For Quick Alerts
ALLOW NOTIFICATIONS  
For Daily Alerts
 

Alyssa Healy Retirement: ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾಕ್ಕೆ ಪೆಟ್ಟು: ಅಲಿಸಾ ಹೀಲಿ ನಿವೃತ್ತಿ

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸಾ ಹೀಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಈ ವರ್ಷ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದ್ದು ಅದಕ್ಕೂ ಮೊದಲು ಆಸೀಸ್‌ ತಂಡಕ್ಕೆ ಪೆಟ್ಟು ಬಿದ್ದಿದೆ. ಇವರ ಈ ನಿರ್ಧಾರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಅಲಿಸಾ ಹೀಲಿ ಮಾರ್ಚ್‌ 2026ರ ಬಳಿಕ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. ಈ ವರ್ಷ ಅಲಿಸಾ ಹೀಲಿ ಅವರು ಭಾರತ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್‌ನಲ್ಲಿ ಆಡಲಿದ್ದಾರೆ.

ಸೋಮವಾರ (ಜ.12)ದಂದು ಅಲಿಸಾ ಹೀಲಿ ಅವರು ವಿಲೋ ಟಾಕ್ ಪಾಡ್‌ಕ್ಯಾಸ್ಟ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 35 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಭಾರತ ವಿರುದ್ಧದ ಸರಣಿ ತಮ್ಮ ಕೊನೆಯ ಸರಣಿ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.

Alyssa Healy Announces Retirement Star Aussie Captain to Retire After India Series in March 2026

ಆಸ್ಟ್ರೇಲಿಯಾ ಪರ ಆಡುವ ಉತ್ಸಾಹ ಇನ್ನು ನನ್ನಲ್ಲಿ ಇದೆ. ಆದರೆ ಆರಂಭದಿಂದ ನೀಡಿದ ಸ್ಪರ್ಧಾತ್ಮಕ ಮನೋಭಾವವನ್ನು ನಾನು ಕಳೆದುಕೊಂಡಿದ್ದೇನೆ. ಹೀಗಾಗಿ ನಾನು ಕ್ರಿಕೆಟ್‌ಗೆ ನಿವೃತ್ತಿ ಹೊಂದಲು ಬಯಸುತ್ತೇನೆ. ವಿದಾಯಕ್ಕೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

2023ರಲ್ಲಿ ಮೆಗ್‌ ಲ್ಯಾನಿಂಗ್‌ ಅವರು ಆಸ್ಟ್ರೇಲಿಯಾ ತಂಡದ ನಾಯಕಿ ಸ್ಥಾನದಿಂದ ಇಳಿದ ಬಳಿಕ ಪೂರ್ಣಾವಧಿಗೆ ನಾಯಕಿಯಾಗಿ ಹೀಲಿಯನ್ನು ನೇಮಿಸಲಾಯಿತು. ಅಲ್ಲಿಂದ ಇವರು ಆಸೀಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತದ ವಿರುದ್ಧದ ಏಕದಿನ ಸರಣಿಯನ್ನು ಅಷ್ಟೇ ಆಡಲಿದ್ದಾರೆ. ಆದರೆ ಟಿ20 ಸರಣಿಯಲ್ಲಿ ಇವರು ಆಡುತ್ತಿಲ್ಲ. ಮಾರ್ಚ್ 6-9 ರಿಂದ ಪರ್ತ್‌ನಲ್ಲಿ ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಈ ಟೆಸ್ಟ್‌ ಪಂದ್ಯದ ಬಳಿಕ ಹೀಲಿ ನಿವೃತ್ತಿ ಹೊಂದಲಿದ್ದಾರೆ. ಇದರಿಂದಾಗಿ ಮುಂಬರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹೊಸ ನಾಯಕಿಯ ನಾಯಕತ್ವದಲ್ಲಿ ಆಡುವ ಅನಿವಾರ್ಯತೆ ಇದೆ.

ಹೀಲಿ ಸಾಧನೆ

ಅಲಿಸಾ ಹೀಲಿ ಒಬ್ಬ ಪ್ರತಿಭಾನ್ವಿತ ಆಟಗಾರ್ತಿ. ಇವರು ತಮ್ಮ 19 ನೇ ವಯಸ್ಸಿನಲ್ಲಿ ಆಸೀಸ್‌ ಪರ ಪದಾರ್ಪಣೆ ಮಾಡಿದರು. ಇವರು ಈಗಾಗಲೇ ಆಸೀಸ್‌ ಪರ 123 ಏಕದಿನ ಪಂದ್ಯ ಆಡಿದ್ದು 35ರ ಸರಾಸರಿಯಲ್ಲಿ 3563 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 7 ಶತಕ ಹಾಗೂ 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು ದೇಶದ ಪರ ಒಟ್ಟು 162 ಟಿ20 ಪಂದ್ಯಗಳನ್ನು ಆಡಿದ್ದು, 25ರ ಸರಾಸರಿಯಲ್ಲಿ 3054 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲಿಸಾ ಹೀಲಿ ಆಡಿದ 10 ಟೆಸ್ಟ್‌ ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ 489 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಸೇರಿವೆ. ಇನ್ನು ಡಬ್ಲ್ಯೂಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ ಪರ ಹೀಲಿ ಆಡಿದ 17 ಪಂದ್ಯಗಳಲ್ಲಿ 26ರ ಸರಾಸರಿಯಲ್ಲಿ 428 ರನ್‌ ಕಲೆ ಹಾಕಿದ್ದಾರೆ.

Story first published: Tuesday, January 13, 2026, 10:35 [IST]
Other articles published on Jan 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+