ರೋಹಿತ್, ಕೊಹ್ಲಿ ಜೊತೆ ಪಂದ್ಯದ ಗತಿಯನ್ನೇ ಬದಲಾಯಿಸುತ್ತಿರುವ ಈ ಆಟಗಾರ
ವಿಶ್ವಕಪ್ ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟನಿಂದ ರನ್ ಹರಿಯುತ್ತಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡುತ್ತಿದ್ದಾರೆ. ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಅಮೋಘವಾಗಿ ಆಟವನ್ನು ಆಡುತ್ತಿದೆ. ಈ ಗೆಲುವಿನಲ್ಲಿ ಸಂಘಟಿತ ಆಟ ಎದ್ದು ಕಾಣುತ್ತದೆ.
ಜಸ್ಪ್ರೀತ್ ಬುಮ್ರಾ ಮುಂದಾಳತ್ವದಲ್ಲಿ ವೇಗದ ಬೌಲರ್ ಗಳು ಬಿಗುವಿನ ದಾಳಿ ನಡೆಸಿದ್ದಾರೆ. ಎದುರಾಳಿಗಳಿಗೆ ಕುಲದೀಪ್ ಯಾದವ್ ಅವರ ಸ್ಪಿನ್ ಬೌಲಿಂಗ್ ಎದುರಿಸುವುದು ಕಂಟಕವಾಗಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದ ನಂತರ ಭಾರತವನ್ನು ಪಂದ್ಯಾವಳಿಯ ನೆಚ್ಚಿನ ತಂಡ ಎಂದು ಪರಿಗಣಿಸಲಾಗುತ್ತದೆ.

ಆದರೆ ತಂಡದ ಈ ಯಶಸ್ಸಿನಲ್ಲಿ, ರವೀಂದ್ರ ಜಡೇಜಾ ಹೆಸರು ಸ್ಟಾರ್ ಆಟಗಾರರ ನಡುವೆ ಮರೆಯಾಚುತ್ತಿದ್ದೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಮಧ್ಯಮ ಓವರ್ ಗಳಲ್ಲಿ ಜಡೇಜಾ ಅದ್ಭುತ ಪ್ರದರ್ಶನದಿಂದಾಗಿ ತಂಡಕ್ಕೆ ಉತ್ತಮ ಕೊಡುಗೆಯಾಗುತ್ತಿದ್ದರೂ, ಅವರ ಕೊಡುಗೆ ಎಲ್ಲೂ ಪರಿಗಣಿಸಲಾಗುತ್ತಿಲ್ಲ.
ಜಡೇಜಾ ಬೌಲಿಂಗ್ ಮತ್ತು ಅತ್ಯುತ್ತಮ ಫೀಲ್ಡಿಂಗ್ ನಿಂದಾಗಿ ತಂಡಕ್ಕೆ ಜಡೇಜಾ ನೆರವಾಗಿದ್ದಾರೆ. ರವೀಂದ್ರ ಜಡೇಜಾ ನಿಸ್ಸಂದೇಹವಾಗಿ ಭಾರತದ 'ಅತ್ಯಂತ ಮೌಲ್ಯಯುತ ಆಟಗಾರ' ಎಂದು ಸಾಬೀತು ಪಡಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಮಧ್ಯಮ ಓವರ್ ಗಳಲ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.
ಜಡೇಜಾ ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್
ಪ್ರಸಕ್ತ ವಿಶ್ವಕಪ್ ನಲ್ಲಿ ಜಡೇಜಾ ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದಾರೆ. ಜಡೇಜಾ ಅವರು ತಮ್ಮ ತೀಕ್ಷ್ಣವಾದ ಬೌಲಿಂಗ್ ನಿಂದ ರನ್ ಗಳನ್ನು ನೀಡದೆ ಕಟ್ಟಿ ಹಾಕುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಕುಲದೀಪ್ ಯಾದವ್ ಉತ್ತಮವಾಗಿ ಸಾಥ್ ನೀಡುತ್ತಿದ್ದಾರೆ.
ರವೀಂದ್ರ ಜಡೇಜಾ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ 37.5 ಓವರ್ ಗಳಲ್ಲಿ 131 ಡಾಟ್ ಬಾಲ್ ಗಳನ್ನು (21.5 ಓವರ್) ಎಸೆದಿದ್ದಾರೆ. ಡಾಟ್ ಬಾಲ್ ಶೇಕಡಾವಾರು ಬೆರಗುಗೊಳಿಸುವಷ್ಟಾಗಿದೆ. ಅಂದರೆ ಶೇಕಡಾ 58.22 ಆಗಿದೆ. ಈ ನಾಲ್ಕು ಪಂದ್ಯಗಳಲ್ಲಿ ಅವರ ವಿರುದ್ಧ ಕೇವಲ 11 ಬೌಂಡರಿಗಳು (ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್) ಬಂದಿವೆ.
ಈ ವಿಶ್ವಕಪ್ ನಲ್ಲಿ ನೀವು ವಿಭಿನ್ನವಾಗಿ ಏನು ಮಾಡುತ್ತಿದ್ದೀರಿ ಎಂದು ಜಡೇಜಾ ಅವರನ್ನು ಕೇಳಿದಾಗ, ಅವರು ತಮಾಷೆಯಾಗಿ ಹೇಳಿದ್ದು, "ನಾನು ನಿಮಗೆ ನನ್ನ ತಂತ್ರವನ್ನು ಹೇಳಿದರೆ. ನೀವು ಇಂಗ್ಲಿಷ್ ನಲ್ಲಿ ಪ್ರಕಟಿಸುತ್ತೀರಿ ಮತ್ತು ಅದರ ಬಗ್ಗೆ ಜನರಿಗೆ ತಿಳಿಯುತ್ತದೆ" ಎಂದು ತಿಳಿಸಿದ್ದಾರೆ.
ಭಾರತದ ಮಾಜಿ ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್ ಜಡೇಜಾ
ಭಾರತದ ಮಾಜಿ ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್ ಜಡೇಜಾ ಅವರ ಬೌಲಿಂಗ್ ನಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. "ಜಡೇಜಾ ವಿಶ್ವಕಪ್ ನಲ್ಲಿ ತಮ್ಮ ಬೌಲಿಂಗ್ ಅನ್ನು ಚೆನ್ನಾಗಿ ಮಿಶ್ರಣ ಮಾಡುತ್ತಿದ್ದಾರೆ. ಮೊನ್ನೆ ಅವರ ಆಕ್ಷನ್ ನೋಡಿದರೆ ಅಂಡರ್ ಕಟರ್ ಗಳನ್ನು ಎಸೆದಿದ್ದರು.
ಜಡೇಜಾ ಈಗ 'ರೌಂಡ್ ಆರ್ಮ್' ಬೌಲಿಂಗ್ ಮಾಡುವುದನ್ನು ತಪ್ಪಿಸುತ್ತಿದ್ದಾರೆ ಮತ್ತು ಚೆಂಡನ್ನು ಎರಡೂ ಕಡೆ ತಿರುಗಿಸುವತ್ತ ಗಮನ ಹರಿಸುತ್ತಿದ್ದಾರೆ. ಅವರ ಚೆಂಡು ಸಿಮ್ ಮೇಲೆ ಬಿದ್ದ ನಂತರ ಹೆಚ್ಚು ಬೌನ್ಸ್ ಆಗುತ್ತಿದೆ ಮತ್ತು ಇದರಿಂದಾಗಿ ಬ್ಯಾಟ್ಸಮ್ಯಾನ್ ಗಳು ಮೋಸ ಹೋಗುತ್ತಿದ್ದಾರೆ" ಮುರಳಿ ಕಾರ್ತಿಕ್ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications