ರಾಜಸ್ಥಾನ ರಾಯಲ್ಸ್‌ಗೆ ಸಿಕ್ಕ ಮತ್ತೊಬ್ಬ ಸೂಪರ್ ಸ್ಟಾರ್ Aman Rao
ದೇಶೀಯ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ 38 ತಂಡಗಳು ಭಾಗವಹಿಸುತ್ತಿವೆ. ಮಂಗಳವಾರ ಈ ಟೂರ್ನಿಯ ಆರನೇ ಸುತ್ತಿನ ಪಂದ್ಯಗಳು ಆರಂಭವಾದವು. ಹೈದರಾಬಾದ್ ಹಾಗೂ ಬಂಗಾಳ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಹೈದರಾಬಾದ್ ತಂಡದ ಯುವ ಆಟಗಾರ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕದ ಸಾಧನೆ ಮಾಡಿದರು. ಈ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ಒಂಬತ್ತನೇ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬಂಗಾಳ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ ಜವಾಬ್ದಾರಿಯನ್ನು ಹೊತ್ತುಕೊಂಡ ಯುವ ಬ್ಯಾಟರ್ ಅಮನ್ ರಾವ್ ಹಾಗೂ ರಾಹುಲ್ ಸಿಂಗ್ (65) ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಮೊದಲ ವಿಕೆಟ್‌ಗೆ ಈ ಜೋಡಿ 16 ಓವರ್‌ಗಳಲ್ಲಿ 104 ರನ್ ಸೇರಿಸಿತು. ಈ ವೇಳೆ ರಾಹುಲ್ ಸಿಂಗ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಯುವ ಆಟಗಾರ ಅಮನ್ ರಾವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 154 ಎಸೆತಗಳಲ್ಲಿ 12 ಬೌಂಡರಿ, 13 ಸಿಕ್ಸರ್ ನೆರವಿನಿಂದ 200 ರನ್ ಸಿಡಿಸಿದರು. ಹೈದರಾಬಾದ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಸೇರಿಸಿತು. ಬಂಗಾಳ ತಂಡದ ಬೌಲರ್‌ಗಳು ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಬ್ಯಾಟರ್ಸ್
ಎನ್ ಜಗದೀಶನ್ (ತಮಿಳುನಾಡು), ಅರುಣಾಚಲ್ ಪ್ರದೇಶ ವಿರುದ್ಧ 277
ಪೃಥ್ವಿ ಶಾ (ಮುಂಬೈ), ಪುದುಚೆರಿ ವಿರುದ್ಧ, 227*
ರುತುರಾಜ್ ಗಾಯಕ್ವಾಡ್ (ಮಹಾರಾಷ್ಟ್ರ), ಉತ್ತರ ಪ್ರದೇಶ ವಿರುದ್ಧ, 220*
ಸಂಜು ಸ್ಯಾಮ್ಸನ್ (ಕೇರಳ), ಗೋವಾ ವಿರುದ್ಧ, 212*
ಸ್ವಸ್ತಿಕ್ ಸಮಲ್ (ಒಡಿಶಾ), ಸೌರಾಷ್ಟ್ರ ವಿರುದ್ಧ, 212
ಯಶಸ್ವಿ ಜೈಸ್ವಾಲ್ (ಮುಂಬೈ), ಜಾರ್ಖಂಡ್ ವಿರುದ್ಧ, 203
ಕರ್ಣ ಕೌಶಲ್ (ಉತ್ತರಾಖಂಡ), ಸಿಕ್ಕಿಂ ವಿರುದ್ಧ, 202
ಅಮನ್ ರಾವ್ (ಹೈದರಾಬಾದ್), ಬಂಗಾಳ ವಿರುದ್ಧ, 200*
ಸಮರ್ಥ ವ್ಯಾಸ್ (ಸೌರಾಷ್ಟ್ರ), ಮಣಿಪುರ್ ವಿರುದ್ಧ, 200
ಅಮನ್ ಖರೀದಿಸಿದ ರಾಜಸ್ಥಾನ ರಾಯಲ್ಸ್
ಅಬುಧಾಬಿಯಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ, ಹೈದರಾಬಾದ್‌ನ ಯುವ ಆಟಗಾರ ಅಮನ್ ರಾವ್ ಅವರನ್ನು ಖರೀದಿಸಿದೆ. ಬಲಗೈ ಬ್ಯಾಟರ್‌ಗೆ ರಾಯಲ್ಸ್ 30 ಲಕ್ಷ ನೀಡಿ ಖರೀದಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications