For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ ಆಲ್‌ರೌಂಡರ್‌ಗಳು

ಐಪಿಎಲ್ 2024 ರ ಸಿದ್ಧತೆಗಳು ಆರಂಭವಾಗಿವೆ. ಪಂದ್ಯಾವಳಿಯ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಐಪಿಎಲ್‌ನಲ್ಲಿ ತಮ್ಮದೇ ಆಟದ ಧಾಟಿಯಿಂದಲೇ ಟೂರ್ನಿಯ ಹಲವು ಆಟಗಾರರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಆಟಗಾರರ ಪಟ್ಟಿ ಇಲ್ಲಿದೆ.

ಐಪಿಎಲ್‌ನಲ್ಲಿ ಎಲ್ಲ ಮಾಲೀಕರ ಚಿತ್ತವನ್ನು ಆಲ್‌ರೌಂಡರ್‌ಗಳು ಕದ್ದಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಹೀಗಾಗಿ ಈ ಪ್ಲೇಯರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

All-rounders who have made their mark in IPL history

ಆಲ್ ರೌಂಡರ್‌ಗಳ ಬಗ್ಗೆ ಕಣ್ಣು ಹಾಯಿಸಿದರೆ ಅಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ವೆಸ್ಟ್‌ ಇಂಡೀಸ್ ಪ್ಲೇಯರ್‌ಗಳಿಗೆ. ಮುಂಬೈ ಇಂಡಿಯನ್ಸ್‌ನ ಮಾಜಿ ಆಟಗಾರ ಕೀರಾನ್ ಪೊಲಾರ್ಡ್‌ ತಮ್ಮ ಧಮಾಕೆದಾರ್ ಆಟದಿಂದ ಎಲ್ಲರ ಚಿತ್ತ ಕದಿದ್ದಾರೆ. ಪೊಲಾರ್ಡ್ ತಮ್ಮ ವೃತ್ತಿಜೀವನದಲ್ಲಿ 189 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 171 ಇನ್ನಿಂಗ್ಸ್‌ಗಳಲ್ಲಿ, 3412 ರನ್ ಗಳಿಸಿದ್ದು, 69 ವಿಕೆಟ್‌ಗಳನ್ನು ಪಡೆದರು.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಪ್ಲೇಯರ್‌ ಆಂಡ್ರೆ ರಸೆಲ್. ರಸೆಲ್ ಇದುವರೆಗೆ 112 ಪಂದ್ಯಗಳನ್ನು ಆಡಿದ್ದಾರೆ, 96 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು 174 ಸ್ಟ್ರೈಕ್ ರೇಟ್‌ನೊಂದಿಗೆ 2262 ರನ್ ಸಿಡಿಸಿದ್ದಾರೆ ಮತ್ತು ಬೌಲಿಂಗ್‌ನಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.

All-rounders who have made their mark in IPL history

ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ತಮ್ಮ ವೃತ್ತಿಜೀವನದಲ್ಲಿ 145 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 141 ಇನ್ನಿಂಗ್ಸ್‌ಗಳಲ್ಲಿ ಅವರು 30.99 ಸರಾಸರಿಯಲ್ಲಿ 3874 ರನ್ ಗಳಿಸಿದ್ದು, 105 ಇನ್ನಿಂಗ್ಸ್‌ಗಳಲ್ಲಿ 92 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಇದುವರೆಗೆ 71 ಪಂದ್ಯಗಳ 52 ಇನ್ನಿಂಗ್ಸ್‌ಗಳಲ್ಲಿ 793 ರನ್ ಗಳಿಸಿದ್ದಾರೆ ಮತ್ತು ಬೌಲಿಂಗ್‌ನಲ್ಲಿ 63 ವಿಕೆಟ್ ಪಡೆದಿದ್ದಾರೆ.

All-rounders who have made their mark in IPL history

ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭರ್ಜರಿ ಆಟದಿಂದ ಗಮನ ಸೆಳೆದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ತನ್ನದಾಗಿಸಿಕೊಂಡಿದ್ದರ ಹಿಂದೆ ಇವರ ಪಾತ್ರ ಬಹು ಮುಖ್ಯ. ಅಲ್ಲದೆ 2023 ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಇವರು ವಿಫಲರಾಗಿದ್ದಾರೆ. ಬೆನ್ ಸ್ಟೋಕ್ಸ್‌ ಐಪಿಎಲ್‌ ವೃತ್ತಿ ಜೀವನ ನೋಡೋದಿರೆ, ಇವರು 45 ಪಂದ್ಯಗಳ 44 ಇನ್ನಿಂಗ್ಸ್‌ಗಳಲ್ಲಿ 935 ರನ್ ಗಳಿಸಿದ್ದಾರೆ ಮತ್ತು ಬೌಲಿಂಗ್‌ನಲ್ಲಿ 28 ವಿಕೆಟ್ ಪಡೆದಿದ್ದಾರೆ.

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಐಪಿಎಲ್‌ನಲ್ಲೂ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಇವರು 226 ಐಪಿಎಲ್‌ನ 172 ಇನ್ನಿಂಗ್ಸ್‌ಗಳಲ್ಲಿ 2677 ರನ್ ಗಳಿಸಿದ್ದಾರೆ ಮತ್ತು ಬೌಲಿಂಗ್‌ನಲ್ಲಿ 152 ವಿಕೆಟ್ ಪಡೆದಿದ್ದಾರೆ.

Story first published: Sunday, December 17, 2023, 12:50 [IST]
Other articles published on Dec 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+