For Quick Alerts
ALLOW NOTIFICATIONS  
For Daily Alerts
 

ಪ್ರಥಮ ದರ್ಜೆ ಕ್ರಿಕೆಟ್ ಗೆ ಅಂಬಟಿ ರಾಯುಡು ವಿದಾಯ

Ambati Rayudu retires from first-class cricket; to focus on one-dayers, T20s

ಹೈದರಾಬಾದ್, ನವೆಂಬರ್ 04: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಆರಂಭಕ್ಕೂ ಮುನ್ನವೇ ವಿದಾಯ ಘೋಷಿಸಿದ್ದಾರೆ. ಏಕದಿನ ಕ್ರಿಕೆಟ್ ಹಾಗೂ ಟಿ20ಐ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ.

33 ವರ್ಷ ವಯಸ್ಸಿನ ರಾಯುಡು ಅವರು ಟೆಸ್ಟ್ ಕ್ರಿಕೆಟ್ ಹಾಗೂ ರಣಜಿ ಟ್ರೋಫಿಗೆ ನಿವೃತ್ತಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯ ಹಾಗೂ ಟಿ-20 ಪಂದ್ಯಗಳಿಗೆ ಲಭ್ಯರಾಗಿರುತ್ತಾರೆ.

ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬಗ್ಗೆ ಹೈದರಾಬಾದ್ ನ ಕ್ರಿಕೆಟ್ ಅಸೋಸಿಯೇಶನ್ ಗೆ ರಾಯುಡು ಪತ್ರ ಬರೆದಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಆಡಲು ಅವಕಾಶ ನೀಡಿದ ಬಿಸಿಸಿಐ, ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಶನ್, ಬರೋಡಾ ಹಾಗೂ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಗೆ ರಾಯುಡು ಧನ್ಯವಾದ ಹೇಳಿದ್ದಾರೆ.

ಹೈದ್ರಾಬಾದ್ ಪರ ಆಟವಾಡಿದ್ದು, ನನಗೆ ಗೌರವದ ವಿಷಯವಾಗಿದೆ. ಕ್ರಿಕೆಟ್ ಅಸೋಸಿಯೇಷನ್, ಆಟಗಾರರು, ಕೋಚ್ ಹಾಗೂ ಅಧಿಕಾರಿಗಳನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಉತ್ತಮ ಪ್ರದರ್ಶನ ನೀಡಿದ ರಾಯುಡು ಅವರಿಗೆ ಭಾರತದ ಪರ ಏಕದಿನ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿತು.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಶತಕ, ಅರ್ಧಶತಕ ಸೇರಿದಂತೆ 217ರನ್ ಗಳಿಸಿದ್ದರು. ಭಾರತದ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆ ಎಂದು ಪರಿಗಣಿಸಲಾಗಿದೆ. ವಿಶ್ವಕಪ್ ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ 8 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಿದ್ದಾರೆ.

ಸುಮಾರು 17 ವರ್ಷಗಳ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 97 ಪಂದ್ಯಗಳನ್ನಾಡಿ 6151ರನ್, 210 ಗರಿಷ್ಠ ಮೊತ್ತ, 16 ಶತಕ, 45.56ರನ್ ಸರಾಸರಿ ಹೊಂದಿದ್ದಾರೆ. 45 ಏಕದಿನ ಕ್ರಿಕೆಟ್ ನಲ್ಲಿ 51.67ರನ್ ಸರಾಸರಿಯಂತೆ 1447ರನ್ ಗಳಿಸಿದ್ದಾರೆ.

Story first published: Sunday, November 4, 2018, 9:50 [IST]
Other articles published on Nov 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+