ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಎಗರಾಡಿದ ರಾಯುಡುಗೆ ನಿಷೇಧ

By Mahesh
Ambati Rayudu gets two-match ban for breaching BCCI’s Code of Conduct

ಬೆಂಗಳೂರು, ಜನವರಿ 31: ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯದಲ್ಲಿ ಅಂಪೈರ್ ನಿರ್ಣಯದ ವಿರುದ್ಧ ವಾಗ್ದಾಳಿ ನಡೆಸಿದ್ದು ಹೈದರಾಬಾದ್ ನಾಯಕ ಅಂಬಟಿ ರಾಯುಡುಗೆ ಮುಳುವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಂಬಟಿ ರಾಯುಡು ಅವರಿಗೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ಸಿಕ್ಕಿದೆ. ಹೀಗಾಗಿ ಮುಂಬರುವ ವಿಜಯ್ ಹಜಾರೆ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ಹೈದರಾಬಾದ್ ಪರ ರಾಯುಡು ಆಡುವಂತಿಲ್ಲ.

ಜನವರಿ 11, 2018ರಂದು ಕರ್ನಾಟಕ ಹಾಗೂ ಹೈದರಾಬಾದ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. 205 ರನ್‌ ಗುರಿ ಬೆನ್ನತ್ತಿದ ಹೈದರಾಬಾದ್‌ ಗೆಲುವಿನ ಹೊಸ್ತಿಲಲ್ಲಿ ಎಡವಿತು. 203 ರನ್‌ ಗಳಿಸಿ, 2 ರನ್ ಗಳಿಂದ ಪಂದ್ಯ ಕಳೆದುಕೊಂಡಿತು.

ಟಿ20 ಪಂದ್ಯದಲ್ಲಿ ಹೈಡ್ರಾಮಾ, ರಾಯುಡು ಪಡೆ ಮಣಿಸಿದ ವಿನಯ್ ಪಡೆಟಿ20 ಪಂದ್ಯದಲ್ಲಿ ಹೈಡ್ರಾಮಾ, ರಾಯುಡು ಪಡೆ ಮಣಿಸಿದ ವಿನಯ್ ಪಡೆ

ಹೈದರಾಬಾದಿನ ನಾಯಕ ಅಂಬಟಿ ರಾಯುಡು ಅವರು ಅಂಪೈರ್ ಗಳ ವಿರುದ್ಧ ಕಿಡಿಕಾರಿದರು. ಇದರಿಂದ ಮುಂದೆ ನಡೆಯಬೇಕಿದ್ದ ಆಂಧ್ರ ಹಾಗೂ ಕೇರಳ ಪಂದ್ಯವನ್ನು 13 ಓವರ್ ಗಳಿಗೆ ಸೀಮಿತಗೊಳಿಸಬೇಕಾಯಿತು.

ರಾಯುಡು ಪ್ರತಿಭಟನೆ ಏಕೆ: ರಾಯುಡು ಪ್ರತಿಭಟನೆ ಬಗ್ಗೆ ಚರ್ಚೆ ಕರ್ನಾಟಕದ ಇನ್ನಿಂಗ್ಸ್ ವೇಳೆಯಲ್ಲಿ ಹೈದರಾಬಾದಿನ ಫೀಲ್ಡರ್ ರೊಬ್ಬರು ಬೌಂಡರಿ ಗೆರೆ ತುಳಿದು ಫೀಲ್ಡ್ ಮಾಡಿದ್ದರು. ಆದರೆ, ಇದು ಅಂಪೈರ್ ಗಳ ಗಮನಕ್ಕೆ ಬಂದಿರಲಿಲ್ಲ. 2 ರನ್ ಮಾತ್ರ ನೀಡಲಾಗಿತ್ತು.

ಇದನ್ನು ಪ್ರಶ್ನಿಸಿದ ವಿನಯ್ ಕುಮಾರ್, ಹೈದರಾಬಾದ್ ಚೇಸ್ ಶುರುವಾಗುವುದರೊಳಗೆ 2ರನ್ ಸೇರಿಸುವಂತೆ ಅಂಪೈರ್ ಗಳನ್ನು ಕೇಳಿಕೊಂಡರು. ನ್ಯಾಯಯುತವಾದ ಬೇಡಿಕೆಯನ್ನು ಮನ್ನಿಸಿದರು, ಹೀಗಾಗಿ 205ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಪಂದ್ಯ ಸೋತಿದ್ದರಿಂದ ರಾಯುಡು ಈ ಬಗ್ಗೆ ಮತ್ತೆ ಕಿತ್ತಾಟ ಶುರು ಮಾಡಿದರು.

Story first published: Wednesday, January 31, 2018, 13:29 [IST]
Other articles published on Jan 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X