Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂ ಟರ್ನ್ ಹೊಡೆದ ರಾಯುಡು, ಮತ್ತೆ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ

ನಿವೃತ್ತಿ ಹಿಂಪಡೆಯೋಕೆ ರೆಡಿಯಾದರು ಅಂಬಟಿ ರಾಯುಡು..? | Ambati Rayudu | Oneindia Kannada
Ambati Rayudu does a U-turn, wants to play for Hyderabad again

ಹೈದರಾಬಾದ್ ಆಗಸ್ಟ್ 30: ಐಸಿಸಿ ಕ್ರಿಕೆಟ್ ವಿಶ್ವಕಪ್ ಆಡಿದ ಟೀಂ ಇಂಡಿಯಾದ ಆಡುವ ಅವಕಾಶ ಸಿಗದೆ ಹತಾಶರಾಗಿ ನಿವೃತ್ತಿ ಘೋಷಿಸಿದ್ದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಈಗ ಯೂ ಟರ್ನ್ ಹೊಡೆದಿದ್ದಾರೆ. ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಉತ್ಸುಕರಾಗಿರುವುದಾಗಿ ಅಧಿಕೃತವಾಗಿ ಮನವಿ ಮಾಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಹೈದರಾಬಾದ್ ಕ್ರಿಕೆಟ್ ಮಂಡಳಿ(ಎಚ್ ಸಿಎ) ಗೆ ಪತ್ರ ಬರೆದಿರುವ 33 ವರ್ಷ ವಯಸ್ಸಿನ ರಾಯುಡು, ತುಂಬಾ ಭಾವಾನಾತ್ಮಕವಾಗಿ ನಾನು ನಿವೃತ್ತಿ ಘೋಷಿಸಿದ್ದೆ, ಈಗ ಎಲ್ಲಾ ಬಗೆಯ ಕ್ರಿಕೆಟ್ ಮಾದರಿಯಲ್ಲಿ ಆಡಲು ಸಿದ್ಧ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ ಸಿಎ ಮುಖ್ಯ ಆಯ್ಕೆದಾರ ನಿಯೋಲ್ ಡೇವಿಡ್, ರಾಯುಡು ಇನ್ನೂ 5 ವರ್ಷ ಕ್ರಿಕೆಟ್ ಆಡುವ ಕ್ಷಮತೆ ಹೊಂದಿದ್ದಾರೆ ಎಂದಿದ್ದಾರೆ.

ಎಚ್ ಸಿಎ ಸಮಿತಿ ಆಡಳಿತಾಧಿಕಾರಿ ಪ್ರೊ ರತ್ನಾಕರ್ ಶೆಟ್ಟಿ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ನಿಯೋಲ್ ಡೇವಿಡ್, ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡುವ ಮಹದಾಸೆ ಇಟ್ಟುಕೊಂಡಿದ್ದ ಅಂಬಾಟಿ ರಾಯುಡು ಅವರಿಗೆ ಆಯ್ಕೆ ಸಮಿತಿ ತಮ್ಮನ್ನು ನಿರ್ಲಕ್ಷಿಸಿದ್ದು ಅಘಾತ ತಂದಿತ್ತು, ರಾಯುಡು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ನಂತರ ನಿವೃತ್ತಿ ಘೋಷಿಸಿದ್ದರು.

ಭಾರತ ತಂಡ ಎದುರಿಸುತ್ತಿದ್ದ ನಾಲ್ಕನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಕೊರತೆಯನ್ನು ರಾಯುಡು ತುಂಬಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ರಾಯುಡು ಅವರು ಆಯ್ಕೆಯಾಗಲಿಲ್ಲ.

ನಿವೃತ್ತಿ ಘೋಷಿಸಿದರೂ ದೇಶಿ ಟಿ20 ಟೂರ್ನಿಯಾದ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತಮಗೆ ಅವಕಾಶ ಸಿಗುವುದಿಲ್ಲ ಎಂದು ಅರಿತಿದ್ದ ರಾಯುಡು, ಏಕದಿನ ಪಂದ್ಯಗಳ ಮೇಲೆ ಗಮನ ಹರಿಸುವ ಸಲುವಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Story first published: Friday, August 30, 2019, 12:52 [IST]
Other articles published on Aug 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+