Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ ಆಯ್ಕೆ

All-rounder Shakib Al Hasan appointed as Bangladeshs Test skipper

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಕಳೆದುಕೊಂಡಿರುವ ಬಾಂಗ್ಲಾದೇಶದ ನಾಯಕತ್ವದಿಂದ ಮಾಮಿನಲ್ ಹಕ್ ಕೆಳಗಿಳಿದಿದ್ದಾರೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ನೂತನ ನಾಯಕನನ್ನು ಹೆಸರಿಸಲಾಗಿದೆ. ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ಟೆಸ್ಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಲಿಟನ್ ದಾಸ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಕಗೊಳಿಸಲಾಗಿದೆ.

ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿತು. ಆದರೆ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಅಮೋಘ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶದ ವಿರುದ್ಧ ಮೇಲುಗೈ ಸಾಧಿಸಿತು. ಎರಡು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ವೈಫಲ್ಯವನ್ನು ಅನುಭವಿಸಿದ್ದು ಹೀನಾಯವಾಗಿ ಈ ಪಂದ್ಯವನ್ನು ಬಾಂಗ್ಲಾದೇಶ ಸೋತಿತು.

ಮಂಡಳಿ ಮುಂದೆ ನಿರ್ಧಾರ ತಿಳಿಸಿದ್ದ ಮಾಮಿನಲ್ ಹಕ್

ಮಂಡಳಿ ಮುಂದೆ ನಿರ್ಧಾರ ತಿಳಿಸಿದ್ದ ಮಾಮಿನಲ್ ಹಕ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ನಾಯಕನಾಗಿದ್ದ ಮಾಮಿನಲ್ ಹಾಕ್ಯೂ ಲಂಕಾ ಮಂಡಳಿಯನ್ನು ಸಂಪರ್ಕಿಸಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಬಿಸಿಬಿ ಮುಖ್ಯಸ್ಥ ನಜ್ಮುಲ್ ಹಸನ್ ಜೊತೆಗೆ ಮಾತನಾಡಿದ ಹಕ್ ನಾಯಕತ್ವದ ಜವಾಬ್ಧಾರಿಯಿಂದ ಕೆಳಗಿಳಿದು ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಬಯಸುವುದಾಗಿ ತಿಳಿಸಿದ್ದರು. ನಾಯಕತ್ವದ ಹೊಣೆಗಾರಿಕೆಯನ್ನು ಬೇರೊಬ್ಬರಿಗೆ ವಹಿಸಲು ಮನವಿ ಮಾಡಿದ್ದರು.

ತಂಡಕ್ಕೆ ಸ್ಪೂರ್ತಿ ನೀಡಲು ಸಾಧ್ಯವಾಗುತ್ತಿಲ್ಲ

ತಂಡಕ್ಕೆ ಸ್ಪೂರ್ತಿ ನೀಡಲು ಸಾಧ್ಯವಾಗುತ್ತಿಲ್ಲ

ಇನ್ನು ನಾಯಕತ್ವದಿಂದ ಕೆಳಗಿಳಿದ ಬಳಿಕ ಕ್ರಿಕ್‌ಬಜ್‌ಗೆ ಪ್ರತಿಕ್ರಿಯೆ ನೀಡಿರುವ ಮಾಮಿನಲ್ ಹಕ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಮಂಡಳಿ ಜೊತೆಗೆ ಮಾತನಾಡಿದ್ದು ಅವರಲ್ಲಿ ನಾಯಕನಾಗಿ ನನ್ನಿಂದ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ, ತಂಡಕ್ಕೆ ಸ್ಪೂರ್ತಿ ತುಂಬಲು ವಿಫಲವಾಗುತ್ತಿದ್ದೇನೆ. ಹಾಗಾಗಿ ಯಾರಾದರು ಬೇರೆಯವರಿಗೆ ಈ ಜವಾಬ್ಧಾರಿಯನ್ನು ನೀಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ನನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಅವರಿಗೆ ವಿವರರಿಸಿದ್ದೇನೆ. ಉಳಿದಿರುವುದು ಅವರಿಗೆ ಬಿಟ್ಟ ವಿಚಾರ" ಎಂದು ಮಾಮಿನಲ್ ಹಕ್ ಪ್ರತಿಕ್ರಿಯೆ ನೀಡಿದ್ದರು.

ಮೂರನೇ ಬಾರಿಗೆ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುತ್ತಿರುವ ಶಕೀಬ್

ಮೂರನೇ ಬಾರಿಗೆ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುತ್ತಿರುವ ಶಕೀಬ್

ಇನ್ನು ಶಕೀಬ್ ಅಲ್ ಹಸನ್ ಈ ಮೂಲಕ ಮೊದಲ ಮೂರನೇ ಬಾರಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. 2009ರಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅಂದಿನ ನಾಯಕ ಮುಶ್ರಫೆ ಮೊರ್ತಾಜ ಗಾಯಗೊಂಡಿದ್ದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿಗೆ ನಾಯಕತ್ವದ ಹಿಣೆಗಾರಿಕೆ ವಹಿಸಿಕೊಂಡಿದ್ದರು. ಅದಾದ ಬಳಿಕ 2017ರಲ್ಲಿ ಮುಶ್ಫಿಕರ್ ರಹೀಮ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಮುನ್ನಡೆಸಿದ್ದರು.

Virat ಮಾಡಿದ ಒಂದೇ ಒಂದು ಪದದ ಟ್ವೀಟ್ ಈ ಥರಾ ದಾಖಲೆ ಸೃಷ್ಟಿ ಮಾಡುತ್ತಾ? | #Cricket | OneIndia Kannada
ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ ಬಾಂಗ್ಲಾ

ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ ಬಾಂಗ್ಲಾ

ಬಾಂಗ್ಲಾದೇಶ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡು ಈ ಸರಣಿಯನ್ನಾಡಲಿದೆ ಬಾಂಗ್ಲಾ. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ ಆಡಲಿದ್ದು ಜೂನ್ 16ರಿಂದ ಈ ಸರಣಿ ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ ವೈಟ್‌ಬಾಲ್ ಸರಣಿ ಕೂಡ ನಡೆಯಲಿದ್ದು ಮೂರು ಟಿ20 ಹಾಗು ಮೂರು ಏಕದಿನ ಪಂದ್ಯಗಳ ಸರಣಿ ಆಯೋಜನೆಯಾಗಲಿದೆ.

Story first published: Friday, June 3, 2022, 10:14 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+