Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕಲ್ಯಾಣ ಯೋಗ

ಬೆಂಗಳೂರು, ಡಿಸೆಂಬರ್ 21: ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕಲ್ಯಾಣ ಯೋಗ ಕೂಡಿ ಬಂದಿದೆ. ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಣ್ಣ ಕೃನಾಲ್ ಅವರು ಮುಂದಿನ ವಾರ ಹಸೆಮಣೆ ಏರಲಿದ್ದಾರೆ.

ಕೃನಾಲ್ ಹಾಗು ಪಂಖೂರಿ ಶರ್ಮ ಅವರು ತಮ್ಮ ಮದುವೆ ಬಗ್ಗೆ ವಿಶಿಷ್ಟವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

All-rounder Krunal Pandya to tie knot with Pankhuri Sharma

ಕ್ರಿಕೆಟ್ ಥೀಮ್ ನಲ್ಲಿರುವ ಈ ಚಿತ್ರಗಳು ಕಪ್ಪು-ಬಿಳಿಪಿನ ಶೇಡ್ ನಲ್ಲಿದ್ದು ಆಕರ್ಷಕವಾಗಿದೆ. 'ನನ್ನ ಪ್ರೀತಿಪಾತ್ರರು ಮದುವೆಯಾಗುತ್ತಿದ್ದಾರೆ, ನನಗೆ ತುಂಬಾ ಖುಷಿ' ಎಂದು ಹಾರ್ದಿಕ್ ಪಟೇಲ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ ಪರ ಆಡುವ ಕೃನಾಲ್ ಅವರು ಇತ್ತೀಚಿಗೆ ಇಂಡಿಯಾ ಎ ಪರ ಕೂಡಾ ಆಡಿದ್ದರು.

All-rounder Krunal Pandya to tie knot with Pankhuri Sharma

'ನಮ್ಮ ಮದುವೆ ಗುರು ಹಿರಿಯರು ನಿಶ್ಚಯಿಸಿದಂತೆ ನಡೆಯಲಿದೆ. ಸ್ನೇಹಿತರು, ಆಪ್ತೇಷ್ಟರ ಸಮ್ಮುಖದಲ್ಲಿ ಸಂಪ್ರದಾಯಬದ್ಧ ಮದುವೆ ಹಾಗೂ ಸಂಜೆಗೆ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಾನು ಮದುವೆಯಾಗುತ್ತಿರುವ ಹುಡುಗಿ ತುಂಬಾ ಸ್ನೇಹಪರ, ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+