ಕಂಗನಾ ರಾಣಾವತ್‌ಗೆ ಕುಟುಕಿದ ಮಾಜಿ ಆಲ್ ರೌಂಡರ್ ಪಠಾಣ್

ನವದೆಹಲಿ: ದ್ವೇಷದ ಟ್ವೀಟ್‌ಗಳಿಂದಾಗಿ ಯಾವಾಗ ತನ್ನ ಟ್ವಿಟರ್ ಅಕೌಂಟ್ ಅಮಾನತಾಯಿತೋ ಆವತ್ತಿನಿಂದ ಬಾಲಿವುಡ್ ನಟಿ ಕಂಗನಾ ರಾಣಾವತ್ ಇನ್‌ಸ್ಟಾಗ್ರಾಮ್‌ನಲ್ಲಿ ಬೇರೆ ಬೇರೆ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಘರ್ಷದ ಕುರಿತಾಗಿ ಇಸ್ರೇಲ್‌ಗೆ ಬೆಂಬಲಿಸಿ ರಾಣಾವತ್ ಹೀಗೆ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಸಂಘರ್ಷದ ವಿಚಾರದಲ್ಲಿ ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಪ್ಯಾಲೆಸ್ತೈನ್‌ಗೆ ಅನುಕಂಪ ತೋರಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಯುಪಿಯ ಬಿಜೆಪಿ ಎಂಎಲ್‌ಎ ದಿನೇಶ್ ಚೌಧರಿ, ಪಠಾಣ್ ಬೆಂಗಾಲ್‌ನಲ್ಲಿನ ಗಲಭೆ ವೇಳೆ ಸುಮ್ಮನಿದ್ದು ಈಗ ಪ್ರತಿಕ್ರಿಯಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಮುಂದಿಟ್ಟುಕೊಂಡು ರಾಣಾವತ್ ಪೋಸ್ಟ್‌ಗಳನ್ನು ಮಾಡಿದ್ದರು. ಬೆಂಗಾಲ್ ಗಲಭೆಯ ವೇಳೆ ಪಠಾಣ್ ಸುಮ್ಮನಿದ್ದರು ಎಂದು ಉದ್ದುದ್ದಕ್ಕೆ ಬರೆದು ಪಠಾಣ್ ಕೆಣಕಿದ್ದರು. ಇದಕ್ಕೆ ಪಠಾಣ್ ಪ್ರತಿಕ್ರಿಯಿಸಿದ್ದಾರೆ. ನಾನು ಮಾಡಿರುವ ಟ್ವೀಟ್‌ಗಳು ಒಂದೋ ಮನುಷ್ಯರಿಗೆ ಅಥವಾ ದೇಶಿಗರಿಗೆ ಸಂಬಂಧಿಸಿದೆ ಹೊರತು ದ್ವೇಷ ಹರಡುವವರಿಗಲ್ಲ ಎಂಬರ್ಥದಲ್ಲಿ ಪಠಾಣ್ ಟ್ವೀಟ್ ಮಾಡಿದ್ದಾರೆ.
'ನನ್ನೆಲ್ಲಾ ಟ್ವೀಟ್‌ಗಳು ಒಂದೋ ಮನುಷ್ಯತ್ವಕ್ಕಾಗಿ ಅಥವಾ ದೇಶ ಪ್ರೇಮಿಗಾಗಿ. ಯಾಕೆಂದರೆ ನಾನು ದೊಡ್ಡ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದೇ. ದ್ವೇಷ ಹರಡಿ ಟ್ವಿಟರ್‌ನಿಂದ ಕಿತ್ತೊಗೆಯಲ್ಪಟ್ಟ ಕಂಗನಾ ಅವರಂತ ವ್ಯಕ್ತಿಗಳು ನನಗೆ ಕೌಂಟರ್ ಕೊಡಬೇಕಾಗಿಲ್ಲ,' ಎಂದು ಪಠಾಣ್ ಖಾರವಾಗೇ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications