ ನಾಯಕತ್ವ ವಹಿಸಿಕೊಮಡ ಬಳಿಕ ಈ ಇಬ್ಬರು ಅನುಭವಿ ಆಟಗಾರರು ಕುಡ ಮತ್ತೆ ತಮಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್‌ನ ಮುಂದಿನ ಬೇಸಿಗೆಯ ಸಂಪೂರ್ಣ ಅವಧಿಗೆ ಈ ಇಬ್ಬರು ಆಟಗಾರರು ಕೂಡ ಲಭ್ಯವಾಗಲಿದ್ದಾರೆ.

ಇನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟೆಸ್ಟ್ ತಂಡಕ್ಕೆ ನೂತನ ಕೋಚ್ ಆಯ್ಕೆಯ ಬಗ್ಗೆಯೂ ರಾಬ್ ಕೀ ಉತ್ಸುಕರಾಗಿದ್ದಾರೆ. ವೈಟ್‌ಬಾಲ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಪ್ರತ್ಯೇಕ ಮುಖ್ಯ ಕೋಚ್‌ಗಳನ್ನು ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂಲಗಳ ವರದಿಯ ಪ್ರಕಾರ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಭಾರತದ ಮಾಜಿ ಕೋಚ್ ಗ್ಯಾರಿ ಕಿರ್ಸ್ಟನ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡರೆ ಸೈಮನ್ ಕ್ಯಾಟಿಚ್ ವೈಟ್‌ಬಾಲ್ ತಂಡದ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Story first published: Thursday, April 28, 2022, 10:00 [IST]
Other articles published on Apr 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+