ಬೆಂಗಳೂರು, ಫೆ. 05: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧವಾಗಿದೆ. ಒಟ್ಟಾರೆ 351 ಆಟಗಾರರು (230 ಭಾರತೀಯ ಹಾಗೂ 121 ವಿದೇಶಿಯರು) ಫೆಬ್ರವರಿ 06ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ.
ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ರೂ.ಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಅವರಿಗೆ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲ ಬೆಲೆ ನಿಗದಿ ಮಾಡಲಾಗಿದೆ.
ಯುವರಾಜ್ ಸಿಂಗ್, ಇಶಾಂತ್ ಶರ್ಮ ಸೇರಿದಂತೆ ಒಟ್ಟು 7 ಸ್ಟಾರ್ ಆಟಗಾರರು ಇಷ್ಟೇ ಮೊತ್ತದ ಮೂಲ ಬೆಲೆ ಫಿಕ್ಸ್ ಮಾಡಲಾಗಿದೆ.[ಹರಾಜಿಗೆ ಸಿದ್ಧರಾಗಿರುವ ಆಟಗಾರರ ಪಟ್ಟಿ]

ಐಪಿಎಲ್ 2016ರ ಹರಾಜು ಪ್ರಕ್ರಿಯೆ ಅಂಕಿ ಅಂಶಗಳು:
* 329.72 ಕೋಟಿ ರುಗಳನ್ನು 8 ಫ್ರಾಂಚೈಸಿಗಳು ಖರ್ಚು ಮಾಡಿ ಸೀಸನ್ 9 ಗಾಗಿ ತಂಡದಲ್ಲಿದ್ದ ಕೆಲ ಆಟಗಾರರನ್ನು ಉಳಿಸಿಕೊಂಡಿದ್ದಾರೆ.
* 351 ಕ್ರಿಕೆಟರ್ಸ್ ಹರಾಜಿಗೆ ಒಳಪಡುತ್ತಿದ್ದಾರೆ.
* 230 ಭಾರತೀಯ ಆಟಗಾರರು ಹರಜಾಗಲಿದ್ದಾರೆ
* 121 ವಿದೇಶಿ ಆಟಗಾರರು ಹರಾಜಿಗೆ ಸಿದ್ಧರಾಗಿದ್ದಾರೆ.
* 192.28 ಕೋಟಿ ರು ಹರಾಜಿಗಾಗಿ 8 ಫ್ರಾಂಚೈಸಿಗಳ ಬಳಿ ಇರುವ ಮೊತ್ತವಾಗಿದೆ.
* 130 ಅನುಭವಿ ಆಟಗಾರರು ಕಣಕ್ಕೆ (ಭಾರತ 26, ಆಸ್ಟ್ರೇಲಿಯಾ 29, ಬಾಂಗ್ಲಾದೇಶ 5, ಇಂಗ್ಲೆಂಡ್ 7, ನ್ಯೂಜಿಲೆಂಡ್ 9, ದಕ್ಷಿಣ ಆಫ್ರಿಕಾ 18, ಶ್ರೀಲಂಕಾ 16, ವೆಸ್ಟ್ ಇಂಡೀಸ್ 20)
* 2 ಅಸೋಸಿಯೇಟ್ ಪ್ಲೇಯರ್ಸ್- ಕೆನಡ ಹಾಗೂ ಐರ್ಲೆಂಡ್.
* 2-ಎರಡು ಹೊಸ ತಂಡಗಳು- ಗುಜರಾತ್ ಲಯಸ್ನ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ 2 ವರ್ಷದ ಅವಧಿಗೆ ಅಮಾನತುಗೊಂಡಿದೆ.
* 8 ಮೇಲ್ಪಂಕ್ತಿ ಆಟಗಾರರು ಹರಾಜಿಗೆ ಸಿದ್ಧರಾಗಿದ್ದಾರೆ.
* 64 ಬ್ಯಾಟ್ಸ್ ಮನ್
* 110 ಬೌಲರ್ಸ್
* 132 ಆಲ್ ರೌಂಡರ್ಸ್
* 37 ವಿಕೆಟ್ ಕೀಪರ್ಸ್
* 219 ಮೊದಲ ಬಾರಿಗೆ ಆಡುವವರು (ಭಾರತ 204, ಆಸ್ಟ್ರೇಲಿಯಾ 9, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ 2, ವೆಸ್ಟ್ ಇಂಡೀಸ್3)
* 12 ಆಟಗಾರರು 2 ಕೋಟಿ ರು ಮೂಲ ಬೆಲೆ (ಇಶಾಂತ್ ಶರ್ಮ, ಶೇನ್ ವಾಟ್ಸನ್, ಕೆವಿನ್ ಪೀಟರ್ಸನ್, ಯುವರಾಜ್ ಸಿಂಗ್, ಮೈಕಲ್ ಹಸ್ಸಿ, ಅಶೀಶ್ ನೆಹ್ರಾ, ಧವಳ್ ಕುಲಕರ್ಣಿ, ಕೇನ್ ರಿಚರ್ಡ್ಸನ್, ಸಂಜು ಸಾಮ್ಸನ್, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ, ಮಿಚೆಲ್ ಮಾರ್ಷ್)
* 2 ಕೋಟಿ ರು ಗರಿಷ್ಠ ಬೆಲೆ
* 10 ಲಕ್ಷ ರು ಕನಿಷ್ಠ ಬೆಲೆ
ಯಾವ ತಂಡದ ಬಳಿ ಎಷ್ಟು ದುಡ್ಡಿದೆ.
ಪ್ರತಿ ತಂಡಕ್ಕೂ ಲಭ್ಯವಿರುವ ಮೊತ್ತ : 66 ಕೋಟಿ ರು
ದೆಹಲಿ ಡೇರ್ ಡೆವಿಲ್ಸ್ -37.15 ಕೋಟಿ ರು
ಸನ್ ರೈಸರ್ಸ್ ಹೈದರಾಬಾದ್ -30.15 ಕೋಟಿ ರು
ಗುಜರಾತ್ ಲಯನ್ಸ್-27 ಕೋಟಿ ರು
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ -27 ಕೋಟಿ ರು
ಕಿಂಗ್ಸ್ XI ಪಂಜಾಬ್ -23 ಕೋಟಿ ರು
ರಾಯಲ್ ಚಾಲೆಂಜರ್ಸ್ ಬೆಂಗಳೂರು - 21.62 ಕೋಟಿ ರು
ಕೋಲ್ಕತ್ತಾ ನೈಟ್ ರೈಡರ್ಸ್-17.95 ಕೋಟಿ ರು
ಮುಂಬೈ ಇಂಡಿಯನ್ಸ್ -14.4 ಕೋಟಿ ರು
ಆಟಗಾರರ ಹರಾಜು ಪ್ರಕ್ರಿಯೆ ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ಭಾರತದಲ್ಲಿ ಸೋನಿ ಸಿಕ್ಸ್ ನಲ್ಲಿ ನೇರ ಪ್ರಸಾರವಿದೆ. ರಿಚರ್ಡ್ ಮಾಡ್ಲೆ ಹರಾಜು ನಡೆಸಿಕೊಡಲಿದ್ದಾರೆ. (ಒನ್ ಇಂಡಿಯಾ ಸುದ್ದಿ)