ಐಪಿಎಲ್ ಮಾಧ್ಯಮ ಹಕ್ಕು ಹರಾಜು: ಅಂಬಾನಿ, ವಾಲ್ಟ್ ಡಿಸ್ನಿ ಪೈಪೋಟಿಗೆ ಬೆಚ್ಚಿದ ಅಮೆಜಾನ್

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕು ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ಹಾಕೊಂಡಿದ್ದ ಅಮೆಜಾನ್.ಕಾಮ್ ಎದುರಾಳಿಗಳ ಸ್ಪರ್ಧೆಯಿಂದ ಬೆಚ್ಚಿಬಿದ್ದಿದೆ. ನಿರೀಕ್ಷೆ ಮೀರಿದ ಸ್ಪರ್ಧೆ ಎದುರಾಗುತ್ತಿರುವ ಕಾರಣದಿಂದಾಗಿ ಜೆಫ್ ಬೆಜೂಜ್ ಮಾಲಿಕತ್ವದ ಅಮೆಜಾನ್.ಕಾಮ್ ಹಿಂದಕ್ಕೆ ಸಲಿಯುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಹೀಗಾಗಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಲಿಟೆಡ್ ಹಾಗೂ ವಾಲ್ಟ್ ಡಿಸ್ನಿ ಮಾಲೀಕತ್ವದ ಹಾಟ್ ಸ್ಟಾರ್ ಮಧ್ಯೆ ಪೈಪೋಟಿ ನಡೆಯುವುದು ಖಚಿತ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ.
ಐಪಿಎಲ್‌ನ ಮಾಧ್ಯಮ ಹಕ್ಕು ಈ ಹಿಂದಿನ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಮಾರಾಟವಾಗುವ ನಿರೀಕ್ಷೆಯಿದೆ. 7.7 ಬಿಲಿಯನ್ ಡಾಲರ್(ಸುಮಾರು 60 ಸಾವಿರ ಕೋಟಿ) ಮೊತ್ತಕ್ಕೆ ಈ ಹಕ್ಕು ಮಾರಾಟವಾಗಬಹುದು ಎಂದು ಎನ್ನಲಾಗಿದೆ. ಹೀಗಾಗಿ ಈ ಸ್ಪರ್ಧೆಯಲ್ಲಿ ಮುಂದುವರಿಯುವುದಕ್ಕಿಂತ ಹಿಂದಕ್ಕೆ ಸರಿಯಲು ಅಮೆರಿಕಾದ ದಿಗ್ಗಜ ಸಂಸ್ಥೆ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಭಾರತದಲ್ಲಿ ಈಗಾಗಲೇ 6 ಬಿಲಿಯನ್ ಹೂಡಿಕೆ
ಅಮೆಜಾನ್ ಸಂಸ್ಥೆ ಭಾರತದಲ್ಲಿ ಈಗಾಗಲೇ 6 ಬಿಲಿಯನ್ ಡಾಲರ್‌ನಷ್ಟು ಭಾರತದಲ್ಲಿ ಹೂಡಿಕೆ ಮಾಡಿದೆ. ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ನೇರಪ್ರಸಾರದ ಹಕ್ಕಿಗೆ ಹೂಡಿಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂಬುದು ಸಂಸ್ಥೆಯ ಅಭಿಪ್ರಾಯ ಎನ್ನಲಾಗಿದೆ.

