ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಇನ್ಮುಂದೆ ಇಂಟರ್ ನ್ಯಾಷನಲ್ ಕ್ರಿಕೆಟರ್!

ಲಂಡನ್, ಮೇ 3: ಇಂಗ್ಲೆಂಡ್ ಕ್ರಿಕೆಟರ್ ಜೋಫ್ರಾ ಆರ್ಚರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದರಲ್ಲಿದ್ದಾರೆ. ಇಯಾನ್ ಮಾರ್ಗನ್ ಮುಂದಾಳತ್ವದ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಮಲಹೈಡ್ ನಲ್ಲಿ ಶುಕ್ರವಾರ (ಮೇ 3) ಏಕದಿನ ಪಂದ್ಯವನ್ನಾಡಲಿದೆ. ಇದರಲ್ಲಿ ಆರ್ಚರ್ ಕೂಡ ಕಣಕ್ಕಿಳಿಯಲಿದ್ದಾರೆ. ಆರ್ಚರ್ ಜೊತೆ ಬೆನ್ ಫೋಕ್ಸ್, ದಾವಿದ್ ಮಲಾನ್ ಕೂಡ ಪಾದಾರ್ಪಣೆ ಮಾಡಲಿದ್ದಾರೆ.
ಬರ್ಬೊಡಾಸ್‌ನಲ್ಲಿ ಜನಿಸಿದ 24ರ ಹರೆಯದ ಆಲ್ ರೌಂಡರ್ ಆರ್ಚರ್ ಈ ಮೊದಲು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಿದ್ದರು. ಅವರನ್ನು ಕಳೆದ ತಿಂಗಳಷ್ಟೇ ಚೊಚ್ಚಲ ಬಾರಿಗೆ ಹಿರಿಯರ ಇಂಗ್ಲೆಂಡ್ ತಂಡಕ್ಕೆ ಹೆಸರಿಸಲಾಗಿತ್ತು. ಆದರೆ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಪ್ರಕಟಿಸಿದ್ದ 15 ಜನರ ತಂಡದಲ್ಲಿ ಜೋಫ್ರಾಗೆ ಸ್ಥಾನ ನೀಡಿರಲಿಲ್ಲ.
ಐರ್ಲೆಂಡ್ ವಿರುದ್ಧದ ಏಕಮಾತ್ರ ಏಕದಿನ ಪಂದ್ಯದಲ್ಲಿ ಮತ್ತು ಮೇ 5ರಿಂದ ಆರಂಭಗೊಳ್ಳುವ ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸ ಸರಣಿಯಲ್ಲಿ ಆರ್ಚರ್ ಉತ್ತಮ ಪ್ರದರ್ಶನ ನೀಡಿದರೆ ಮೇ 23ರಂದು ವಿಶ್ವಕಪ್ ತಂಡವನ್ನು ಅಂತಿಮ ಗೊಳಿಸುವಾಗ ಇಂಗ್ಲೆಂಡ್, ಆರ್ಚರ್ ಅವರನ್ನು ಪರಿಗಣಿಸಲೂಬಹುದು. ಪಾಕಿಸ್ತಾನ ವಿರುದ್ಧದ ಸರಣಿಯು ಒಂದು ಟಿ20 ಮತ್ತು 5 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications