ಸುಂದರ್ ಸೂಪರ್ ಆಟ, ಇಂಡಿಯಾ ರೆಡ್ ತಂಡಕ್ಕೆ ದುಲೀಪ್ ಟ್ರೋಫಿ
ಲಕ್ನೋ, ಸೆ. 29: ತಮಿಳುನಾಡಿನ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಸೂಪರ್ ಆಟದ ನೆರವಿನಿಂದ ದಿನೇಶ್ ಕಾರ್ತಿಕ್ ನೇತೃತ್ವದ ಇಂಡಿಯಾ ರೆಡ್ ತಂಡವು ದುಲೀಪ್ ಟ್ರೋಫಿ ಚಾಂಪಿಯನ್ ಎನಿಸಿಕೊಂಡಿದೆ.
ವಾಷಿಂಗ್ಟನ್ ಸುಂದರ್ (87ಕ್ಕೆ 6) ಮಾರಕ ದಾಳಿಯ ನೆರವಿನಿಂದ ಇಂಡಿಯಾ ರೆಡ್ ತಂಡ 163 ರನ್ಗಳಿಂದ ಸುರೇಶ್ ರೈನಾ ಸಾರಥ್ಯದ ಇಂಡಿಯಾ ಬ್ಲೂ ತಂಡವನ್ನು ಸೋಲಿಸಿತು. ಈ ಮೂಲಕ ಕಳೆದ ಬಾರಿಯ ಚಾಂಪಿಯನ್ ಇಂಡಿಯಾ ಬ್ಲೂ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ರೆಡ್ ತಂಡ ಚಾಂಪಿಯನ್ ಆಗಿದೆ.

ಗೆಲುವಿಗೆ 393 ರನ್ ಸವಾಲು ಪಡೆದ ಇಂಡಿಯಾ ಬ್ಲೂ ತಂಡವು ಇನ್ನೂ ಒಂದು ದಿನದ ಆಟ ಬಾಕಿ ಇರುವಂತೆಯೇ ಸೋಲು ಕಂಡಿತು. ಬ್ಲೂ ತಂಡದ ಪರ ಭಾರ್ಗವ್ ಭಟ್(51) ಬಿಟ್ಟರೆ ಮಿಕ್ಕವರು ಬ್ಯಾಟಿಂಗ್ ವೈಫಲ್ಯ ಕಂಡರು. ಬ್ಲೂ ತಂಡ 229 ಸ್ಕೋರಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್:
ಇಂಡಿಯಾ ರೆಡ್: 483 ಮತ್ತು 208 (ಅಕ್ಷಯ್ ವಾಖರೆ 66ಕ್ಕೆ4),
ಇಂಡಿಯಾ ಬ್ಲೂ: 299 ಮತ್ತು 229 (ಭಾರ್ಗವ್ 51, ರೈನಾ 45, ಮನೋಜ್ ತಿವಾರಿ 38, ವಾಷಿಂಗ್ಟನ್ 66ಕ್ಕೆ 4, ವಿಜಯ್ ಗೊಹಿಲ್ 102ಕ್ಕೆ 3)
17 ವರ್ಷದ ವಾಷಿಂಗ್ಟನ್ ದುಲೀಪ್ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಹಾಗೂ 10 ವಿಕೆಟ್ ಗೊಂಚಲು ಪಡೆದ ಮೊದಲ ಕ್ರಿಕೆಟರ್ ಎನಿಸಿಕೊಂಡರು. 88 ಗರಿಷ್ಠ ರನ್ ಸೇರಿದಂತೆ ದುಲೀಪ್ ಟ್ರೋಫಿ ಪಂದ್ಯದಲ್ಲಿ 181ರನ್ಗೆ 11 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications