For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ಪ್ಲೇಯಿಂಗ್‌ 11ಗೆ ಈ ಆಲ್‌ರೌಂಡರ್‌ ಎಂಟ್ರಿ ಸಾಧ್ಯತೆ!

Also looking at Ravindra Jadeja as option: Sanjay Bangar

ಬರ್ಮಿಂಗ್‌ಹ್ಯಾಮ್‌, ಜುಲೈ 01: ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಇಬ್ಬರು ಪ್ರಮುಖ ಸ್ಪಿನ್‌ ಬೌಲರ್‌ಗಳಾದ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ಹೆಚ್ಚು ದುಬಾರಿ ಸಾಬೀತಾದರು. ಈ ಸಂದರ್ಭದಲ್ಲಿ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಶುರುವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಭಾರತ ತಂಡ ಸೆಮಿಫೈನಲ್ಸ್‌ ಹಂತಕ್ಕೇರಲು ತನ್ನ ಪಾಲಿನ ಉಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ದಾಖಲಿಸಬೇಕಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ಅವಕಾಶ ನೀಡಬೇಕೆಂಬ ಚರ್ಚೆ ಬಿಸಿಯಾಗಿದೆ.

ಈ ಕುರಿತಾಗಿ ಮಾತನಾಡಿರುವ ಭಾರತ ತಂಡದ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌, ಜಡೇಜಾ ಅವರನ್ನು ಆಡಿಸುವುದು ತಂಡದ ಮುಂದಿರುವ ಮಾರ್ಗೋಪಾಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಆದರೆ, ಕುಲ್ದೀಪ್‌ ಮತ್ತು ಚಹಲ್‌ ದುಬಾರಿ ಯಾದದ್ದು ಅಪರೂಪದಲ್ಲಿ ಒಮ್ಮೆಯಷ್ಟೇ ಎಂದಿದ್ದಾರೆ.

"ತಂಡದ ಗೆಲುವಿಗಾಗಿ ಯಾವುದೇ ರೀತಿಯ ಸಂಯೋಜನೆ ತರಲು ನಮ್ಮ ತಂಡ ಸಿದ್ದವಿದೆ. ಹಾರ್ದಿಕ್‌ ಪಾಂಡ್ಯ ಜೊತೆಗೆ ಮೂವರು ವೇಗದ ಬೌಲರ್‌ಗಳನ್ನು ಆಡಿಸುವುದಕ್ಕೂ ರೆಡಿ. ಅಂತೆಯೇ ಜಡೇಜಾ ಅವರನ್ನು ಆಡಿಸುವ ಕಡೆಗೂ ಆಲೋಚಿಸಲಾಗಿದೆ. ತಂಡದಲ್ಲಿ ಇರುವ 15 ಆಟಗಾರರು ಸಮರ್ಥರಾಗಿದ್ದು, ಅಗತ್ಯಕ್ಕೆ ತಕ್ಕ ಆಡುವ 11 ಆಟಗಾರರ ರಚನೆ ಮಾಡಲಾಗುವುದು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೊಡುಗೆ ಬೇಕಿದ್ದರೆ ಭುವನೇಶ್ವರ್‌ ಕುಮಾರ್‌ ಉತ್ತಮ ಆಯ್ಕೆಯಾಗುತ್ತಾರೆ. ಜಡೇಜಾ ಕೂಡ ಈ ಸ್ಥಾನ ತುಂಬಬಲ್ಲರು. ಟೂರ್ನಿಯ ಮುಂದಿನ ಹಂತದಲ್ಲಿ ಇಂಥದ್ದೊಂದು ಬದಲಾವಣೆಗಳನ್ನು ತರಲಿದ್ದೇವೆ,'' ಎಂದು ಬಾಂಗರ್‌ ಅಭಿಪ್ರಾಯ ಪಟ್ಟಿದ್ದಾರೆ.

"ಚಹಲ್‌ ಮತ್ತು ಕುಲ್ದೀಪ್‌ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿರುವುದು ಅಪರೂಪ. ತಂಡದ ಯಶಸ್ಸಿನ ಹಿಂದೆ ಇವರಿಬ್ಬರ ಕೊಡುಗೆ ಸ್ಥಿರವಾಗಿದೆ. ಹೀಗಾಗಿ ಅವರಿಬ್ಬರನ್ನೂ ತಂಡದಲ್ಲಿ ಮುಂದುವರಿಯುವಂತೆ ಮಾಡಬೇಕಿದೆ. ಏಕೆಂದರೆ ಮುಂಬರುವ ಪಂದ್ಯಗಳಲ್ಲಿ ಅವರ ಪ್ರದರ್ಶನ ಮಹತ್ವದ್ದಾಗಿದೆ,'' ಎಂದು ವಿವರಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 338 ರನ್‌ಗಳ ಗುರಿ ಬೆನ್ನತ್ತಿ 5 ವಿಕೆಟ್‌ ನಷ್ಟದಲ್ಲಿ 306 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ 31 ರನ್‌ಗಳ ಅಂತರದಲ್ಲಿ ಸೋಲನುಭವಿಸಿತ್ತು. ಈ ಸಂದರ್ಭದಲ್ಲಿ ತಂಡದ ಬ್ಯಾಟಿಂಗ್‌ ವಿಭಾಗದ ಸಾಮರ್ಥ್ಯ ಕುರಿತಾಗಿ ಸಾಕಷ್ಟು ಟೀಕೆಗಳು ಮೂಡಿಬಂದಿವೆ.

Story first published: Monday, July 1, 2019, 20:38 [IST]
Other articles published on Jul 1, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+