ಪಕ್ಷಕ್ಕೆ ಸೇರಿದ 9 ದಿನದಲ್ಲೇ ವೈಎಸ್‌ಆರ್‌ಸಿಪಿಯನ್ನು ಬಿಟ್ಟ ಅಂಬಟಿ ರಾಯುಡು
ಕ್ರಿಕೆಟ್ ಆಟಗಾರ ಅಂಬಟಿ ರಾಯುಡು ಇತ್ತಿಚಿಗೆ ವೈಎಸ್ ಆರ್ ಕಾಂಗ್ರೆಸ್ ಪಾರ್ಟಿ ಸೇರಿ ಸುದ್ದಿಯಲ್ಲಿದ್ದರು. ಆದರೆ, ಈಗ ಸೇರಿದ ಕೆಲವೇ ದಿನಗಳಲ್ಲಿ ಪಕ್ಷನವನ್ನು ಬಿಟ್ಟು ಸುದ್ದಿಯಲ್ಲಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಟಿ ರಾಯುಡು ವೈಎಸ್‌ಆರ್‌ಸಿಪಿಯನ್ನು ಬಿಡುವ ನಿರ್ಧಾರವನ್ನು ತಮ್ಮ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆ. ಈ ವೇಳೆ ತಾವು ವೈಎಸ್ ಆರ್ ಕಾಂಗ್ರೆಸ್ ಪಾರ್ಟಿ ಬಿಡುವುದಾಗಿ ಘೋಷಿಸಿದ್ದು, ಸದ್ಯ ರಾಜಕೀಯದಿಂದ ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಅಂಬಟಿ ರಾಯುಡು ವೈಎಸ್‌ಆರ್‌ಸಿಪಿಯನ್ನು ಸೇರಿದ್ದರು. ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಹಾಗೂ ಕೆ.ನಾರಯಣಸ್ವಾಮಿ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆ ಆಗಿದ್ದರು. ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಅಂಬಟಿ ರಾಯುಡು ಪಕ್ಷವನ್ನು ತೊರೆದಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ ಅವರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರಾ ಎಂಬ ಅನುಮಾನಗಳು ಮೂಡುವಂತೆ ಮಾಡಿವೆ.
ಈಗ ಕೊಂಚ ವಿರಾಮ ಪಡೆದು, ನಂತರ ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಅಂಬಟಿ ರಾಯುಡು ತೀರ್ಮಾನವನ್ನು ಮಾಡಬಹುದು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಅಂಬಟಿ ರಾಯುಡು ಒಬ್ಬರು. ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಆಧಾರವಾಗಿದ್ದ ಬ್ಯಾಟರ್ ಹಲವು ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಕಟ್ಟಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಇವರ ಕೊಡುಗೆಯೂ ಅಪಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications