For Quick Alerts
ALLOW NOTIFICATIONS  
For Daily Alerts
 

ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಬರೆದ Alyssa Healy, ಭಾರತಕ್ಕೆ ಸೋಲು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾದಾಗ ಎಲ್ಲರ ಕಣ್ಣುಗಳು ಆತಿಥೇಯ ತಂಡದ ನಾಯಕಿ ಅಲಿಸಾ ಹೀಲಿ ಅವರ ಮೇಲೆ ನೆಟ್ಟಿದ್ದವು. ಇವರು ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳುವುದಾಗಿ ಈ ಮೊದಲೇ ಘೋಷಿಸಿದ್ದರು. ಅಲಿಸಾ ಹೀಲಿ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದರು. ಇವರು ಅಬ್ಬರದ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ವಿರುದ್ಧದ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಟೀಮ್ ಇಂಡಿಯಾ ವನಿತೆಯರ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಲಿಸಾ ಹೀಲಿ ಮುಂದಾಳತ್ವದ ತಂಡ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ನಾಯಕಿ ಅಲಿಸಾ ಹೀಲಿ ಜೊತೆಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಫೋಬೆ ಲಿಚ್‌ಫೀಲ್ಡ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 32 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಲಿಸಾ ಹೀಲಿ ಹಾಗೂ ಜಾರ್ಜಿಯಾ ವೋಲ್‌ ಜೋಡಿ ಆಧಾರವಾದರು.

Alyssa Healy

ಎರಡನೇ ವಿಕೆಟ್‌ಗೆ ಹೀಲಿ ಮತ್ತು ವೋಲ್‌ ಜೊತೆಗೂಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಹಂತದಲ್ಲಿ 7 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 62 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು.

ಹೀಲಿ, ಮೂನಿ ಶತಕದ ಆಟ

ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿಯರಾದ ಅಲಿಸಾ ಹೀಲಿ ಹಾಗೂ ಬೆತ್ ಮೂನಿ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 92 ಎಸೆತಗಳಲ್ಲಿ 145 ರನ್‌ ಸೇರಿಸಿತು. ಅಲಿಸಾ ಹೀಲಿ ಕೇವಲ 79 ಎಸೆತಗಳಲ್ಲಿ 18 ಬೌಂಡರಿಗಳನ್ನು ಒಳಗೊಂಡಂತೆ ಶತಕವನ್ನು ಗಳಿಸಿದರು. ಇವರ ಅದ್ಭುತ ಇನ್ನಿಂಗ್ಸ್‌ನಲ್ಲಿ 27 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ, ಅಲಿಸಾ ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ತಮ್ಮದಾಗಿಸಿಕೊಂಡಿದ್ದರು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಜೋಹ್ಮರಿ ಲಾಗ್ಟೆನ್‌ಬರ್ಗ್ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಗಳಿಸುವ ಸಾಧನೆ ಮಾಡಿದ್ದರು. 35 ವರ್ಷದ ಹೀಲಿ ಅವರ ಎಂಟನೇ ಏಕದಿನ ಶತಕ ಸಂಭ್ರಮಿಸಿದರು. ಅಲ್ಲದೆ ಭಾರತದ ವಿರುದ್ಧ ನಾಲ್ಕನೇ ಶತಕ ಬಾರಿಸಿದರು.

Alyssa Healy

ರನ್‌ಗಳಿಸಲು ಪರದಾಟ

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸೊನ್ನೆ ಸುತ್ತಿದರು. ಮಧ್ಯಮ ಕ್ರಮಾಂಕದಲ್ಲಿ ಬೆತ್ ಮೂನಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಆಸೀಸ್‌ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 409 ರನ್‌ ಸಿಡಿಸಿತು.

ಎರಡನೇ ವಿಕೆಟ್‌ಗೆ ಜೆಮಿಮಾ ರೋಡ್ರಿಗಸ್‌ ಹಾಗೂ ಪ್ರತಿಕಾ ರಾವಲ್ (27) ಜೋಡಿ 35 ಎಸೆತಗಳಲ್ಲಿ 54 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಭರವಸೆಯ ಅಟಗಾರ್ತಿ ಜೆಮಿಮಾ 9 ಬೌಂಡರಿ ನೆರವಿನಿಂದ 42 ರನ್‌ ಬಾರಿಸಿದರು. ಹರ್ಮನ್ ಪ್ರೀತ್ ಕೌರ್ 25, ಹರ್ಲಿನ್ ಡಿಯೋಲ್ 14, ರಿಚಾ ಘೋಷ್ 18 ರನ್ ಬಾರಿಸಿದರು.

8ನೇ ವಿಕೆಟ್‌ಗೆ ಸ್ನೇಹಾ ರಾಣಾ ಹಾಗೂ ದೀಪ್ತಿ ಶರ್ಮಾ (18) ಭರ್ಜರಿ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಅಲ್ಲದೆ ಈ ಜೋಡಿ 92 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸ್ನೇಹಾ ರಾಣಾ 6 ಬೌಂಡರಿ ನೆರವಿನಿಂದ 44 ರನ್‌ ಸಿಡಿಸಿದರು. ಅಂತಿಮವಾಗಿ ಭಾರತ 45.1 ಓವರ್‌ಗಳಲ್ಲಿ 224 ರನ್‌ ಸಿಡಿಸಿ ಔಟ್ ಆದರು. ಆಸೀಸ್‌ ಪರ ಅಲಾನಾ ಕಿಂಗ್ 4 ವಿಕೆಟ್‌ ಪಡೆದರು.

Story first published: Sunday, March 1, 2026, 19:55 [IST]
Other articles published on Mar 1, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+