ರಾಜಕೀಯಕ್ಕೆ ಅಂಬಟಿ ರಾಯುಡು ಎಂಟ್ರಿ, ಇಲ್ಲಿದೆ ರಾಜಕೀಯ ಪ್ರವೇಶಿಸಿದ ಆಟಗಾರರ ಪಟ್ಟಿ
ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಕ್ರಿಕೆಟ್ ಆಡಿದ್ದ ಅಂಬಟಿ ರಾಯುಡು ಮೈದಾನ ಬಿಟ್ಟು ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
37 ವರ್ಷದ ಅಂಬಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಡಿಸೆಂಬರ್ 28 ರಂದು ಜಗನ್ ಮೋಹನ್ ರೆಡ್ಡಿ ಅವರ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡರು. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ ರಾಯುಡು ಸೇರಿದ್ದರೆ.

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಂತೆಯೇ ಅಂಬಟಿ ರಾಯುಡು ರಾಜಕೀಯ ಪ್ರವೇಶದ ಸಮಯ ಪಕ್ವಾಗಿದೆ. ಕೆಲವೇ ತಿಂಗಳುಗಳ ನಂತರ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗ ರಾಯುಡುಗೆ ಪಕ್ಷ ಲೋಕಸಭೆ ಟಿಕೆಟ್ ನೀಡಲಿದೆಯೇ ಎಂಬ ಪ್ರಶ್ನೆಗಳು ಈಗ ಎದ್ದಿವೆ.
ರಾಯುಡು ರಾಜಕೀಯಕ್ಕೆ ಪ್ರವೇಶಿಸಿದ ಮೊದಲ ಕ್ರಿಕೆಟಿಗನಲ್ಲ. ಅವರಿಗಿಂತ ಮುಂಚೆಯೇ, ಅನೇಕ ಕ್ರಿಕೆಟಿಗರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಗೆದ್ದಿದ್ದಾರೆ ಮತ್ತು ದೇಶದ ಸಂಸತ್ತಿನಲ್ಲೂ ಕುಳಿತಿದ್ದಾರೆ. ಅಂತಹ ಕೆಲವು ಭಾರತೀಯ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.
ಮೊಹಮ್ಮದ್ ಅಜರುದ್ದೀನ್
ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿಗೆ ಕಾಂಗ್ರೆಸ್ ಪಕ್ಷವು 2009 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಮತ್ತು ಅವರು ಗೆದ್ದರು. 2018 ರಲ್ಲಿ, ಅಜರುದ್ದೀನ್ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು.

ಸಚಿನ್ ತೆಂಡೂಲ್ಕರ್
ಭಾರತ ರತ್ನ ಪುರಸ್ಕೃತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ದೇವರು ಎಂದು ಪರಿಗಣಿಸಲ್ಪಡುತ್ತಾರೆ. ಇವರು ರಾಜ್ಯಸಭಾ ಸದಸ್ಯರೂ ಆಗಿದ್ದರು. ಆದರೆ, ಅವರು ಸಕ್ರಿಯ ರಾಜಕಾರಣಕ್ಕೆ ಸೇರಲೇ ಇಲ್ಲ. ಸಂಸತ್ತಿನಲ್ಲಿ ಅವರ ಹಾಜರಾತಿ ದಾಖಲೆಯೂ ಕಡಿಮೆ ಇತ್ತು.
ಹರ್ಭಜನ್ ಸಿಂಗ್
ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಫ್ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹೆಸರೂ ಸೇರಿದೆ. ಕ್ರಿಕೆಟ್ ತೊರೆದ ನಂತರ, ಅವರು ಪ್ರಸ್ತುತ ಪಂಜಾಬ್ ಸರ್ಕಾರದ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಮತ್ತು ನಂತರ ರಾಜ್ಯಸಭಾ ಸದಸ್ಯರಾದರು.
ಗೌತಮ್ ಗಂಭೀರ್
ಈ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಎರಡು ವಿಶ್ವಕಪ್ ಗೆಲ್ಲುವಂತೆ ಮಾಡಿದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೆಸರೂ ಎದ್ದು ಕಾಣುತ್ತದೆ. ಅವರು ಪೂರ್ವ ದೆಹಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.

ನವಜೋತ್ ಸಿಂಗ್ ಸಿಧು
ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸಹ ಕ್ರಿಕೆಟ್ ಅಂಗಳದಿಂದ ರಾಜಕೀಯ ಅಂಗಳಕ್ಕೆ ಪ್ರವೇಶಿಸಿದರು. ನವಜೋತ್ ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರು 2004 ರಲ್ಲಿ ಬಿಜೆಪಿ ಸೇರಿದರು ಮತ್ತು ಅಮೃತಸರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅವರು ಚುನಾವಣೆಯಲ್ಲಿ ಗೆದ್ದರು ಮತ್ತು 2014 ರವರೆಗೆ ಅಮೃತಸರದ ಸಂಸದರಾಗಿದ್ದರು. ಅದರ ನಂತರ ಅವರು ರಾಜ್ಯಸಭಾ ಸದಸ್ಯರಾದರು, ಆದರೆ ಅಲ್ಲಿಂದ ರಾಜೀನಾಮೆ ನೀಡಿ 2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications