ಐಪಿಎಲ್ ಇತಿಹಾಸದ ಎಲ್ಲಾ ಸೂಪರ್ ಓವರ್ ಪಂದ್ಯಗಳ ಸಂಪೂರ್ಣ ಪಟ್ಟಿ

ಬೆಂಗಳೂರು: ಭಾರತದ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಐಪಿಎಲ್ ಆರಂಭವಾಗಿ ಇವತ್ತಿನವರೆಗೆ ಒಟ್ಟಿಗೆ 13+ ಸೂಪರ್ ಓವರ್ ಪಂದ್ಯಗಳು ನಡೆದಿವೆಯೆಂದರೆ ಟೂರ್ನಿ ಎಷ್ಟರ ಮಟ್ಟಿಗೆ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದೆ ಅನ್ನೋದನ್ನು ನಾವು ಊಹಿಸಿಕೊಳ್ಳಬಹುದು. ಅದರಲ್ಲೂ 2020ರ ಆವೃತ್ತಿಯಲ್ಲಿ ಅತೀ ಹೆಚ್ಚಿನ ಸೂಪರ್ ಓವರ್ ಪಂದ್ಯಗಳು ನಡೆದು ಹೊಸ ದಾಖಲೆಯೇ ಸೃಷ್ಠಿಯಾಗಿದೆ.
ಸೂಪರ್ ಓವರ್‌ಗಳ ವಿಚಾರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದ್ದೆಂದರೆ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ. ಯಾಕೆಂದರೆ ಈ ಆವೃತ್ತಿಯಲ್ಲಿ ಒಂದೇ ದಿನ 3 ಸೂಪರ್ ಓವರ್ ಪಂದ್ಯಗಳು ನಡೆದ ದಾಖಲೆ ನಿರ್ಮಾಣವಾಗಿದೆ. ಅದರಲ್ಲೂ ಇತ್ತಂಡಗಳ ಪಂದ್ಯ ಎರಡು ಸೂಪರ್ ಸೂಪರ್ ಓವರ್‌ಗಳೊಂದಿಗೆ ಮುಕ್ತಾಯಗೊಂಡಿದ್ದು ಇದೇ ಮೊದಲು.
ಐಪಿಎಲ್ ಇತಿಹಾಸದಲ್ಲಿ ನಡೆದ ಎಲ್ಲಾ ಸೂಪರ್ ಓವರ್‌ಗಳು ಮತ್ತು ಅದರ ಫಲಿತಾಂಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಒಂದೇ ದಿನ 3 ಸೂಪರ್ ಓವರ್‌ಗಳು
ಐಪಿಎಲ್ ಇತಿಹಾಸದಲ್ಲಿ ಒಂದೇ ದಿನ 3 ಸೂಪರ್ ಓವರ್‌ಗಳು ನಮಗೆ ಕಾಣಸಿಕ್ಕಿದ್ದೆಂದರೆ ಅದು 2020ರ ಅಕ್ಟೋಬರ್ 18ರಂದು. ಈ ದಿನ ಎರಡು ಪಂದ್ಯಗಳಿತ್ತು. ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಒಂದು ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಅದಾಗಿ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳು ಎರಡು ಸೂಪರ್ ಓವರ್ ಪಂದ್ಯಗಳಲ್ಲಿ ಸೆಣಸಾಡಿದ್ದವು. ಅಂದರೆ ಪಂದ್ಯ ಟೈ ಆಗಿ ಸೂಪರ್ ಓವರ್ ನಡೆಯಿತು. ಸೂಪರ್ ಓವರ್ ಕೂಡ ಟೈ ಆದಾಗ ಎರಡನೇ ಸೂಪರ್ ಓವರ್ ನಡೆಸಲಾಗಿತ್ತು.

2009ರಿಂದ 2014
* ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2009, ಕೇಪ್ ಟೌನ್, ಆರ್‌ಆರ್‌ಗೆ ಜಯ
* ಕಿಂಗ್ಸ್ ಇಲೆವೆನ್ ಪಂಜಾಬ್ vs ಚೆನ್ನೈ ಸೂಪರ್ ಕಿಂಗ್ಸ್, 2010, ಚೆನ್ನೈ, ಕೆXIಪಿಗೆ ಗೆಲುವು
* ಸನ್ ರೈಸರ್ಸ್ ಹೈದರಾಬಾದ್ vs ಆರ್‌ಸಿಬಿ, 2013, ಹೈದರಾಬಾದ್, ಎಸ್‌ಆರ್‌ಎಚ್‌ಗೆ ಜಯ
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಡೇರ್ಡೆವಿಲ್ಸ್, 2013, ಬೆಂಗಳೂರು, ಆರ್‌ಸಿಬಿಗೆ ಗೆಲುವು
* ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2014, ಅಬುಧಾಬಿ, ಆರ್‌ಆರ್‌ಗೆ ಜಯ

2015ರಿಂದ 2019
* ಕಿಂಗ್ಸ್ XI ಪಂಜಾಬ್ vs ರಾಜಸ್ಥಾನ್ ರಾಯಲ್ಸ್, 2015, ಅಹ್ಮದಾಬಾದ್, ಕೆXIಪಿಗೆ ಗೆಲುವು
* ಮುಂಬೈ ಇಂಡಿಯನ್ಸ್ vs ಗುಜರಾತ್ ಲಯನ್ಸ್, 2017, ರಾಜ್‌ಕೋಟ್, ಎಂಐಗೆ ಜಯ
* ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2019, ಡೆಲ್ಲಿ, ಡಿಸಿ ಗೆಲುವು
* ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, 2019, ಮುಂಬೈ, ಎಂಐಗೆ ಜಯ

2020ರ ಆವೃತ್ತಿ (ಇನ್ನೂ ನಡೆಯುತ್ತಿದೆ)
* ಡೆಲ್ಲಿ ಕ್ಯಾಪಿಟಲ್ಸ್ vs ಕಿಂಗ್ಸ್ ಇಲೆವೆನ್ ಪಂಜಾಬ್, 2020, ಅಬುಧಾಬಿ, ಡಿಸಿಗೆ ಗೆಲುವು
* ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2020, ದುಬೈ, ಆರ್‌ಸಿಬಿ ಜಯಭೇರಿ
* ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, 2020, ಅಬುಧಾಬಿ, ಕೆಕೆಆರ್‌ಗೆ ಗೆಲುವು
* ಮುಂಬೈ ಇಂಡಿಯನ್ಸ್ vs ಕಿಂಗ್ಸ್ XI ಪಂಜಾಬ್, 2020, ದುಬೈ, ಕೆXIಪಿಗೆ ಜಯ (ಎರಡು ಸೂಪರ್ ಓವರ್‌ಗಳು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications