For Quick Alerts
ALLOW NOTIFICATIONS  
For Daily Alerts
 

ಹನುಮ ವಿಹಾರಿ ಶತಕದ ಸೊಬಗು: ಉತ್ತಮ ಮೊತ್ತದತ್ತ ಭಾರತ ಎ

Alur india a south africa a unofficial 2nd test 1st day

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೆಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಉತ್ತಮ ಮೊತ್ತದತ್ತ ದಾಪುಗಾಲು ಇರಿಸಿದೆ.

ಮೊದಲ ಪಂದ್ಯದಲ್ಲಿ ಭರ್ಜರಿ ಶತಕಗಳನ್ನು ದಾಖಲಿಸಿ ಅಬ್ಬರಿಸಿದ್ದ ಆರಂಭಿಕರಾದ ಮಯಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ, ಎರಡನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರದ ದ್ವಿಶತಕ ಬಾರಿಸಿದ್ದ ಮಯಂಕ್, ಈ ಬಾರಿ ಎದುರಿಸಿದ್ದು ಕೇವಲ ಎರಡೇ ಎಸೆತಗಳನ್ನು. ಮೊದಲನೆಯ ಓವರ್‌ನಲ್ಲಿಯೇ ಮಯಂಕ್ ಶೂನ್ಯಕ್ಕೆ ಔಟಾದರು.

ತಂಡದ ಮೊತ್ತ 18 ಆಗಿದ್ದಾಗ ಪೃಥ್ವಿ ಶಾ (16) ಕೂಡ ಪೆವಿಲಿಯನ್ ಹಾದಿ ಹಿಡಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಹನುಮ ವಿಹಾರಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಆಸರೆಯಾದರು. ಅರ್ಧಶತಕದ ಜತೆಯಾಟ ನೀಡಿದ ಬಳಿಕ ಶ್ರೇಯಸ್ ಅಯ್ಯರ್ (39) ಔಟಾದರು.

ನಂತರ ಕನ್ನಡಿಗ ಆರ್. ಸಮರ್ಥ್ ಬದಲು ಅವಕಾಶ ಪಡೆದಿದ್ದ ಅಂಕಿತ್ ಭಾವ್ನೆ, ವಿಹಾರಿಗೆ ಸಾಥ್ ನೀಡಿದರು. ವಿಹಾರಿ ಹೆಚ್ಚು ತಾಳ್ಮೆಯ ಆಟಕ್ಕೆ ಮೊರೆ ಹೋದರು. ಭಾ'ಲಾರ್ಡ್ಸ್'ನಲ್ಲಿನ ಭಾರತ v ಇಂಗ್ಲೆಂಡ್ ಕುತೂಹಲಕಾರಿ ಹೆಜ್ಜೆ ಗುರುತುಗಳು!ವ್ನೆ ವಿಕೆಟ್ ಒಪ್ಪಿಸಿದ ಬಳಿಕ ಮತ್ತೆ ಯಾವುದೇ ತೊಂದರೆ ಆಗದಂತೆ ವಿಕೆಟ್ ಕೀಪರ್ ಶ್ರೀಕರ್ ಭರತ್ ಎಚ್ಚರ ವಹಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ: 322/4 (90 ಓವರ್) ಹನುಮ ವಿಹಾರಿ 138*, ಶ್ರೇಯಸ್ ಅಯ್ಯರ್ 39, ಅಂಕಿತ್ ಭಾವ್ನೆ 80, ಶ್ರೀಕರ್ ಭರತ್ 30*, ಡೇನ್ ಪೀಡ್ತ್ 46/1, ಸೆನುರಮ್ ಮುತ್ತುಸ್ವಾಮಿ 51/1.

Story first published: Saturday, August 11, 2018, 10:50 [IST]
Other articles published on Aug 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+