Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಹುನಿರೀಕ್ಷಿತ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮುನ್ನೋಟ

ಅಡಿಲೇಡ್, ನ.26: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸಜ್ಜಾಗಿವೆ. ಶುಕ್ರವಾರ ಆರಂಭವಾಗಲಿರುವ ಈ ಪಂದ್ಯವನ್ನು ವಿಶ್ವದೆಲ್ಲೆಡೆಯ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ವೀಕ್ಷಿಸುವ ನಿರೀಕ್ಷೆಯಿದೆ.

ಟೆಸ್ಟ್ ಇತಿಹಾಸದ ಅತ್ಯಂತ ವೇಗದ ಎಸೆತ ಹಾಕಿದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೊಸ ಪಿಂಕ್ ಚೆಂಡಿನಲ್ಲಿ ಮಿಂಚಲು ಕಾದಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ 40,000 ಟಿಕೆಟ್‌ಗಳು ಮಾರಾಟವಾಗಿವೆ. 2008ರಲ್ಲಿ ಈ ಎರಡು ತಂಡಗಳು ಆಡಿದ್ದಾಗ ಕೇವಲ 16,000 ಟಿಕೆಟ್‌ಗಳು ಮಾರಾಟವಾಗಿತ್ತು.

All you need to know about first-ever day-night Test

138 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 1970ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕಳೆದ ದಶಕದಲ್ಲಿ ಟ್ವೆಂಟಿ-20 ಮಾದರಿಯ ಪಂದ್ಯವನ್ನು ಪರಿಚಯಿಸಲಾಗಿದ್ದು, ಈ ಎರಡು ಮಾದರಿಯ ಕ್ರಿಕೆಟ್ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು.

ಬ್ರಿಸ್ಬೇನ್‌ನಲ್ಲಿ 208 ರನ್‌ಗಳಿಂದ ಗೆಲುವು ಸಾಧಿಸಿರುವ ಆಸ್ಟ್ರೇಲಿಯ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಅಡಿಲೇಡ್‌ನಲ್ಲೂ ಜಯ ಸಾಧಿಸಿದರೆ ಸರಣಿ ಸಮಬಲಗೊಳ್ಳಲಿದೆ.

All you need to know about first-ever day-night Test

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜೋ ಬರ್ನ್ಸ್, ಜೋಶ್ ಹಜೇಲ್ ವುಡ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಪೀಟಲ್ ನೆವಿಲ್ (ವಿಕೆಟ್ ಕೀಪರ್), ಜೇಮ್ಸ್ ಪಾಟಿಸನ್, ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್, ಆಡಂ ವೋಗ್ಸ್.

ನ್ಯೂಜಿಲೆಂಡ್: ಬ್ರೆಂಡನ್ ಮೆಕಲಮ್ (ನಾಯಕ), ಮಾರ್ಟಿನ್ ಗಪ್ಟಿಲ್, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್) ಮಿಚೆಲ್ ಸಾಂಟ್ನರ್, ಡೌಗ್ ಬ್ರೇಸ್ ವೆಲ್, ಮ್ಯಾಟ್ ಹೆನ್ಸಿ, ನೀಲ್ ವಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಮಾರ್ಕ್ ಕ್ರೇಗ್, ಲೂಕ್ ರಾಂಚಿ (ವಿಕೆಟ್ ಕೀಪರ್), ಮಿಚೆಲ್ ಮೆಕ್ ಲೆನಾಘನ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+