ಪೈಪೋಟಿಯಲ್ಲಿ ಮೂರು ಸಂಸ್ಥೆಗಳು
ಅಮೆಜಾನ್ ಸಂಸ್ಥೆ ಈ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿರುವುದರಿಂದಾಗಿ ಈಗ ಮೂರು ಸಂಸ್ಥೆಗಳ ಮಧ್ಯೆ ಪೈಪೋಟಿ ಉಂಟಾಗಿದೆ. ಅಂಬಾನಿ ಮಾಲಿಕತ್ವದ ರಿಲಯನ್ಸ್, ಡಿಸ್ನಿ ಹಾಗೂ ಸೋನಿ ಗ್ರೂಪ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಈ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವ ಸಂಸ್ಥೆಗೆ ಆನ್‌ಲೈನ್‌ನಲ್ಲಿ ಭಾರತೀಯ ಗ್ರಾಹಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಹಾಯ ಮಾಡುವುದರಲ್ಲಿ ಅನುಮಾನವಿಲ್ಲ. ಅತಿ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಭಾರತದಲ್ಲಿ ಯಾವ ಸಂಸ್ಥೆ ಈ ಬಿಡ್ಡಿಂಗ್ ಗೆಲ್ಲುತ್ತದೆಯೋ ಕ್ರೀಡಾ ವಲಯದಲ್ಲಿ ಮುಂಚೂಣಿಗೆ ಬರಲು ಈ ಬಿಡ್ಡಿಂಗ್ ಸಹಾಯ ಮಾಡುತ್ತದೆ.

ಕ್ರೀಡಾಲೋಕದ ಮೇಲೆ ಜೆಫ್ ಬೆಜೂಸ್ ಕಣ್ಣು
ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ನಿಟ್ಟಿಯಲ್ಲಿ ಜಾಗತಿಗ ಮಟ್ಟದ ಕ್ರೀಡಾ ಟೂರ್ನಿಗಳಲ್ಲಿ ಐಪಿಎಲ್‌ಅನ್ನು ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅಮೆಜಾನ್ ಸಂಸ್ಥೆ ಈ ಸ್ಪರ್ಧೆಯನ್ನು ಗೆಲ್ಲಲು ಬಯಸಿತ್ತು ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ಅಮೆರಿಕಾದ ದಿಗ್ಗಜ ಸಂಸ್ಥೆ ಯುರೋಪಿಯನ್ ಫುಟ್ಬಾಲ್ ಹಕ್ಕುಗಳಿಗಾಗಿ ನೂರಾರು ಮಿಲಿಯನ್ ಡಾಲರ್‌ಗಳನ್ನು ಸುರಿದಿದೆ. ಅಲ್ಲದೆ ಯುಎಸ್‌ನಲ್ಲಿ 2033ರವರೆಗಿನ ಪ್ರಸಾರಕ್ಕಾಗಿ 1 ಡಾಲರ್ ಬಿಲಿಯನ್‌ನ ಒಪ್ಪಂದವನ್ನು ಮಾಡಿಕೊಂಡಿದೆ.

50 ಕೋಟಿಗೂ ಅಧಿಕ ಪ್ರೇಕ್ಷಕರನ್ನು ಹೊಂದಿದೆ ಐಪಿಎಲ್
ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಐಪಿಎಲ್ ಟೂರ್ನಿ ಪ್ರತಿ ವರ್ಷ ಏಪ್ರಿಲ್ ಜೂನ್ ತಿಂಗಳಿನಲ್ಲಿ ಆಯೋಜನೆಯಾಗುತ್ತದೆ. ಹತ್ತು ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಬ್ರಿಟಿಷ್ ಕಾಮನ್‌ವೆಲ್ತ್‌ನ ಬಹುತೇಕ ರಾಷ್ಟ್ರಗಳ ಆಟಗಾರು ಭಾಗಿಯಾಗುತ್ತದೆ. ಸುಮಾರು 50 ಕೋಟಿಗೂ ಅಧಿಕ ವೀಕ್ಷಕರನ್ನು ಹೊಂದಿರುವ ಐಪಿಎಲ್ ಲೀಗ್ ಇಂಗ್ಲೀಷ್ ಸಾಕರ್ ಹಾಗೂ ನ್ಯಾಶನಲ್ ಫುಟ್ಬಾಲ್ ಲೀಗ್ ಟೂರ್ನಿಗಳ ವೀಕ್ಷಕರ ಸಂಖ್ಯೆಗಿಂತ ಮಾತ್ರವೇ ಹಿಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications